ಕಲ್ಬುರ್ಗಿ ಜಿಲ್ಲೆ ಯಡ್ರಾಮಿ ತಾಲೂಕಿನ ಮಳ್ಳಿ ಗ್ರಾಮದಲ್ಲಿ ನೂತನ ಮಹಿಳಾ ಘಟಕದ ಅಧ್ಯಕ್ಷರ ಆಯ್ಕೆ ಜರುಗಿತು.
ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಸನ್ಮಾನ್ಯ ಶ್ರೀ ಟಿ ಎ ನಾರಾಯಣಗೌಡ ಇವರ ಸಾರಥ್ಯದಲ್ಲಿ ಕಲಬುರಗಿಯ ಜಿಲ್ಲಾಧ್ಯಕ್ಷರಾದ ಸನ್ಮಾನ್ಯ ಶ್ರೀ ಆನಂದ್ ದೊಡ್ಮನಿ ಅವರ ಮಾರ್ಗದರ್ಶನದಂತೆ ಯಡ್ರಾಮಿ ತಾಲೂಕು ಅಧ್ಯಕ್ಷರಾದ ದೇವಿಂದ್ರಪ್ಪ ಗೌಡ ಎನ್ ಪೊಲೀಸ್ ಪಾಟೀಲ್ ಇವರ ನೇತೃತ್ವದಲ್ಲಿ ದಿನಾಂಕ 20.12. 2024 ರಂದು ಯಡ್ರಾಮಿ ತಾಲೂಕು ಮಹಿಳಾ ಘಟಕದ ತಾಲೂಕು ಅಧ್ಯಕ್ಷರನ್ನಾಗಿ ತನುಜಾ ಕದಂ ಅವರನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಸಂಘಟನೆಯ ಹಿರಿಯರಾದ ಉಸ್ಮಾನ್ ಸಾಬ್ ಬಡಿಗೇರ್, ತಾಲೂಕು ಉಪಾಧ್ಯಕ್ಷರಾದ ನಿಂಗಣ್ಣ ಹಾದಿಮನಿ, ನಗರ ಘಟಕದ ಅಧ್ಯಕ್ಷರಾದ ರೇವಣಸಿದ್ಧ ನ್ಯಾವನೂರ್, ಅಂತರ್ಜಾಲ ತಾಣದ ಸಂಚಾಲಕರಾದ ತಿಪ್ಪಣ್ಣ ಜಾಲಹಳ್ಳಿ, ಮಳ್ಳಿ ರೈತ ಘಟಕ ತಾಲೂಕು ತಾಲೂಕು ಸಂಚಾಲಕರಾದ ವಸಿಂ ನಾಯ್ಕೊಡಿ, ವಲಯ ಅಧ್ಯಕ್ಷರಾದ ಶಾಂತಪ್ಪ ಕುದುರೆಕಾರ್,ಮಳ್ಳಿ ವಲಯ ಉಪಾಧ್ಯಕ್ಷರಾದ ಸಂಗಣ್ಣ ಹಣಜಿಗಿ ಹಾಗೂ ಸಂಘಟನೆಯ ಹಲವು ಕಾರ್ಯಕರ್ತರು ಪಾಲ್ಗೊಂಡಿದ್ದರು.
ವರದಿ ತಿಪ್ಪಣ್ಣ ಜಾಲಹಳ್ಳಿ
