ವಿಜಯನಗರ ಜಿಲ್ಲೆ ಕೊಟ್ಟೂರು ತಾಲ್ಲೂಕು ಛಲವಾದಿ ಮಹಾಸಭಾದ ಅಧ್ಯಕ್ಷರಾದ ಹ್ಯಾಳ್ಯ ಗ್ರಾಮದ ಮಂಜುನಾಥ .ಡಿ ಇವರಿಗೆ ಪ್ರತಿಷ್ಠಿತ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಡಿ.25 ರಂದು ಬೆಂಗಳೂರಿನ ರವೀಂದ್ರಕಲಾಕ್ಷೇತ್ರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಕನ್ನಡ ಫಿಲಂ ಚೇಂಬರ್(ರಿ.) ವತಿಯಿಂದ ನೀಡಲಾಗುತ್ತಿದೆ. ಇದಕ್ಕಾಗಿ ಸುದ್ದಿಗಾರರ ಜೊತೆ ಮಾತನಾಡಿದ ಇವರು ನನ್ನ ಸಣ್ಣ ಸೇವೆಯನ್ನು ಗುರುತಿಸಿ ಪ್ರಶಸ್ತಿಯನ್ನು ನೀಡಿಲು ಅಯ್ಕೆ ಮಾಡಿರುವ ರಾಜ್ಯಧ್ಯಕ್ಷರಾದ ರವೀಂದ್ರ ಎಂ ಎಸ್ ಮತ್ತು ಅವರ ಸಂಘದೊಡೆಯರಿಗೆ ತುಂಬು ಹೃದಯದ ಧನ್ಯವಾದಗಳನ್ನು ತಿಳಿಸಿದರು.
