ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ನಾಟಕಗಳಿಂದ ಸಮಾಜ ತಿದ್ದುವ ಕಾರ್ಯವಾಗಬೇಕಿದೆ : ನಂಜಯ್ಯನಮಠ

ಬಾಗಲಕೋಟೆ : ಹೊಸ ಅಲೆಯ ನಾಟಕಗಳಿಂದ ಸಮಾಜ ತಿದ್ದುವ ಕಾರ್ಯವಾಗಬೇಕಾಗಿದೆ ಎಂದು ಮಾಜಿ ಶಾಸಕ ಎಸ್.ಜಿ ನಂಜಯ್ಯನಮಠ ಹೇಳಿದರು.
ಕ.ಸಾ.ಪ ಹುನಗುಂದ ತಾಲೂಕು ಘಟಕ ,ಮನುಜಮತ ಫೌಂಡೇಶನ್ ಸಹಯೋಗದಲ್ಲಿ ನಿರ್ದಿಂಗತ ತಂಡ ಪ್ರಚುರ ಪಡಿಸಿದ ಜರ್ಮನ್ ದೇಶದ ಕಥೆ ಆಧಾರಿತ ತಿಂಡಿಗೆ ಬಂದ ತುಂಡೇರಾಯ ನಾಟಕದ ಉದ್ಘಾಟನೆ ಮಾಡಿ ಮಾತನಾಡಿದ ಅವರು ನಾಟಕ ಜನರ ಮನಮುಟ್ಟುವ ಮಾಧ್ಯಮವಾಗಿ, ಆಂಗಿಕ ಅಭಿನಯ ಮೂಲಕ ಸಾಮಾಜಿಕ ಸಮಸ್ಯೆಗಳನ್ನು ಜನತೆಗೆ ಮುಟ್ಟಿಸುವ ಪ್ರಯತ್ನವನ್ನು ಹೊಸ ಅಲೆಯ ನಾಟಕಕಾರರು ,ತಂಡಗಳು ಮಾಡುತ್ತಿವೆ ಎಂದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಸಹಕಾರಿ ಧುರೀಣ ಕಲಬುರಗಿ ಮಾತನಾಡಿ ಗ್ರಾಮೀಣ ಭಾಗದಲ್ಲಿ ಇಂತಹ ನಾಟಕ ಪ್ರದರ್ಶನ ಸ್ವಾಗತಾರ್ಹ ಜೊತೆಗೆ ಅಭಿನಯ, ವಿಷಯ ವಸ್ತು ಆಧಾರಿತ ಇಂತಹ ನಾಟಕಗಳು ರಚನೆಯಾಗಿರುತ್ತವೆ ಇವುಗಳ ಪ್ರದರ್ಶನದಿಂದ ದೈನಂದಿನ ಬದುಕಿನ ಬವಣಿ ಅರ್ಥಮಾಡಿಕೊಳ್ಳಲು ಸಾಧ್ಯ ಎಂದರು.
ಕ.ಸಾ.ಪ ಅಧ್ಯಕ್ಷ ಮಲ್ಲಿಕಾರ್ಜುನ ಸಜ್ಜನ , ಮನುಜಮತ ಫೌಂಡೇಶನ್ ಅಧ್ಯಕ್ಷ ಪಾಂಡುರಂಗ ಮಾಶಾಳ, ನಾಗೇಂದ್ರ ನಿರಂಜನ, ಅಶೋಕ ಚಿಕ್ಕಗಡೆ, ವಲಯ ಕ.ಸಾ.ಪ ಅಧ್ಯಕ್ಷ ನರಸಿಂಹಮೂರ್ತಿ, ಸಮಾಜಸೇವಕ ಕೃಷ್ಣ ರಾಮದುರ್ಗ, ನಾಗರಾಜ ಕಲಬುರ್ಗಿ ,ಮಾನು ಹೊಸಮನಿ, ಮಹಾಂತೇಶ ಕಟಾಪೂರ ಇದ್ದರು.

ಇದೇ ಸಂದರ್ಭದಲ್ಲಿ ನಾಟಕ ಅಕಾಡೆಮಿ ಸದಸ್ಯ ಕೆ.ಎಂ ಬನ್ನಟ್ಟಿ, ರಂಗ ಸಮಾಜ ಸದಸ್ಯ ಮಹಾಂತೇಶ ಗಜೇಂದ್ರಗಡ, ಇಳಕಲ್ ಕ.ಸಾ.ಪ ಅಧ್ಯಕ್ಷ ಮಹಾದೇವ ಕಂಬಾಗಿ, ಧುತ್ತರಗಿ ಟ್ರಸ್ಟ್ ನೂತನ ಸದಸ್ಯರಾದ ವಿಶ್ವನಾಥ್ ವಂಶಾಕೃತಮಠ,ಡಾ. ನಾಗರಾಜ ನಾಡಗೌಡ್ರ, ಚಿದಾನಂದ ಧೂಪದ, ಸುನಂದಾ ಕಂದಗಲ್ಲ, ಬಾಗಲಕೋಟೆ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ರಮೇಶ ಬದ್ನೂರ, ಸಾಹಿತಿ ಸಿದ್ದಲಿಂಗಪ್ಪ ಬೀಳಗಿ ಯವರನ್ನು ಸನ್ಮಾನಿಸಲಾಯಿತು.
ಟಿ.ಬಿ.ಭಜಂತ್ರಿ ಸ್ವಾಗತಿಸಿದರು, ಮಹಾಂತೇಶ ಕಂಬಾರ ನಿರೂಪಿಸಿ, ರವಿ ರಾಮಥಾಳ ವಂದಿಸಿದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ