ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಪಾಲಕರ ಸಭೆ ಮತ್ತು ಫಲಿತಾಂಶ ಸುಧಾರಣೆ ಕಾರ್ಯಕ್ರಮ

ಕೊರತೆಗಳು ನೆಪವಾಗದೇ ಜೀವನ ಪಥವಾಗಬೇಕು-ಸಿದ್ದಲಿಂಗಪ್ಪ ಬೀಳಗಿ

ಬಾಗಲಕೋಟೆ/ಹುನಗುಂದ: ಜೀವನದಲ್ಲಿ ಎದುರಾಗುವ ಸಮಸ್ಯೆ ಮತ್ತು ಕೊರತೆಗಳನ್ನು ಸವಾಲಿನಂತೆ ಎದುರಿಸುವವರು ಮಾತ್ರ ಸಾಧಕರೆನಿಸಿಕೊಳ್ಳಲು ಸಾಧ್ಯ ಎಂದು ನಿವೃತ್ತ ಉಪನ್ಯಾಸಕ, ಹಿರಿಯ ಲೇಖಕರಾದ ಸಿದ್ದಲಿಂಗಪ್ಪ ಬೀಳಗಿ ಅಭಿಪ್ರಾಯ ಪಟ್ಟಿದ್ದಾರೆ.
ಇಲ್ಲಿನ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಏರ್ಪಡಿಸಲಾಗಿದ್ದ ಪಾಲಕರ ಸಭೆ ಮತ್ತು ಫಲಿತಾಂಶ ಸುಧಾರಣೆ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿದ ಅವರು ಶಿಸ್ತು, ಬದ್ಧತೆ ಮತ್ತು ಗುರಿ ಇಲ್ಲದ ಜೀವನ ಅರ್ಥಹೀನವಾದುದಾಗಿದ್ದು ಸ್ಪಷ್ಟ ಗುರಿ ಮತ್ತು ನಿರಂತರ ಅಧ್ಯಯನದಿಂದ ನಾವಿಟ್ಟುಕೊಂಡ ಗುರಿ ತಲುಪಬಹುದು ಪರೀಕ್ಷೆಗಳನ್ನು ಭಯದಿಂದ ಎದುರಿಸುವ ಬದಲು ಹಬ್ಬದಂತೆ ಸ್ವಾಗತಿಸಬೇಕು ಕೀಳರಿಮೆ ಕಿತ್ತೆಸೆದಾಗ ಮಾತ್ರ ಯಶಸ್ಸಿನ ಶಿಖರವನ್ನು ಏರಬಹುದು. ಮಕ್ಕಳ ಶೈಕ್ಷಣಿಕ ಪ್ರಗತಿಯಲ್ಲಿ ಪಾಲಕರ ಪಾತ್ರವೂ ಮಹತ್ತರವಾಗಿದ್ದು ಪಾಲಕರಾದವರು ಮಕ್ಕಳ ಅಧ್ಯಯನಕ್ಕೆ ಪೂರಕವಾದ ವಾತಾವರಣ ಕಲ್ಪಿಸಿಕೊಡುವುದರೊಂದಿಗೆ ಅವರ ಫಲಿತಾಂಶ ಹೆಚ್ಚಳಕ್ಕೆ ಸಹಕರಿಸಬೇಕೆಂದರು. ಕಲಾ ವಿಭಾಗದ ಪರವಾಗಿ ಛಾಯಾ ಪುರಂದರೆ, ವಿಜ್ಞಾನ ವಿಭಾಗದ ಪರವಾಗಿ ಎಚ್.ಟಿ.ಅಗಸಿಮುಂದಿನ ಮತ್ತು ವಾಣಿಜ್ಯ ವಿಭಾಗದ ಪರವಾಗಿ ಶ್ರೀಧರ ಕಾವಲಿ ವಿದ್ಯಾರ್ಥಿಗಳ ಪ್ರಗತಿ ಕುರಿತು ಮಾತನಾಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜು ಅಭಿವೃದ್ಧಿ ಸಮಿತಿಯ ಹಿರಿಯ ಸದಸ್ಯರಾದ ಚಂದ್ರಶೇಖರ ಚಟ್ಟಿಹಾಳ ಅವರು ವಿದ್ಯಾರ್ಥಿ ಜೀವನ ಅದರಲ್ಲೂ ಪಿಯುಸಿ ಹಂತದಲ್ಲಿರುವ ತಾವು ಸತತ ಅಧ್ಯಯನ ಮಾಡಿ ತಮ್ಮ ಬದುಕನ್ನು ರೂಪಿಸಿಕೊಳ್ಳಬೇಕೆಂದರು. ಪಾಲಕರ ಪರವಾಗಿ ಜಗದೀಶ ಹೊಸಮನಿ, ರಾಜಮುನ್ನಿ ಕಡಿವಾಲ ಮತ್ತು ಹನಮಪ್ಪ ಕಮತರ ವಿದ್ಯಾರ್ಥಿಗಳ ಪರವಾಗಿ ವಾಹೀದ್ ಕಡಿವಾಲ ಮಾತನಾಡಿದರು. ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರಾದ ಮುತ್ತಣ್ಣ ಗಂಜಿಹಾಳ, ಅಶ್ವಿನಿ ಹುಚನೂರ, ಉಪನ್ಯಾಸಕಿ ಛಾಯಾ ಪುರಂದರೆ, ಪಿ.ಬಿ.ಧುತ್ತರಗಿ ಟ್ರಸ್ಟಿನ ಅಧ್ಯಕ್ಷ ಎಸ್ ಕೆ.ಕೊನೆಸಾಗರ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಪಿ.ಬಿ.ಧುತ್ತರಗಿ ಟ್ರಸ್ಟಿಗೆ ಅಧ್ಯಕ್ಷರಾಗಿ ಆಯ್ಕೆಯಾದ ಎಸ್ ಕೆ.ಕೊನೆಸಾಗರ ಮತ್ತು ವಿಶೇಷ ಉಪನ್ಯಾಸ ನೀಡಿದ ಸಿದ್ದಲಿಂಗಪ್ಪ ಬೀಳಗಿ ಅವರನ್ನು ಕಾಲೇಜಿನ ಪರವಾಗಿ ಗೌರವಿಸಲಾಯಿತು. ಸನ್ಮಾನ ಪರ ಮಾತನಾಡಿದ ಎಸ್ಕೆ.ಕೊನೆಸಾಗರರವರು ಈ ಸಂಸ್ಥೆಯಲ್ಲಿ ಅಧ್ಯಯನ ಮಾಡುವ ವಿದ್ಯಾರ್ಥಿಗಳು ಸಾಧಕರ ಜೀವನ ಚರಿತ್ರೆಯನ್ನು ಓದಿ ಮಾದರಿ ವ್ಯಕ್ತಿಗಳಾಗಬೇಕೆಂದರು.
ಸೇವಂತಿ ಬೆಣಗಿ ಪ್ರಾರ್ಥಿಸಿದರು, ಪ್ರಭಾರ ಪ್ರಾಚಾರ್ಯ ಶರಣಪ್ಪ ಹೂಲಗೇರಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಐ.ಎಚ್.ನಾಯಕ ವಂದಿಸಿದರು, ಡಾ.ಎನ್.ವಾಯ್.ನದಾಫ್ ನಿರೂಪಿಸಿದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ