ಹುನಗುಂದ: ನಗರದ ಹಿರಿಯ ರಂಗಕರ್ಮಿ ಹಾಗೂ ಲೇಖಕ ಎಸ್ಕೆ ಕೊನೆಸಾಗರ ಸೂಳೇಭಾವಿಯ ಪಿ.ಬಿ.ಧುತ್ತರಗಿ ಟ್ರಸ್ಟ್ ನ ನೂತನ ಅಧ್ಯಕ್ಷರಾಗಿ ಸರ್ಕಾರದಿಂದ ನೇಮಕಗೊಂಡಿದ್ದಾರೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹೊರಡಿಸಿರುವ ಆದೇಶದಲ್ಲಿ ಮೂರು ವರ್ಷಗಳ ಅವಧಿಗೆ ಇವರನ್ನು ನೇಮಕ ಮಾಡಿದೆ. ಇವರನ್ನು ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ವಿಜಯಾನಂದ ಕಾಶಪ್ಪನವರ, ತಾಲೂಕಿನ ರಂಗ ಸಂಘಟನೆಗಳು ಮತ್ತು ಲೇಖಕರು ಅಭಿನಂದಿಸಿದ್ದಾರೆ.
