
ಬಾಗಲಕೋಟೆ / ಹುನಗುಂದ : ನಗರದ ಜಾನ್ ಡಿಯರ್ ಅಧಿಕೃತ ಮಾರಾಟಗಾರರಾದ ಶ್ರೀ ಸಾಯಿ ಅಗ್ರಿಕಲ್ಚರಲ್ ಟ್ರೇಡರ್ಸ ಇವರಿಂದ ಜಾನ್ ಡಿಯರ ನೂತನ್ ಶೋರೂಂ ಮತ್ತು ಸೇವಾ ಕೇಂದ್ರವನ್ನು ಎನ್.ಎಚ್ ೫೦ ಸರ್ವಿಸ್ ರಸ್ತೆ ವಿದ್ಯಾನಗರ ಹುನಗುಂದದಲ್ಲಿ ಇತ್ತೀಚೆಗೆ ಉದ್ಘಾಟನೆಯಾಯಿತು.
ಕಾರ್ಯಕ್ರಮವನ್ನು ಕೃಷ್ಣಮೂರ್ತಿ ಮತಿವನನ ಏರಿಯಾ ಬ್ಯುಸಿನೆಸ್ ಮ್ಯಾನೇಜರ ಕರ್ನಾಟಕ ನಾರ್ಥ ಜಾನ್ ಡಿಯರ್ ಇಂಡಿಮಾ. ಪ್ರೈ.ಲಿ. ಇವರು ಉದ್ಘಾಟಿಸಿ ರೈತರಿಗೆ ಅನುಕೂಲ ಮಾಡಿಕೊಡಲು ತಾಲೂಕಿಗೊಂದು ಶೋರೂಂನ್ನು ಪ್ರಾರಂಭಿಸಿದ್ದೇವೆ ಎಂದು ಅಭಿಪ್ರಾಯ ಪಟ್ಟರು.
ಕರ್ನಾಟಕ ಕಸ್ಟಮರ್ ಸಪೋರ್ಟ್ ಮ್ಯಾನೇಜರ್ ದೀಪಕ ಕುಮಾರ ಇವರು ವರ್ಕ್ಸ ಶಾಪ್ ಉದ್ಘಾಟಿಸಿ ಮಾತನಾಡಿ ಬಾಗಲಕೋಟೆ ಜಿಲ್ಲೆಯಲ್ಲಿ ಜಾನ್ ಡಿಯರ್ ಎಂ.ಡಿ ಶಿವನಗೌಡ ರಂಗನಗೌಡರ ಇವರ ಮಾಲೀಕತ್ವದಲ್ಲಿ ಅತೀ ಹೆಚ್ಚು ಜಾನ್ ಡಿಯರ್ ಟ್ಯಾಕ್ಟರಗಳು ಮಾರಾಟವಾಗಿದ್ದು ಅವರ ಕಾರ್ಯವೈಖರಿಗೆ ಸಾಕ್ಷಿಯಾಗಿದೆ. ಅವರು ರೈತರಿಗೆ ಹೆಚ್ಚು ಅನುಕೂಲ ಮಾಡಿಕೊಟ್ಟಿದ್ದು ಅವರ ಸೇವಾ ಮನೋಭಾವನೆ ಎಲ್ಲರು ಮೆಚ್ಚುವಂತಹದ್ದು ಎಂದು ವಿವರಿಸಿದರು.
ಡೀಲರ್ ಡೆವಲಪ್ ಮೆಂಟ್ ಮ್ಯಾನೇಜರ್ ರಾಜೇಶ ಜೋತಿಮನಿಯವರು ಅತಿಥಿಗಳಾಗಿ ಆಗಮಿಸಿ ಜಾನ್ ಡಿಯರ್ ಟ್ಯಾಕ್ಟರಗಳ ವಿಶೇಷತೆಗಳ ಬಗ್ಗೆ ವಿವರಿಸಿ ಮುಂದುವರೆದು ರೈತರ ಕೆಲಸಗಳಿಗೆ ತಕ್ಕಂತೆ ಜಾನ್‌ಡಿಯರ ಸಂಸ್ಥೆ ಟ್ಯಾಕ್ಟರಗಳನ್ನು ಬಿಡುಗಡೆ ಮಾಡುತ್ತದೆ. ಬೇರೆ ಟ್ಯಾಕ್ಟರಗಳಿಗೆ ಹೋಲಿಸಿದರೆ ಜಾನಡಿಯರ ಟ್ಯಾಕ್ಟರ ಟೆಕನಾಲಜಿಯಲ್ಲಿ ಅತ್ಯಂತ ಮಂಚೂಣಿ ಸ್ಥಾನದಲ್ಲಿದೆ. ವರ್ಷಪೂರ್ತಿ ಸುಲಭ ಬಡ್ಡಿ ದರದಲ್ಲಿ ರೈತರಿಗೆ ಸಾಲ ಸೌಲಭ್ಯ ಕೂಡಾ ಸಿಗುತ್ತದೆ. ಎಂದು ಹೇಳಿದರು.
ಮೂಲತಃ ಹುನಗುಂದ ತಾಲೂಕಿನ ತಿಮ್ಮಾಪೂರದ ಶಿವನಗೌಡ ರಂಗನಗೌಡರ ಈಗ ಶ್ರೀ ಸಾಯಿ ಅಗ್ರಿಕಲ್ಟರಲ್ ಟ್ರೇಡರ್ಸ ಮುಧೋಳದ ಎಂ.ಡಿಯವರು ಅವರು ಮಾತನಾಡಿ ಉತ್ತರ ಕರ್ನಾಟಕದಲ್ಲಿ ಶ್ರೀ ಸಾಯಿ ಅಗ್ರಿಕಲ್ಟರ್ ಸಂಸ್ಥೆಯ ಅತ್ಯಂತ ಹೆಚ್ಚು ಟ್ಯಾಕ್ಟರ್ ಮಾರಾಟ ಮಾಡುವ ಸಂಸ್ಥೆಯಾಗಿದೆ ಬಾಗಲಕೋಟ ಜಿಲ್ಲೆಯಲ್ಲಿ ಪ್ರಥಮ ಸ್ಥಾನದಲ್ಲಿದೆ. ಕಳೆದ ೧೨ ವರ್ಷದಿಂದ ನಿರಂತರವಾಗಿ ರೈತರ ಸೇವೆಯಲ್ಲಿ ನಮ್ಮ ಸಂಸ್ಥೆ ತೊಡಗಿಸಿಕೊಂಡಿದೆ ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಸಂಸ್ಥೆಯ ಶಾಖೆಗಳು ಇವೆ. ಸರಿ ಸುಮಾರು ವರ್ಷಕ್ಕೆ ಆರನೂರರಿಂದ ಆರನೂರಾ ಐವತ್ತು ಟ್ಯಾಕ್ಟರಿಗಳ ಮಾರಾಟವಾತ್ತಿವೆ. ಇಂದು ಹುನಗುಂದ ಪಟ್ಟಣದಲ್ಲಿ ಹೊಸ ನೂತನ ಶೋರೂಂ ಲೋಕಾರ್ಪಣೆಗೊಳಿಸಿರುವುದು ಸಂತಸದ ವಿಷಯ ಹೊಸ ಟ್ಯಾಕ್ಟರಿಗಳಾದ ೪೫ ಡಿ,ಜಿ,ಪಿ /೪೬ ಎಚ್ ಪಿ ಹಾಗೂ ೫೪೦೫ /೬೩ಎಚ್ ಪಿ ಟ್ಯಾಕ್ಟರ್ ಮಾರುಕಟ್ಟೆಗೆ ಬಿಡುಗಡೆ ಮಾಡಲಾಯಿತು ಎಂದು ವಿವರಿಸಿದರು. ಕಾರ್ಯಕ್ರಮಕ್ಕೂ ಪೂರ್ವದಲ್ಲಿ ಬೀಳಗಿ ತಾಲೂಕಿನ ಸುನಗದ ಪ್ರವೀಣ ಹಿರೇಮಠ ಪ್ರಕಾಶ ಹಿರೇಮಠ ಪಂಚಾಕ್ಷರಯ್ಯ ಹಿರೇಮಠ ಬಸಯ್ಯ ವಿಭೂತಿ ಮಠ ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸಿದರು.
ರೈತರಾದ ಶಿವಾನಂದ ಬಸಪ್ಪ ಬದಾಮಿ ಹಾಗೂ ರಾಮಪ್ಪ ಯವನಪ್ಪ ಮ್ಯಾಗೇರಿ ಹೊಸ ಟ್ಯಾಕ್ಟರ್ ಅನ್ನು ಖರೀದಿಸಿದರು ಹುನಗುಂದ ಬ್ರಾಂಚ್ ಮ್ಯಾನೆಜರ್ ನಾಗರಾಜ್ ಬಲವಂತನವರ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು, ರಾಜು ಪಾಟೀಲ್ ನಿರೂಪಿಸಿದರು, ವೆಂಕಟೇಶ್ ಇಟಗಿ ವಂದಿಸಿದರು. ಕಾರ್ಯಕ್ರಮದಲ್ಲಿ ಹುನಗುಂದ ಹಾಗೂ ಇಲಕಲ್ಲ ತಾಲೂಕಿನ ರೈತ ಬಾಂಧವರು ಸೇರಿದಂತೆ ವಿವಿಧ ತಾಲೂಕುಗಳಿಂದ ರೈತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಟ್ಯಾಕ್ಟರ್ ರಾಲಿ : ನೂತನ ಶೋರೂಮ್ ನಿಂದ ನ್ಯಾಯಾಲಯದವರೆಗೆ ಹೊಸ ಟ್ಯಾಕ್ಟರ್ ಗಳ ರೋಡ್ ಶೋ ಜರುಗಿತು.
