ಕಲಬುರಗಿ / ಜೇವರ್ಗಿ: ಅಡುಗೆ ಮಾಡುವ ಸಾಧಕಿಯರಿಗೆ ಗುರುತಿಸಿ ಅವರಿಗೆ ವಿಶೇಷ ಪ್ರಶಸ್ತಿ ಸನ್ಮಾನ ಮಾಡುವುದರ ಜೊತೆಗೆ ತಾಲೂಕ
ಬರಹಗಾರ ಸಂಘ ವೇದಿಕೆ ಉದ್ಘಾಟನೆ ಕಾರ್ಯಕ್ರಮ 26 ರಂದು ಬೆಳಗ್ಗೆ 11 ಗಂಟೆಗೆ ನಡೆಯಲಿದೆ ಎಂದು ತಾಲೂಕ ಬರಹಗಾರರ ಸಂಘದ ಗೌರವ ಅಧ್ಯಕ್ಷ ಡಾಕ್ಟರ.ಪಿ ಎಮ್ ಮಠ ಹಾಗೂ ಚನ್ನಮಲ್ಲಯ್ಯ ಹಿರೇಮಠ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕಾರ್ಯಕ್ರಮದ ಸಾನ್ನಿಧ್ಯವನ್ನು ಸೊನ್ನದ ಶ್ರೀ ಶಿವಾನಂದ ಶಿವಯೋಗಿಗಳು ಹಾಗೂ ಯಡ್ರಾಮಿಯ ಶ್ರೀ ಸಿದ್ದಲಿಂಗ ಶ್ರೀಗಳು ವಹಿಸಲಿದ್ದಾರೆ ಈ ಕಾರ್ಯಕ್ರಮದ ಉದ್ಘಾಟನೆಯನ್ನು ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಅಧ್ಯಕ್ಷರು ಹಾಗೂ ಶಾಸಕರಾದ ಡಾಕ್ಟರ್ ಅಜಯ್ ಸಿಂಗ್ ಉದ್ಘಾಟಿಸಲಿದ್ದಾರೆ, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಬೋಳ ಹಾಗೂ ಅಖಿಲ ಭಾರತೀಯ ವೀರಶೈವ ಮಹಾಸಭಾ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾದ ರಾಜಶೇಖರ ಸಾಹು ಸೀರಿ ಜ್ಯೋತಿ ಬೆಳಗಿಸಲಿದ್ದಾರೆ, ಬಿಜೆಪಿ ಜಿಲ್ಲಾಧ್ಯಕ್ಷರಾದ ಶಿವರಾಜ ಪಾಟೀಲ್ ರದ್ದೇವಾಡಗಿ ಹಾಗೂ ಶೋಭಾ ಬಾಣಿ ಕನ್ನಡಾಂಬೆ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಿದ್ದಾರೆ.
ಉರಗ ತಜ್ಞ ಬಹುಮುಖ ಕಲಾವಿದ ಅನೀಲ್ ಪವಾರ ರಚಿಸಿದ “ತಿಳಿದುಕೋ ವಿಕಟ ವಚನ ಸಾಹಿತ್ಯ” ಪುಸ್ತಕವನ್ನು ಬರಹಗಾರರ ವೇದಿಕೆ ಜಿಲ್ಲಾ ಅಧ್ಯಕ್ಷರಾದ ಮಾಂತೇಶ ಮಾಲಿ ಪಾಟೀಲ್ ಯಾತನೂರ ರವರು ಪುಸ್ತಕ ಬಿಡುಗಡೆಗೊಳಿಸಲಿದ್ದಾರೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬರಹಗಾರ ಸಂಘದ ರಾಜ್ಯ ಅಧ್ಯಕ್ಷರಾದ ಮಧು ನಾಯಕ ವಹಿಸಲಿದ್ದಾರೆ, ನೇತೃತ್ವವನ್ನು ಬರಹಗಾರ ಸಂಘದ ತಾಲೂಕ ಅಧ್ಯಕ್ಷ ಜ್ಯೋತಿ ಎಸ್ ಮಾಲಿ ಪಾಟೀಲ್ ಉಪನ್ಯಾಸವನ್ನು, ಅನ್ನಪೂರ್ಣ ಬಂಡಾರ್ಕರ್ ಪ್ರಾಸ್ತಾವಿಕವಾಗಿ ತಾಲೂಕ ಬರಹಗಾರರ ಸಂಘದ ಸಂಘಟನಾ ಕಾರ್ಯದರ್ಶಿಗಳಾದ ಸುಧಾ ಭಗವಂತರಾಯ ಬೆನ್ನೂರ್ ಪ್ರಾಸ್ತಾವಿಕ ನುಡಿಗಳಮ್ಮು ಆಡಲಿದ್ದಾರೆ ಈ ಸಂದರ್ಭದಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಸಹಕಾರಿ ಕ್ಷೇತ್ರ ಕಮಲ ಎಸ್ ಪಾಟೀಲ್ ಬೂಸನೂರ್ ,ಮಾನಂದ ಬಿ ಆಂದೋಲ ಸಾಹಿತ್ಯ ಕ್ಷೇತ್ರ, ಸುಮಂಗಲ ಎಸ್ ಹಿರೇಮಠ್ ಶಿಕ್ಷಣ ಕ್ಷೇತ್ರ, ಮಂಜುಳ ಎಸ್ ಹಿರೇಮಠ್ ಹಾಗೂ ವಿಶೇಷ ಸನ್ಮಾನಿತರಾದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಕೇದಾರ್ ಲಿಂಗಯ್ಯ ಹಿರೇಮಠ, ಜೀ ಕನ್ನಡ ಕಲಾವಿದ ಉಲ್ಲಾಸ್ ಹಿರೇಮಠ, ಪರಿಸರ ನೈರ್ಮಲ್ಯ ಮಲ್ಲಮ್ಮ ಹರವಾಳ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್ ಕೆ ಬಿರಾದಾರ, ಯುವ ಉದ್ಯಮಿ ವೀರೇಶ ಕಂದಗಲ್,ಮಹಾಲಕ್ಷ್ಮಿ ಕಾಲೇಜ್ ಪ್ರಾಚಾರ್ಯರು ಹಾಗೂ ಸಾಹಿತಿಗಳಾದ ಡಾ.ಧರ್ಮಣ್ಣ ದೊಡ್ಮನಿ,ಸಮಾಜ ಸೇವಕರಾದ ಪ್ರಮೋದ್ ದೊರೆ ಯಡ್ರಾಮಿ, ವಿಶೇಷ ಸನ್ಮಾನ ಮಾಡಿ ಸತ್ಕರಿಸಲಾಗುವುದು.
ಈ ಸಂದರ್ಭದಲ್ಲಿ ಗೌರವ ಸಲಹೆಗಾರರಾಗಿ ಸಾಹಿತಿಗಳಾದ ಶರಣಗೌಡ ಜೈನಪುರ್, ಬರಹಗಾರ ಸಂಘದ ತಾಲೂಕ ಪ್ರಧಾನ ಕಾರ್ಯದರ್ಶಿಗಳು ಹಾಗೂ ಸಾಹಿತಿಗಳಾದ ಸದಾನಂದ ಪಾಟೀಲ್, ಶರಣಗೌಡ ಮಾಲಿ ಪಾಟೀಲ್ ,ತಾಲೂಕ ಬರಹಗಾರ ಸಂಘದ ಉಪಾಧ್ಯಕ್ಷರಾದ ಬಸವರಾಜ ಬಾಗೇವಾಡಿ, ತಾಲೂಕ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಶ್ರೀ ಎಸ್ ಕೆ ಬಿರೆದಾರ, ಗೌರವ ಕಾರ್ಯದರ್ಶಿಗಳಾದ ಕಲ್ಯಾಣಕುಮಾರ ಸಂಗಾವಿ, ಶ್ರೀ ಹರಿ ಕರಕಿಹಳ್ಳಿ, ತಾಲೂಕ ಬರಹಗಾರ ಸಂಘದ ಸಂಘಟನಾ ಕಾರ್ಯದರ್ಶಿ ಸುಧಾ ಬೆನ್ನೂರ್, ಪತ್ರಿಕಾ ಪ್ರತಿನಿಧಿ ಮರೆಪ್ಪ ಬೇಗರ,ಚಂದ್ರಶೇಖರ ಮಾಲಿ ಪಾಟೀಲ್,ಶರಣಪ್ಪ ನೆರಡಗಿ ಸೇರಿದಂತೆ ಅನೇಕರಿದ್ದರು.
ವರದಿ: ಚಂದ್ರಶೇಖರ ಪಾಟೀಲ್ ಗುಡೂರ ಎಸ್ ಎನ್.
