
ಚಂದ್ರಶಾಗೌಡ ಮಾಲಿ ಪಾಟೀಲ್ ಗುಡೂರ ಎಸ್ ಎನ್
ನಿರ್ದೇಶಕರು: ಜ್ಞಾನ ಯೋಗಿ ಶ್ರೀ ಸಿದ್ದೇಶ್ವರ ಗ್ರಂಥಾಲಯ ಜೇವರ್ಗಿ
ಶಿವರಾಯಗೌಡ ಎಚ್ ಮಾಲಿ ಪಾಟೀಲ್ (ದಳಪತಿ) ಗುಡೂರ ಎಸ್ ಎನ್ ರವರ ಸ್ಮರಣಾರ್ಥವಾಗಿ
ಆತ್ಮೀಯ ವಿದ್ಯಾರ್ಥಿ/ನೀಯರೇ,
ಪಾಲಕ ಹಾಗೂ ಪೋಷಕ ಬಂಧುಗಳಿಗೆ ತಿಳಿಯಪಡಿಸುವುದೇನೆಂದರೆ
ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಗ್ರಂಥಾಲಯ ಶಹಾಪುರ ರೋಡ್ HDFC ಬ್ಯಾಂಕ್ ಎರಡನೇ ಮಹಡಿ ಜೇವರ್ಗಿ.
ಪೂಜ್ಯನೀಯರಾದ ನಮ್ಮ ತಂದೆ ದಿ: ಶಿವರಾಯಗೌಡ ಎಚ್ ಪಾಟೀಲ್(ದಳಪತಿ) ಗುಡೂರ ಎಸ್ ಎನ್ ರವರ ಸ್ಮರಣಾರ್ಥವಾಗಿ, ತಂದೆ-ತಾಯಿ ಕಳೆದುಕೊಂಡ ಅಥವಾ ಅಸುನೀಗಿದ ದ್ವಿತೀಯ ಪಿಯುಸಿ ಯಿಂದ ಪಿಎಚ್ ಡಿ ವರೆಗಿನ ಸ್ಪರ್ಧಾರ್ಥಿಗಳಿಗೆ ಅಧ್ಯಯನ ಮಾಡಲು ಗ್ರಂಥಾಲಯದ ನಿರ್ದೇಶಕರಾದ ಶ್ರೀ ಚಂದ್ರಶಾಗೌಡ ಎಸ್ ಮಾಲಿ ಪಾಟೀಲ್ ಗುಡೂರ ಎಸ್ ಎನ್ ರವರು ಸ್ಪರ್ಧಾರ್ಥಿಗಳಿಗೆ ಉಚಿತವಾಗಿ ದಾಖಲಾತಿಯನ್ನು ಕಲ್ಪಿಸಲಾಗಿದೆ ದಯವಿಟ್ಟು ಅರ್ಹರು ಸದುಪಯೋಗ ಪಡೆದುಕೊಳ್ಳಿ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿ ಸೂಚನೆಗಳು:
- ಎಲ್ಲಾ ವರ್ಗದ ಮಕ್ಕಳು ದಾಖಲಾತಿಯನ್ನು ಪಡೆದುಕೊಳ್ಳಬಹುದು
2.ಪ್ರತಿ ಶೈಕ್ಷಣಿಕ ವರ್ಷವಾದ ಜೂನ್ ಯಿಂದ ಜೂನ್ ವರೆಗೆ.
ಮೊದಲು ಹತ್ತು (೧೦) ಅಭ್ಯಾರ್ಥಿಗಳಿಗೆ ಮಾತ್ರ ಅವಕಾಶ
3.ಈ ಅವಕಾಶವು ನಮ್ಮ ಕಲಬುರಗಿ ಜಿಲ್ಲೆಯ ಅಭ್ಯರ್ಥಿಗಳಿಗೆ ಮಾತ್ರ ಅವಕಾಶವಿರುತ್ತದೆ - ಅಭ್ಯರ್ಥಿಯ ಆಧಾರ ಮತ್ತು ತಂದೆ-ತಾಯಿಯ ಮರಣ ಪ್ರಮಾಣ ಪತ್ರ ಮತ್ತು ಒಂದು ಪೊಟೋ ತರಬೇಕು.
- ಈ ಅವಕಾಶವು ನಿರಂತರವಾಗಿ ನಡೆಯುತ್ತಿರುವುದರಿಂದ ಆಯಾ ಶೈಕ್ಷಣಿಕ ವರ್ಷ ಮುಗಿಯುವವರೆಗೆ ಮಾತ್ರ ಆ ವರ್ಷದ ಅಭ್ಯರ್ಥಿಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.
- ಗ್ರಂಥಾಲಯದ ಎಲ್ಲಾ ನಿಯಮಗಳು/ಷರತ್ತುಗಳನ್ನು ಓದಿಕೊಂಡು ದಾಖಲಾತಿಯನ್ನು ಮಾಡಿಕೊಳ್ಳಬೇಕು.
- 2025-26 ರ ಶೈಕ್ಷಣಿಕ ವರ್ಷದ ದಾಖಲಾತಿಗಳು ಈಗಾಗಲೇ ಪ್ರಾರಂಭವಾಗಿವೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 7353015143.
