ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನಲ್ಲಿ ಅಭಿವೃದ್ಧಿ ಕುಂಠಿತವಾಗಿದೆ ಎಂದು ಮಾಜಿ ಶಾಸಕ ಕೆ ಎಂ ತಿಮ್ಮರಾಯಪ್ಪ ರವರ ನೇತೃತ್ವದಲ್ಲಿ ತಾಲ್ಲೂಕಿನ ಗುಜ್ಜನಾಡು ಗ್ರಾಮದ ಮುರಾರ್ಜಿ ವಸತಿ ಶಾಲೆಯ ಕಾಂಪೌಂಡ್ ನಿರ್ಮಾಣ ಮಾಡದ ಕಾರಣದಿಂದ ಶಾಲೆ ಮಳೆ ನೀರು ತುಂಬಿ ಜಲಾವೃತವಾಗಿರುವುದನ್ನು ವೀಕ್ಷಿಸಿ ದವಡಬೆಟ್ಟ ಗ್ರಾಮದಲ್ಲಿ ರಸ್ತೆ ಪಕ್ಕ ಇದ್ದು ರಸ್ತೆ ಕುಸಿದು ಸಾರ್ವಜನಿಕರು ಆ ಮಾರ್ಗವಾಗಿ ಹೋರಾಡಲು ಯಾವುದೇ ರೀತಿಯ ದುರಸ್ತಿ ಮಾಡದೆ ಗೋತ್ತಿದ್ದರು ಗೊತ್ತಿಲ್ಲದಂತೆ ವರ್ತಿಸಿದ್ದರೆಂದು ಆ ಬಾವಿಯನ್ನು ವೀಕ್ಷಿಸಿದರು.
ಈ ಸಮಯದಲ್ಲಿ ಮಾತನಾಡಿ ಮಾಜಿ ಶಾಸಕರಾದ ತಿಮ್ಮರಾಯಪ್ಪನವರು ಈ ತಾಲ್ಲೂಕಿನಲ್ಲಿ ಅಭಿವೃದ್ಧಿ ಯಾವ ಮಟ್ಟದಲ್ಲಿ ನಡೆಯುತ್ತಿದೆ ಎಂದು ಈ ರಸ್ತೆಯನ್ನು ನೋಡಿದರೆ ಗೊತ್ತಾಗುತ್ತದೆ ತಂದೆ ಮಕ್ಕಳು ತಾಲ್ಲೂಕಿನ ಅಭಿವೃದ್ಧಿ ಮಾಡುವಲ್ಲಿ ವಿಫಲರಾಗಿದ್ದು ಅವರ ಅಭಿವೃದ್ದಿಯಾಗುವುದಲ್ಲಿ ನಿರತರಾಗಿದ್ದಾರೆ ನಾವು ಇವರ ವೈಫಲ್ಯಗಳ ವಿರುದ್ಧ ಹೋರಾಟ ಮಾಡಿದರೆ ಶಾಸಕರು ಇದೊಂದು ಗಿಮಿಕ್ ಎಂದು ಮಾತನಾಡುತ್ತಾರೆ ಅವರ ತಂದೆ ಶಾಸಕರಾಗಿ ಸಚಿವರಾಗಿ ಈಗ ಮಗ ಶಾಸಕರಾಗಿದ್ದರೆ ಅದರೆ ತಾಲೂಕಿನ ಅಭಿವೃದ್ಧಿ ಮಾಡುವಲ್ಲಿ ವಿಫಲರಾಗಿದ್ದು ಆದ್ದರಿಂದ ನಾವು ಸರ್ಕಾರ ಮತ್ತು ಶಾಸಕರ ವೈಫಲ್ಯಗಳನ್ನು ಖಂಡಿಸಿ ಹೋರಾಟ ಮಾಡುತ್ತಿದ್ದೇವೆ ಎಂದು ಸರ್ಕಾರದ ವಿರುದ್ದ ಗುಡುಗಿದರು.
ನಂತರ ಪಾವಗಡ ತಾಲೂಕಿನ ತಹಶೀಲ್ದಾರ್ ಕಛೇರಿಗೆ ಭೇಟಿ ನೀಡಿ ತಹಶೀಲ್ದಾರ್ ರವರಿಗೆ ಮನವಿ ಪತ್ರ ಸಲ್ಲಿಸಿದರು.
ಈ ಸಮಯದಲ್ಲಿ ತಾಲೂಕಿನ ಜೆಡಿಎಸ್ ಅಧ್ಯಕ್ಷರಾದ ಎನ್ ಎ ಈರಣ್ಣ, ಜಿಲ್ಲಾ ಅಧ್ಯಕ್ಷರಾದ ಆರ್. ಸಿ ಅಂಜಿನಪ್ಪನವರು, ತಿಮ್ಮಾರೆಡ್ಡಿ, ಸಾಯಿ ಸುಮನ ಅಂಜಿನಾಯಕ್, ಮನು ,ಅಪ್ ಬಂಡೆ ಗೋಪಾಲ್, ಮಲ್ಲಿಕಾರ್ಜುನ ಮತ್ತು ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.
