ಭಾರ ಎನಿಸಿದ್ದು ನಿಜ
ಮನಸು ಒಂದು ದಿನ ಗೊಂದಲದ ಗೂಡಾಗಿದ್ದು ಸತ್ಯ
ಈ ಪ್ರಶಸ್ತಿಗೆ ನಾ ಅರ್ಹನೋ ಇಲ್ಲವೋ ನನಗೆ ತಿಳಿಯದೆ
ನಿಮ್ಮ ಮಾತಿಗೆ ಇಲ್ಲವೆನ್ನಲೂ ಆಗದೆ
‘ಪುನೀತ’ರ ಹೆಸರಿನ ಈ ‘ರತ್ನ’ವನು
ಕಳೆದುಕೊಳ್ಳಲು ಮನಸಾಗದೆ
ಖಂಡಿತಾ ಬರುವೆ ಈ ಮಾತು ಸುಳ್ಳಾಗದೆ
‘ನಿಮ್ಮ ಜೊತೆಗೆ ಆ ದೇವರ ಮಕ್ಕಳ’ ಭೇಟಿ ಆಗಲು
ಪುನೀತರ,ನಿಮ್ಮಂತವರ ಸೇವೆಯ ನಡುವೆ
ಈ ‘ಕರುನಾಡ ಕಂದ’ ನ ಅಳಿಲು ಸೇವೆ ಅರ್ಪಿಸಲು
ಹ್ಯಾಟ್ಸ್ ಆಫ್ ಯೂ ಸರ್
-ಬಸವರಾಜ ಬಳಿಗಾರ
