ಕೊಟ್ಟಿಗೆಯಲ್ಲಿ ಜನಿಸಿದ ಕಾರುಣ್ಯ ಸಿಂಧು
ಬಡತನದಲ್ಲಿ ಬೆಂದ ಸಹನೆಯ ಬಿಂಧು
ಮಾನವತೆಯ ತತ್ವ ಬೋಧಿಸಲು ಜನಿಸಿ ಬಂದೆ
ಅಂಧಕಾರವ ತೊಲಗಿಸಲು ಶ್ರಮಿಸುತ ನಿಂದೆ.
ಮೇರಿ ಜೋಸೆಫ್ ನಿಮ್ಮ ತಾಯಿ ತಂದೆ
ಶಿಲುಬೆಗೆ ಏರಿಸಿದವರನು ಬಂಧುಗಳೆಂದೆ
ಸತ್ಯ ಮಾರ್ಗದಿ ಪ್ರೀತಿ ತ್ಯಾಗವ ನೀ ಸಾರಿದೆ
ಶಿಲುಬೆಗೇರುವ ಕ್ಷಣದಲ್ಲೂ ಅವರನ್ನು ಕ್ಷಮಿಸೆಂದೆ.
ಕಂದಾಚಾರ ಮೂಢನಂಬಿಕೆಗಳ ಕಂಡು ನೀ ಸಿಡಿದೆದ್ದೆ
ಜಗಕೆ ಶಾಂತಿ ಕೋರಿ ದೇವದೂತನಾದೆ ಏಸು ದೇವನೆ.
-ಬ್ಯಾಡನೂರು ವೀರಭದ್ರಪ್ಪ ಶಿವಶರಣ, ಎಸ್.
ಪಾವಗಡ ತಾಲ್ಲೂಕು, ತುಮಕೂರು ಜಿಲ್ಲೆ.
ದೂರವಾಣಿ ಸಂಖ್ಯೆ : 9740199896.
