ವಿಜಯನಗರ ಜಿಲ್ಲೆ ಕೊಟ್ಟೂರು ತಾಲೂಕಿನ ಕೋಗಳಿ ಗ್ರಾಮದಲ್ಲಿ ಹೊಸಪೇಟೆಯ ಐ ದೃಷ್ಠಿ ಕಣ್ಣಿನ ಆಸ್ಪತ್ರೆ ಮತ್ತು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಕೋಗಳಿ ಇವರ ಸಹಯೋಗದಲ್ಲಿ ಉಚಿತ ಕಣ್ಣಿನ ತಪಾಸಣಾ ಶಿಬಿರ ಆಯೋಜನೆ ಮಾಡಲಾಗಿತ್ತು.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಶ್ರೀ ಎನ್ ಹೇಮಗಿರಿ ಗೌಡ್ರು ರಿಬ್ಬನ್ ಕತ್ತರಿಸುವ ಮೂಲಕ ಶಿಬಿರಕ್ಕೆ ಚಾಲನೆ ನೀಡಿದರು. ಯಶಸ್ವಿನಿ ಕಾರ್ಡ್ ಹೊಂದಿರುವ ರೈತ ಸದಸ್ಯರು ಯೋಜನೆ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿ ಶಿಬಿರಕ್ಕೆ ಶುಭ ಹಾರೈಸಿದರು.
ಈ ದಿನ ಶಿಬಿರದಲ್ಲಿ ಕೋಗಳಿ ಕೋಡಿಹಳ್ಳಿ, ಕೆ ಕೆ ತಾಂಡ ಗ್ರಾಮದ ಹಿರಿಯರು, ಮಹಿಳೆಯರು ಮಕ್ಕಳು ಸೇರಿದಂತೆ 450 ಕ್ಕೂ ಹೆಚ್ಚು ಜನರು ಇದರ ಸದುಪಯೋಗ ಪಡೆದುಕೊಂಡರು.
ಈ ಸಂದರ್ಭದಲ್ಲಿ ಪಿ ಕೆ ಜೆ ಬಿ ವ್ಯವಸ್ಥಾಪಕರಾದ ಎಂ ಯಲ್ಲಪ್ಪ, ಡಾ. ಸಂದೀಪ್ ಹೈತಾಳ, ಕೆ ಎಸ್ ಮಂಜುನಾಥ್, ಕ್ಯಾಂಪ್ ಮ್ಯಾನೇಜರ್ ಇಮ್ರಾನ್, ಸಹಕಾರ ಸಂಘದ ಕಾರ್ಯದರ್ಶಿ ವಿ ರವಿ, ಗ್ರಾಮಸ್ಥರಾದ ಮರುಳಾಸಿದ್ದಯ್ಯ, ಎಸ್ ಎಂ ಕಲ್ಯಾಣಿ ಸ್ವಾಮಿ ಹೆಚ್ ಎಂ ವೀರೇಶ, ಕೆ ಉಮೇಶ, ಸಿ. ಗೋಣ್ಣೆಪ್ಪ, ಟಿ ಎಂ ಮಹೇಶ, ಸಿಬ್ಬಂದಿಗಳು ಹಾಗೂ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.
