“34 ದಿನಗಳಲ್ಲಿ 2ಕೋಟಿ 77ಲಕ್ಷ 99ಸಾವಿರ ರೂ.ಸಂಗ್ರಹ”
ಚಾಮರಾಜನಗರ/ಹನೂರು : ರಾಜ್ಯದ ಪ್ರಸಿದ್ಧ ಧಾರ್ಮಿಕ ಪುಣ್ಯಕ್ಷೇತ್ರ ಶ್ರೀ ಮಲೆ ಮಹದೇಶ್ವರ ಬೆಟ್ಟದಲ್ಲಿ ಹುಂಡಿ ಹಣ ಎಣಿಕೆ ಕಾರ್ಯ ನಡೆಯಿತು. 34 ದಿನಗಳಲ್ಲಿ ಒಟ್ಟು ಮೊತ್ತ 2 ಕೋಟಿ 77 ಲಕ್ಷ 99 ಸಾವಿರ ರೂ.ಸಂಗ್ರಹವಾಗಿದೆ.
ತಾಲೂಕಿನ ಶ್ರೀ ಮಲೈ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದಲ್ಲಿ ಈ ದಿನ ಬೆಳಿಗ್ಗೆ 6.30 ಗಂಟೆಯಿಂದ ಶ್ರೀ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮಿಗಳು ಶ್ರೀ ಸಾಲೂರು ಬೃಹನ್ಮಠಾಧ್ಯಕ್ಷರು ರವರ ದಿವ್ಯ ಸಾನಿದ್ಯದಲ್ಲಿ ಪ್ರಾಧಿಕಾರ ಕಾರ್ಯದರ್ಶಿ ರಘು ನೇತೃತ್ವದಲ್ಲಿ ಹುಂಡಿ ಎಣಿಕೆ ಕಾರ್ಯ ನಡೆಯಿತು.
ದಿನಾಂಕ: 20/11/2024 ರಿಂದ 23/12/2024 ರ ವರೆಗಿನ 34 ದಿನಗಳಲ್ಲಿ ಒಟ್ಟು ಮೊತ್ತ 2,77,99,396 ರೂ. (ಹುಂಡಿ ಮತ್ತು ಇ-ಹುಂಡಿ ಸೇರಿ) ಹಾಗೂ ಚಿನ್ನ 73 ಗ್ರಾಂ, ಬೆಳ್ಳಿ 3 ಕೆ.ಜಿ 900 ಗ್ರಾಂ ಹುಂಡಿಯಲ್ಲಿ ದೊರೆತಿದೆ ಹಾಗೂ ವಿದೇಶಿ ನೋಟುಗಳು ಮೂರು ಮತ್ತು ಚಲಾವಣೆಯಾಗದ 2000 ಮುಖಬೆಲೆಯ 21 ನೋಟಗಳು 42 ಸಾವಿರ ರೂ. ದೊರೆತಿದೆ.
ಎಣಿಕೆ ಕಾರ್ಯದಲ್ಲಿ ಪ್ರಾಧಿಕಾರದ ಉಪ ಕಾರ್ಯದರ್ಶಿ ಚಂದ್ರಶೇಖರ.ಜಿ.ಎಲ್, ಹಣಕಾಸು ಮತ್ತು ಲೆಕ್ಕ ಪತ್ರ ಸಲಹೆಗಾರರು ನಾಗೇಶ್, ಲೆಕ್ಕದೀಕ್ಷಕರು ಗುರುಮಲ್ಲಯ್ಯ ಹಾಗೂ ಚಾಮರಾಜನಗರ ಜಿಲ್ಲಾಡಳಿತ ಕಛೇರಿಯ ಹರೀಶ್, ಹಾಗೂ ಪ್ರಾಧಿಕಾರದ ಸಿಬ್ಬಂದಿಗಳು, ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹಾಗೂ ಕೊಳ್ಳೇಗಾಲದ ಬ್ಯಾಂಕ್ ಆಫ್ ಬರೋಡಾ ಮುಖ್ಯ ವ್ಯವಸ್ಥಾಪಕರು, ಸಿಬ್ಬಂದಿಗಳು ಹಾಜರಿದ್ದರು.
ವರೆದಿ :ಉಸ್ಮಾನ್ ಖಾನ್
