ವಿಜಯನಗರ/ಕೂಡ್ಲಿಗಿ:ಕ್ರಿಸ್ಮಸ್ ಹಬ್ಬದ ಅಂಗವಾಗಿ ವಿಶೇಷ ಕಾರ್ಯಕ್ರಮವನ್ನು ಉದ್ದೇಶಿಸಿ
ಸೂಲನಹಳ್ಳಿ ಚರ್ಚ್ ನ ಫಾದರ್ ವೀರೇಶ್ ಅವರು ಈ ವರ್ಷದ ಡಿಸೆಂಬರ್ ತಿಂಗಳ ಇಪ್ಪತ್ತೈದನೇ ದಿನವನ್ನು ಯೇಸು ಕ್ರಿಸ್ತನ ಹುಟ್ಟುಹಬ್ಬವಾಗಿ ಆಚರಿಸಲಾಗುತ್ತದೆ.
ಮನೆಯಲ್ಲಿ ಪುಟ್ಟದಾದ ಕೊಟ್ಟಿಗೆ ಕಟ್ಟಿ ಕ್ರಿಸ್ತಜನನದ ಗೊಂಬೆಗಳನ್ನಿಡುವುದು, ಕ್ರಿಸ್ಮಸ್ ವೃಕ್ಷ ಇಟ್ಟು ಅಲಂಕರಿಸುವುದು,ಮಿಸಲ್ಟೋ ಮೊದಲಾದ ಮರಗಳ ಎಲೆಗಳ ತೋರಣ ಕಟ್ಟುವುದು,ಕ್ರಿಸ್ಮಸ್ಸಿಗೆಂದೇ ತಯಾರಿಸಿದ ವಿಶಿಷ್ಟ ತಿಂಡಿಗಳನ್ನು ಹಾಗೂ ಉಡುಗೊರೆಗಳನ್ನು ಹಂಚುವುದು ಹಾಗೂ ಎಲ್ಲಾ ಮನೆಗಳಲ್ಲೂ ಒಂದು ಕ್ರಿಸ್ಮಸ್ ವೃಕ್ಷವನ್ನು ತಂದು ನಿಲ್ಲಿಸುವುದು ವಾಡಿಕೆ. ಈ ವೃಕ್ಷವನ್ನು ದೀಪಗಳು ಮತ್ತು ಇತರ ವಸ್ತುಗಳಿಂದ ಅಲಂಕೃತಗೊಳಿಸಲಾಗುತ್ತದೆ. ಅನೇಕ ಕಡೆಗಳಲ್ಲಿ ಮನೆಯ ಹೊರಗೂ ದೀಪಗಳ ತೋರಣ ಕಟ್ಟುವುದು ವಾಡಿಕೆ. ಹಾಗೆಯೇ ಮನೆಯ ಹೊರಗೆ “ಹಿಮದ ಮನುಷ್ಯ” ಮೊದಲಾದ ಅಲಂಕಾರಗಳೂ ಸಾಮಾನ್ಯ ಹಾಗೆಯೇ ಕ್ರಿಸ್ಮಸ್ ಹಬ್ಬದ ಅಂಗವಾಗಿ ಕೆಲವು ಹೂವುಗಳು ಮತ್ತು ಸಸ್ಯಗಳು (ಅಮರಿಲ್ಲಿಸ್, ಕ್ರಿಸ್ಮಸ್ ಕ್ಯಾಕ್ಟಸ್) ಮೊದಲಾದವುಗಳನ್ನು ತರಲಾಗುತ್ತದೆ
ವಿಶಿಷ್ಟ ರೀತಿನ ಕ್ರಿಸ್ಮಸ್ ಆಚರಿಸುತ್ತದೆ ಹಾಗೂ ಹಲವಾರು ವೇಷ ಭೂಷಗಳನ್ನು ಧರಿಸಿ ಸಹ ಕ್ರಿಸ್ಮಸ್ ಆಚರಣೆಯನ್ನು ತುಂಬಾ ಅದ್ದೂರಿಯಾಗಿ ಆಚರಿಸುತ್ತಾರೆ ಎಂದು ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಫಾದರ್ ವೀರೇಶ್ ವಿ ಹಾಗೂ ಕಲ್ಲಹಳ್ಳಿ ಸಿದ್ದೇಶ್ ಇನ್ನೂ ಮುಂತಾದವರು ಸೇರಿದ್ದರು.
ವರದಿ : ಗುರುರಾಜ್ ಎಲ್, ಕಲ್ಲಹಳ್ಳಿ ಟಿ
