ಮಂಡ್ಯದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತೆರೆ ಬಿದ್ದಿದೆ. ಸಮ್ಮೇಳನದಲ್ಲಿ ಕನ್ನಡ ಭಾಷೆಯ ಸಮಗ್ರ ಅಭಿವೃದ್ಧಿಗೆ 5 ಪ್ರಮುಖ ನಿರ್ಧಾರಗಳು ಕೈಗೊಂಡಿರುವುದು ಸ್ವಾಗತಾರ್ಹ.
ಸಮ್ಮೇಳನದಲ್ಲಿ ಸಾವಿರಾರು ಜನ ಕನ್ನಡಾಭಿಮಾನಿಗಳು, ಸಾಹಿತ್ಯಾಸಕ್ತರು, ಪುಸ್ತಕ ಪ್ರೇಮಿಗಳು ಉಪಸ್ಥಿತರಿದ್ದರು; ಜೊತೆಗೆ, ನೂರಾರು ಮಳಿಗೆಗಳು ವಿವಿಧ ವಿಷಯಗಳ ಬಗ್ಗೆ ಬರೆದಿರುವ ಕನ್ನಡ ಪುಸ್ತಕಗಳನ್ನು ಮಾರುತ್ತಿದ್ದವು. ದುರದೃಷ್ಟವಶಾತ್, ಪುಸ್ತಕಗಳನ್ನು ಕೊಳ್ಳಲು ಇಲ್ಲಿ ನೆಟ್ವರ್ಕ್ ಸಮಸ್ಯೆ ಕಾಡುತ್ತಿತ್ತು, ಎಷ್ಟರ ಮಟ್ಟಿಗೆ ಎಂದರೆ ಕರೆ ಮಾಡುವುದಕ್ಕೂ ಆಗುತ್ತಿರಲಿಲ್ಲ. ನೆಟ್ವರ್ಕ್ ಸಮಸ್ಯೆಯಿಂದ ಯು.ಪಿ.ಐ ಪೇಮೆಂಟ್ ಸ್ವೀಕರಿಸಲಾಗದೆ ಮಳಿಗೆಗಳ ಮಾಲೀಕರು ಸಾಕಷ್ಟು ನಷ್ಟ ಅನುಭವಿಸಿದರು. ಎಲ್ಲವೂ ಡಿಜಿಟಲ್ ಆಗಿರುವ ಈ ಕಾಲದಲ್ಲಿ ಸಾರ್ವಜನಿಕರೂ ಸಹ ಯು.ಪಿ.ಐ ಮೂಲಕ ಪಾವತಿ ಮಾಡುವುದನ್ನು ರೂಢಿಸಿಕೊಂಡಿದ್ದಾರೆ ಆಯೋಜಕರ ಎಡವಟ್ಟಿನಿಂದ ಜನ ಪರದಾಡುವಂತಾಯಿತು.
ಒಂದು ಜಾಗದಲ್ಲಿ ಸಾವಿರಾರು ಜನ ಸೇರುವುದರಿಂದ ಇಂಟರ್ನೆಟ್ ಬೇಡಿಕೆ ಹೆಚ್ಚಾಗಿ [over subscription & over density ] ಸೇವೆ ವ್ಯತ್ಯಯವಾಗುವುದು ಸಹಜ. *ಜಿಲ್ಲಾಡಳಿತ ಹಾಗೂ ಆಯೋಜಕರು ತಾತ್ಕಾಲಿಕವಾದ ವೈ ಫೈ ಟವರ್ ಹಾಕಿದ್ದರೆ ಈ ರೀತಿ ಸಮಸ್ಯೆ ಆಗುತ್ತಿರಲಿಲ್ಲ ಅಲ್ಲದೆ ಮಳಿಗೆಗಳು ಸಹ ಯು.ಪಿ.ಐ ಮೂಲಕ ಹಣ ಸ್ವೀಕರಿಸಬಹುದಾಗಿತ್ತು.
ಮುಂದಿನ ವರ್ಷ ಬಳ್ಳಾರಿಯಲ್ಲಿ ನಡೆಯುವ ಸಾಹಿತ್ಯ ಸಮ್ಮೇಳನದಲ್ಲಿ ಈ ತಪ್ಪು ಮರುಕಳಿಸದಿರಲಿ. ಕನ್ನಡದಲ್ಲಿ ಬರೆದಿರುವ ಪುಸ್ತಕಗಳು ಮಾರಾಟವಾಗಲು ಯಾವುದೇ ವಿಘ್ನ ಬರೆದಂತೆ ಕ.ಸಾ.ಪ ಹಾಗೂ ಸರ್ಕಾರ ಎಚ್ಚರ ವಹಿಸಲಿ.
-ಪವನ್.ಎಸ್.
