
ವಿಜಯನಗರ : ಜಿಲ್ಲೆಯ ದಿ. 24.12.2024 ರಂದು ವಿಜ್ಞಾನ ಈ ಟೆಕ್ನೋ ಸ್ಕೂಲ್ ಸಿದ್ದಪ್ರಿಯ ಕಲ್ಯಾಣ ಮಂಟಪ (ವಿಜಯನಗರ) ಹೊಸಪೇಟೆಯಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಹಲವಾರು ಶಾಲಾ ಹಾಗೂ ಪ್ರೌಢಶಾಲೆಗಳು ಭಾಗವಹಿಸಿದ್ದವು. ಹಾಗೂ (ವಿಜಯನಗರ )ಹೊಸಪೇಟೆಯಲ್ಲಿ ನಡೆದ ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮಕ್ಕೆ ಹೊಸಹಳ್ಳಿಯ ವೈಭವ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿನಿಯರಾದ ಎಂ ಎಸ್. ಸಿಂಚನ ಹಾಗೂ ಎಮ್. ಎಸ್. ಶ್ರೀ ಗೌರಿ ರಸಪ್ರಶ್ನೆ ವಿಭಾಗದಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ, ಇದೊಂದು ನಮ್ಮ ಶಾಲಾ ಕಾಲೇಜುಗಳ ತುಂಬಾ ಅತ್ಯುನ್ನತ ಸಾಧನೆ ಅಂತ ಕಾಲೇಜಿನ ಮುಖ್ಯ ಅಧ್ಯಾಪಕರು ತಮ್ಮ ಅನಿಸಿಕೆ ವ್ಯಕ್ತ ಪಡಿಸಿದರು.
ಮಕ್ಕಳು ಹಲವಾರು ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಾರೆ ಅವರಿಗೆ ಪ್ರತಿಭೆಗಳನ್ನು ಹೊರ ಹಾಕಲು ಈ ಪ್ರತಿಭಾ ಕಾರಂಜಿ ತುಂಬಾ ಅನುಕೂಲ ಎಂದರು ಹಾಗೂ ಕಾಳಿದಾಸ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಾದ ಎಂ ಚಿನ್ಮಯ್ ಕ್ಲೇಮಾಂಡಿಗ್ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾನೆ ಹಾಗೆ ಸೃಜನ ಕೆ ಎಚ್ ಎಂಬ ವಿದ್ಯಾರ್ಥಿನಿ ಪ್ರಬಂಧ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ ಈ ಎಲ್ಲಾ ವಿದ್ಯಾರ್ಥಿಗಳ ಸಾಧನೆಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಎಲ್ಲಾ ಅಧಿಕಾರಿಗಳು ,ಸಂಸ್ಥೆಯ ಘನ ಸಂಸ್ಥಾಪಕ ಅಧ್ಯಕ್ಷರಾದ ಶ್ರೀಯುತ ಪಿ .ಬಿ. ಗಜೇಂದ್ರಗಡ್ ಕಾರ್ಯದರ್ಶಿಗಳಾದ ಶ್ರೀಯುತ ಮುರುಳಿಧರ್ ಗಜೇಂದ್ರಗಡ ಉಪಾಧ್ಯಕ್ಷರಾದ ಶ್ರೀಮತಿ ಸವಿತಾ ಮುರುಳಿಧರ್ ಹಾಗೂ ಮುಖ್ಯ ಗುರುಗಳಾದ ಶ್ರೀ ಪ್ರಕಾಶಗೌಡ ಹೆಚ್‌ಜಿ ಶ್ರೀ ಮಲ್ಲೇಶಿ ಎಚ್ ಶ್ರೀ ಜಿ ವಿ ರಮೇಶ್ ಗೌಡ ಹಾಗೂ ಸಿಬ್ಬಂದಿ ವರ್ಗದವರು ಎಲ್ಲಾ ವಾಹನಗಳ ಚಾಲಕರು ನಿರ್ವಾಹಕರು ಪೋಷಕರು ಮಕ್ಕಳಿಗೆ ಅಭಿನಂದಿಸಿದ್ದಾರೆ.
ವರದಿ : ಗುರುರಾಜ್ ಎಲ್, ಕಲ್ಲಹಳ್ಳಿ ಟಿ
