ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಐತಿಹಾಸಿಕ ಸಹಬಾಳ್ವೆಯ ಕ್ರಿಸ್ಮಸ್ ಆಚರಣೆ ಹಾಗೂ ನೇತ್ರದಾನ ಜಾಗೃತಿ ಕಾರ್ಯಕ್ರಮಕ್ಕೆ ಸಾಕ್ಷಿಯಾದ ಬೀದರ್

ಬೀದರ್ : ನಡೆಯುವುದೊಂದೇ ಭೂಮಿ,ಕುಡಿಯುದೊಂದೇ ಜಲ, ಸುಡುವ ಅಗ್ನಿ ಒಂದೇ ಇರಲು ಕುಲ ಗೋತ್ರಗಳ ನಡುವೆ ಎತ್ತಣದು ಎಂದು ಸರ್ವಜ್ಞ ಹೇಳಿದ್ದಾರೆ. ಇದರಂತೆ ದಿನಾಂಕ 22.12.2024 ರಂದು ಸ್ಥಳ ಡಾ. ಅಂಬೇಡ್ಕರ್ ವೃತ್ತ ಬೀದರ್ ನಲ್ಲಿ ಅನುದಿನ ಮಾನವೀಯತೆ ಫೌಂಡೇಶನ್ ವತಿಯಿಂದ ಸಹಬಾಳ್ವೆ ಕ್ರಿಸ್ಮಸ್ ಆಚರಣೆ ಮತ್ತು ನೇತ್ರದಾನ ಜಾಗೃತಿ ಕಾರ್ಯಕ್ರಮ ಜರುಗಿತು. ಈ ಕಾರ್ಯಕ್ರಮದಲ್ಲಿ ಏಸು ಜನನ ಪ್ರಕರಣ ತೋರಿಸುವ ನಾಟಕವನ್ನು ಅನುಗ್ರಹ ಆಂಗ್ಲ ಮಾಧ್ಯಮ ಶಾಲೆ, ಹಲ್ಬರ್ಗ (ತಾ. ಭಾಲ್ಕಿ) ಇವರು ನಡೆಸಿಕೊಟ್ಟರು. ಕಾರ್ಯಕ್ರಮದ ಅಧ್ಯಕ್ಷತೆ ಮತ್ತು ಉದ್ಘಾಟಕರಾಗಿ ಆಗಮಿಸಿದ್ದ ರೆವೆರೆಂಡ್ ನೆಲ್ಸನ್ ಸುಮಿತ್ರ ಜಿಲ್ಲಾ ಮೇಲ್ವಿಚಾರಕರು ಸೆಂಟ್ ಪೌಲ್ ಮೆಥಡ್ಸ್ ಚರ್ಚ್ ಬೀದರ್ ಇವರು ಕ್ರಿಸ್ಮಸ್ ಸಂದೇಶವನ್ನು ನೀಡಿದರು.

ಕಾರ್ಯಕ್ರಮವನ್ನು ಶಾಂತಿಯ ಪ್ರತೀಕವಾಗಿರುವ ಪಾರಿವಾಳವನ್ನು ಹಾರಿ ಬಿಡುವುದರ ಮುಖಾಂತರ ಉದ್ಘಾಟಿಸಲಾಯಿತು. ತದ ನಂತರ ಕ್ರಿಸ್ಮಸ್ ಕೇಕ್ ಅನ್ನು ಪರಮಪೂಜ್ಯ ಹವಾ ಮಲ್ಲಿನಾಥ ಮಹಾರಾಜರು ನಿರುಗುಡಿ ಜೈ ಭಾರತ್ ಮಾತಾ ಸೇವಾ ಸಮಿತಿ ಅಧ್ಯಕ್ಷರು ಹಾಗೂ ಅವರೊಂದಿಗೆ ಇದ್ದ ಎಲ್ಲಾ ಧರ್ಮ ಗುರುಗಳು, ಗಣ್ಯ ವ್ಯಕ್ತಿಗಳು ಸೇರಿ ಕ್ರಿಸ್ಮಸ್ ಕೇಕ್ ಕತ್ತರಿಸಿ ಸಿಹಿ ಪರಸ್ಪರ ಹಂಚಿಕೊಂಡರು. ತದನಂತರ ಫಾದರ್ ವಿಲ್ಸನ್ ಫರ್ನಾಂಡಿಸ್ ಅವರು ಅನುದಿನ ಮಾನವೀಯತೆ ಫೌಂಡೇಶನ್ ಮಾಡುತ್ತಿರುವ ಸಮಾಜ ಸೇವೆ ಬಗ್ಗೆ ಮತ್ತು ಅದರ ಅಧ್ಯಕ್ಷರು ಹಾಗೂ ಆಯೋಜಕರಾದ ಶ್ರೀ ಮಹಾನ್ ಕೋಟೆ ರವರ ಬಗ್ಗೆ ಪ್ರೋತ್ಸಾಹದ ಹಿತ ನುಡಿಗಳನ್ನು ಹೇಳಿ ತಮ್ಮ ಆಶೀರ್ವಾದ ಸದಾ ನಿಮ್ಮ ಮೇಲೆ ಇರುತ್ತದೆ ಎಂದು ತಿಳಿಸಿದರು.
ವೇದಿಕೆ ಮೇಲಿದ್ದ ಎಲ್ಲಾ ಧರ್ಮ ಗುರುಗಳು ತಮ್ಮ – ತಮ್ಮ ಕ್ರಿಸ್ಮಸ್ ಸಂದೇಶವನ್ನು ಬಹು ಅರ್ಥ ಪೂರ್ಣವಾಗಿ ನೀಡಿದರು. ಕಾರ್ಯಕ್ರಮದ ಕೇಂದ್ರ ಬಿಂದು ಯೇಸು ಜನನ ಪ್ರಕರಣ ತೋರಿಸುವ ನಾಟಕ ಅನುಗ್ರಹ ಆಂಗ್ಲ ಮಾಧ್ಯಮ ಶಾಲೆ ಹಲಬರ್ಗ ಮಕ್ಕಳಿಂದ ತುಂಬಾ ಸುಂದರವಾಗಿ ಮೂಡಿ ಬಂದಿತು. ದಿವ್ಯ ಸಾನಿಧ್ಯವನ್ನು ವಹಿಸಿದ ಪರಮ ಪೂಜ್ಯ ಶ್ರೀ ಹವಾ ಮಲ್ಲಿನಾಥ ಮಹಾರಾಜರು ನಿರುಗುಡಿರವರು ಈ ಕಾರ್ಯಕ್ರಮದ ಮೇಲೆ ನನ್ನ ಆಶೀರ್ವಾದ ಸದಾ ಇರುತ್ತದೆ ಎಂದು ತಿಳಿಸಿದರು.

ರೆವ. ಎಂ.ಪಿ ಜೈಪಾಲ್ ಚಿಯೋನ್ ಮೆಥಡಿಸ್ಟ್ ಚರ್ಚ್ ಬೀದರ್ ದಕ್ಷಿಣ ಜಿಲ್ಲಾ ಮೇಲ್ವಿಚಾರಕರು, ಮುಸ್ತಾಫ ಶೇಕ್ ಅಬ್ದುಲ್ ಗಫರ್ ಮೌಲಾನ ಸಾಬ್ ಬೀದರ್, ವ.ಫಾದರ್ ವಿಲ್ಸನ್ ಫರ್ನಾಂಡಿಸ್ ಪ್ರಧಾನ ಗುರುಗಳು ಸಂತ ಜೋಸೆಫ್ರ ದೇವಾಲಯ ಬೀದರ್, ವ. ಫಾದರ್ ಪ್ರಸನ್ನ ಕುಮಾರ್ ಅನುಗ್ರಹ ಆಶ್ರಮ ಹಲಬರ್ಗ ಬಾಲ್ಕಿ, ಪೂಜ್ಯ ಜ್ಞಾನ ಸಾಗರ ಭಂತೆ ವೈಶಾಲಿ ಬೌದ್ಧವಿಹಾರ ಆಣದೂರು, ಜ್ಞಾನಿ ದರ್ಬಾರ ಸಿಂಗ್ ಗುರುದ್ವಾರ ಶ್ರೀ ನಾನಾಕ ಜೀರ ಸಾಹೇಬ್ ಬೀದರ್ ಇವರೊಂದಿಗೆ ಮುಖ್ಯ ತಿಥಿಗಳಾಗಿ ಶ್ರೀ ಪ್ರಶಾಂತ್ ದೊಡ್ಡಿ ಸ್ಥಾಯಿ ಸಮಿತಿಯ ಅಧ್ಯಕ್ಷರು ಬೀದರ್ , ಶ್ರೀಮತಿ ದ್ರೌಪತಿ ನಗರಸಭೆ ಸದಸ್ಯರು ಶಾಗಂಜ ಬೀದರ್, ಶ್ರೀ ಸುದರ್ಶನ್ ಪೌಲ್ ಯುವ ಮುಖಂಡರು ಬೀದರ್, ಶ್ರೀ ರಾಜು ವಡಗೌಕರ್ ಉಪಾಧ್ಯಕ್ಷರು ಕರ್ನಾಟಕ ಸರ್ಕಾರಿ ಪಶು ವೈದ್ಯಕೀಯ ಪರೀಕ್ಷಕರ ಸಂಘ ಬೆಂಗಳೂರು, ಶ್ರೀ ಸಂಜು ಕುಮಾರ್ ವಾಣಿಜ್ಯ ತೆರಿಗೆ ಈ ಇಲಾಖೆ ಬೀದರ್, ಶ್ರೀ ಸುನಿಲ್ ಲೋಕೋಪಯೋಗಿ ಇಲಾಖೆ ಬೀದರ್, ಶ್ರೀ ಧನರಾಜ್ ಹಂಗರಗಿ ಮಾಜಿ ನಗರಸಭೆ ಬೀದರ್, ಶ್ರೀ ಸುಧಾಕರ್ ಬಾವಿಗೆ ಉದ್ದಿಮೆದಾರರು ಬೀದರ್,ಶ್ರೀ ಪವನ್ ಉಂಡೆ ಯುವ ಮುಖಂಡರು ಬೀದರ್, ಶ್ರೀ ಸಂಜಯ್ ಜಸ್ಸಿ ದೈಹಿಕ ಶಿಕ್ಷಕರು ಬೀದರ್, ಶ್ರೀ ಸೈಮನ್ ಜಶ್ವ ಸದಸ್ಯರು ನಗರಸಭೆ ಬೀದರ್, ಶ್ರೀ ಪ್ರವೀಣ್ ಕ್ರೀಷ್ಟ್ ಸಮಾಜ ಸೇವಕರು ಬೀದರ್, ಶ್ರೀ ಆನಂದ ಘಂಟೆ ಜಿಲ್ಲಾಧ್ಯಕ್ಷರು ಜಯ ಕರ್ನಾಟಕ ಸಂಘಟನೆ ಬೀದರ್, ಶ್ರೀ ಇಮಾನುವೆಲ್ ಹೊಸಮನಿ ಜೆಸ್ಕಾಂ ಔರಾದ್, ಶ್ರೀ ಆಕಾಶ್ ಹೊಸಮನಿ ಅಧ್ಯಕ್ಷರು ಅಲ್ಫಬೆಟ್ ಶಾಲೆ ಬೀದರ್, ಕುಮಾರಿ ಡಾ. ಮೇರಿಬಿವಲ ಶಿಕ್ಷಕರು ಮಾಳಶಾಪುರ ಬೀದರ್, ಶ್ರೀ ಮಾಜಿದ್ ಬಿಲಾಲ್ ಸಮಾಜಸೇವಕರು ಬೀದರ್,ಶ್ರೀ ಪ್ರಭು ಪಾಟೀಲ್ ಸಮಾಜ ಸೇವಾ ಪ್ರಶಸ್ತಿ ಪುರಸ್ಕೃತರು ಬೀದರ್, ಶ್ರೀ ಸಾವನ್ ಕೋಟೆ ಸಮಾಜ ಸೇವಕರು ಬೀದರ್, ಶ್ರೀ ಜಯಪ್ರಕಾಶ್ ಸಮಾಜ ಸೇವಕರು ಬೀದರ್,ಶ್ರೀ ಅಲೆನ್ ಅಂಡ್ರೋ ಉಪಾಧ್ಯಕ್ಷರು ಜೈ ಕರ್ನಾಟಕ ಸಂಘಟನೆ ಬೀದರ್,ಶ್ರೀ ವಿಶಾಲ್ ಜೋಸೆಫ್ ಸಮಾಜ ಸೇವಕರು ಬೀದರ್, ಶ್ರೀ ಪಪ್ಪು ಪಾಟೀಲ್ ಖಾನಾಪುರ ಅಧ್ಯಕ್ಷರು ಜೈ ಭಾರತ್ ಮಾತಾ ಬೀದರ್, ಶ್ರೀ ಪೀಟರ್ ಚಿಟ್ಗುಪ್ಪ ಜಿಲ್ಲಾಧ್ಯಕ್ಷರು ಕನ್ನಡ ರಕ್ಷಣಾ ವೇದಿಕೆ ಬೀದರ್, ಶ್ರೀ ರಾಜು ಸೋನೆ ಅಧ್ಯಕ್ಷರು ಎಚ್ ಟಿ ಎಸ್ ಟಿ ಗುತ್ತಿಗೆದರ ಸಂಘ ಬೀದರ್, ಶ್ರೀ ಜಾರ್ಜ್ ಒಳಗಿ ಸಮಾಜ ಸೇವಕರು ಬೀದರ್, ಶ್ರೀ ಸುಧೀರ್ ಎಸ್ ಡಿ ಎ ಸಂತ ಜೋಸೆಫ್ ರ ಶಾಲೆ ಬೀದರ್, ಶ್ರೀ ಶ್ರೀಮಂತ ಯುವ ಮುಖಂಡರು ಬೀದರ್, ಶ್ರೀ ರಾಜಕುಮಾರ್ ಟೆಳ್ಳೆಕರ್ ಕರ್ನಾಟಕ ಯುವ ಘರ್ಜನೆ ಸಂಘಟನೆ ಬೀದರ್ ಜಿಲ್ಲಾಧ್ಯಕ್ಷರು ಭಾಗವಹಿಸಿದರು.
ಈ ಕಾರ್ಯಕ್ರಮವು ತುಂಬಾ ಅರ್ಥಪೂರ್ಣವಾಗಿ ಜರುಗಿತು ಇದೇ ಸಮಯದಲ್ಲಿ ಆಯ್ದ 150ಕ್ಕೂ ಹೆಚ್ಚು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ವೇದಿಕೆ ಮೇಲೆ ಸನ್ಮಾನ ಮಾಡಲಾಯಿತು.

ನೇತ್ರದಾನ ದಾನಗಳಲ್ಲಿ ಒಂದು ದೊಡ್ಡ ದಾನ ಇದರಿಂದ ಕಣ್ಣಿಲ್ಲದವರು ಈ ಜಗತ್ತನ್ನು ನೋಡಬಹುದು ಎಂದು ನೇತ್ರದಾನದ ಮಹತ್ವವನ್ನು ತಿಳಿಸಿದ ಕಾರ್ಯಕ್ರಮದ ಅಧ್ಯಕ್ಷರು ಮತ್ತು ಆಯೋಜಕರಾದ ಶ್ರೀ ಮಹಾನ್ ಕೋಟೆ ಅವರು ಮಾಧ್ಯಮದ ಮುಖಾಂತರ ನೇತ್ರದಾನಕ್ಕೆ ನಾವೆಲ್ಲರೂ ಮುಂದಾಗಬೇಕು ಎಂದು ವಿನಂತಿಸಿಕೊಂಡರು. ಹಾಗೆಯೇ ಮುಂದಿನ ವರ್ಷವೂ ಈ ಕಾರ್ಯಕ್ರಮವು ಅದ್ದೂರಿಯಾಗಿ ನಡೆಯಲು ಪ್ರತಿಯೊಬ್ಬರ ಸಹಾಯವನ್ನು ಕೇಳಿದರು. ಈ ಕಾರ್ಯಕ್ರಮಕ್ಕೆ ಸಹಾಯ ನೀಡಿದ ಪ್ರತಿಯೊಬ್ಬರಿಗೂ ಅದರಲ್ಲಿಯೂ ವಿಶೇಷವಾಗಿ ಪೊಲೀಸ್ ಇಲಾಖೆ, ಪತ್ರಕರ್ತರು, ನಗರಸಭೆಯ ಅಧಿಕಾರಿಗಳಿಗೆ ಎಲ್ಲರಿಗೂ ಧನ್ಯವಾದಗಳು ಸಲ್ಲಿಸಿ ಕ್ರಿಸ್ಮಸ್ ಹಬ್ಬದ ಹಾಗೂ ಹೊಸ ವರ್ಷದ ಶುಭಾಶಯಗಳು ಅನುದಿನ ಮಾನವೀಯತೆ ಫೌಂಡೇಶನ್ ವತಿಯಿಂದ ಕೋರಿದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ