ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಸನವಳ್ಳಿ ಗ್ರಾಮದಲ್ಲಿ ಕೃಷಿ ಇಲಾಖೆ ಮುಂಡಗೋಡ ಹಾಗೂ ಕೃಷಿಕ ಸಮಾಜ ಮುಂಡಗೋಡ ಇವರ ಸಹಯೋಗದೊಂದಿಗೆ ಕಿಸಾನ್ ಗೋಷ್ಠಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಕೃಷಿ ಇಲಾಖೆ ಮುಂಡಗೋಡ ಸಹಾಯಕ ಕೃಷಿ ನಿರ್ದೇಶಕರಾದ ಕೃಷ್ಣಪ್ಪ ಮಹಾ ರೆಡ್ಡಿ, ಸಾಲಗಾಂವ್ ಪಂಚಾಯ್ತಿ ಅಧ್ಯಕ್ಷರಾದ ಗಣಪತಿ ಬಾಳಮ್ಮನವರ್ ಸದಸ್ಯರಾದ ಪುಟ್ಟಪ್ಪ ಗುಲ್ಯಾನ್ವರ್, ಕೃಷಿಕ ಸಮಾಜ ಮುಂಡಗೋಡ ಅಧ್ಯಕ್ಷರು ಮತ್ತು ಸದಸ್ಯರು ಸಂಪನ್ಮೂಲ ವ್ಯಕ್ತಿಗಳಾದ ಬಸವರಾಜ್ ಈರಯ್ಯ ನಡುವಿನಮನಿ ಮತ್ತು ರೇವಣಸಿದ್ದೇಶ್ವರ ವಿ ಎಲ್ ಮತ್ತು ಆತ್ಮ ಯೋಜನೆಯ ಸಿಬ್ಬಂದಿ ಭಾಗವಹಿಸಿದ್ದರು.
ಈ ಕಾರ್ಯಕ್ರಮದಲ್ಲಿ ಬಸವರಾಜ್ ಈರಯ್ಯ ನಡುವಿನಮನಿ ಅವರು ಸುಸ್ಥಿರ ಕೃಷಿಯ ಬಗ್ಗೆ ಸಾವಯವ ಕೃಷಿಯ ಬಗ್ಗೆ ಸ್ಥಳೀಯ ಸಂಪನ್ಮೂಲಗಳ ಸಮರ್ಪಕ ಬಳಕೆ ಬಗ್ಗೆ ಸವಿಸ್ತಾರವಾಗಿ ಮಾತನಾಡಿದರು.
ರೇವಣಸಿದ್ದೇಶ್ವರ ವಿಎಲ್ ಅವರು ಕೃಷಿ ಬೆಳೆಗಳಲ್ಲಿ ಕೀಟ ನಿಯಂತ್ರಣ ರೋಗಗಳ ನಿಯಂತ್ರಣ ಮಣ್ಣಿನ ಆರೋಗ್ಯದ ಬಗ್ಗೆ ವಿವರವಾಗಿ ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಆತ್ಮ ಯೋಜನೆ ಅಡಿ ವಿವಿಧ ವಿಭಾಗದಲ್ಲಿ ಆಯ್ಕೆಯಾದ ಶ್ರೇಷ್ಠ ಕೃಷಿಕರಿಗೆ ಸನ್ಮಾನಿಸಲಾಯಿತು.
ಛಾಯಪ್ಪ ಮಲ್ಲಪ್ಪ ಕೆಂಚಗೊಣ್ಣನವರ್ (ಸಾವಯವ ಕೃಷಿ), ಶಂಕರಯ್ಯ ದೊಡ್ಡಯ್ಯ ಹಿರೇಮಠ (ವೈಜ್ಞಾನಿಕ ಯಂತ್ರೋಪಕರಣ) , ಪ್ರಸನ್ನ ತಿರುಮಲೇಶ್ವರ ಹೆಗಡೆ,(ತೋಟಗಾರಿಕೆ) ರಾಘವೇಂದ್ರ ನಾರಾಯಣ ಚಿಗಳ್ಳಿ( ಪಶು ಸಂಗೋಪನೆ) ಕಿರಣ್ ಸಿ ಪಾಟೀಲ್ (ಸಮಗ್ರ ಕೃಷಿ ಪದ್ಧತಿ) ವಿಭಾಗದಲ್ಲಿ ಸಾಧನೆಗೈದ 5 ಜನ ರೈತರನ್ನು ಸನ್ಮಾನಿಸಲಾಯಿತು.
