ಕಲ್ಬುರ್ಗಿ ಜಿಲ್ಲೆಯ ಸನ್ನತಿಯಿಂದ ಹಮ್ಮಿಕೊಂಡಿರುವ ಪಂಚಶೀಲಾ ಪಾದಯಾತ್ರೆ ಭಗವಾನ್ ಬುದ್ಧರ ಪವಿತ್ರ ಅಸ್ಥಿ ಮೆರವಣಿಗೆಯು ಮಂಗಳವಾರ ರಾತ್ರಿ ಹೊಸಪೇಟೆ ಹಾದು ಹೋಗುವ ಮಾರ್ಗವಾಗಿ ಗುಡೆಕೋಟೆ ಗೆ ಆಗಮಿಸಿದಂತ ಸಂದರ್ಭದಲ್ಲಿ ಡಿಎಸ್ಎಸ್ ಸಂಘದ ವತಿಯಿಂದ ಸ್ವಾಗತ ಮಾಡಿದರು.
ಬೌದ್ಧ ಸನ್ಯಾಸಿಗಳಾದ ಬಂತೆ ಆಜಪಾಲ್ ಥೇರೋ, ಬಂತೆ ಯಶಪಾಲ ಥೇರೋ, ಮಾತನಾಡಿ ಅಂತರಾಷ್ಟ್ರೀಯ ಮಟ್ಟದ ಬಹುದ್ದ ಕ್ಷೇತ್ರವಾಗಿರುವ ಸನ್ನತಿಯಲ್ಲಿ ಸುಮಾರು 200 ಎಕರೆ ಪ್ರದೇಶದಲ್ಲಿ ಜಾಗತಿಕ ಮಟ್ಟದ ಟೀಮ್ ಪಾರ್ಕ್ ಹಾಗೂ ಸೆವೆನ್ ಸ್ಟಾರ್ ಸ್ಮಾರಕವನ್ನು ನಿರ್ಮಿಸಲು 500 ಕೋಟಿ ಹೆಚ್ಚು ಅನುದಾನದ ನೀಡಬೇಕು ಹಾಗೂ ಸಂವಿಧಾನದ ಶಿಲ್ಪಿ ಡಾಕ್ಟರ್ ಬಿಆರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕಲ್ಪನೆಯ ಪ್ರಬುದ್ಧ ಭಾರತ ನಿರ್ಮಿಸಲು ಹೊತ್ತು ನೀಡಬೇಕು ಬೌದ್ಧರ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಬೇಕು ಬುದ್ಧ ಪೂರ್ಣಿಮೆಯಂದು ಸರಕಾರಿ ರಜೆ ಘೋಷಿಸಬೇಕು ಇನ್ನೂ ಹಲವಾರು ಬೇಡಿಕೆಗಳನ್ನು ಈಡೇರಿಕೆಗೆ ಆಗ್ರಹಿಸಿ 70 ದಿನಗಳ ಕಾಲ ಸನ್ನತಿ ಪಂಚಮಶೀಲ ಪಾದಯಾತ್ರೆ ನಡೆಸಿ ಸಿಎಂ ಗೆ ಮನವಿ ಸಲ್ಲಿಸಲಾಗುವುದು ಇನ್ನೂ ಹಲವಾರು ಡಿಎಸ್ಎಸ್ ಸಂಘಟನೆಗಳು ಮುಖಂಡರು ಸಾರ್ವಜನಿಕರು,ಜ. 24 ರಂದು ಬೆಂಗಳೂರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ತಿಳಿಸಿದರು.
ಡಿಎಸ್ಎಸ್ ನ ಮುಖಂಡರಾದ ರಾಜಣ್ಣ, ನಾಗರಾಜ್, ಎನ್ ಜಯರಾಮ್, ಬಿಲ್ ಕಲೆಕ್ಟರ್ ಹನುಮಂತ, ಊರಿನ ಹಿರಿಯರು, ಕಿರಿಯರು ಇನ್ನೂ ಮುಖಂಡರು ಸೇರಿ ಸ್ವಾಗತ ಕೋರಿದರು.
ವರದಿ : ಗುರುರಾಜ್ ಎಲ್, ಕಲ್ಲಹಳ್ಳಿ ಟಿ
