ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಅಡುಗೆ ಮನೆ ಸಾಧಕಿಯರಿಗೊಂದು ಈ ವೇದಿಕೆ ಹೊಸ ಪ್ರಯೋಗ : ದೊಡ್ಡಪ್ಪಗೌಡ ಪಾಟೀಲ್

ಕಲಬುರಗಿ/ ಜೇವರ್ಗಿ: ಹೆಣ್ಣು ಜಗತ್ತಿನ ಕಣ್ಣು,ಅವರಲ್ಲಿ ಅಡಗಿರುವ ವಿವಿಧ ರೀತಿಯ ಕಲೆಗಳನ್ನು ಹೊರ ಹಾಕಲಿಕ್ಕೆ ಸಿದ್ದಪಡಿಸಿದ ಈ ಸಾಧಕರ ವೇದಿಕೆಯೇ ಅಡುಗೆ ಮನೆಯ ಸಾಧಕಿಯರ ವೇದಿಕೆಯಾಗಿದೆ ಎಂದು ಮಾಜಿ ಶಾಸಕರು ಹಾಗೂ ಕರ್ನಾಟಕ ರಾಜ್ಯ ಜೆಡಿಎಸ್ ಪಕ್ಷದ ರಾಜ್ಯ ಕಾರ್ಯಾಧ್ಯಕ್ಷರಾದ ದೊಡ್ಡಪ್ಪಗೌಡ ಪಾಟೀಲ್ ನರಿಬೋಳರವರು ಜ್ಯೋತಿ ಬೆಳಗಿಸಿ ತಮ್ಮ ನುಡಿಗಳನ್ನು ವ್ಯಕ್ತ ಪಡಿಸಿದರು‌.

ಕರ್ನಾಟಕ ರಾಜ್ಯ ಬರಹಗಾರರ ಸಂಘ ಹೂವಿನಹಡಗಲಿ (ರಿ.) ಯ ಜಿಲ್ಲಾಧ್ಯಕ್ಷರಾದ ಮಹಾಂತೇಶ ಮಾಲಿ ಪಾಟೀಲ್ ಯಾತನೂರ ರವರ ನೇತೃತ್ವದಲ್ಲಿ ಜೇವರ್ಗಿ ತಾಲೂಕು ಬರಹಗಾರರ ಸಂಘದ ತಾಲೂಕು ಅಧ್ಯಕ್ಷೆಯಾದ ಶ್ರೀಮತಿ ಜ್ಯೋತಿ ಮಾಲಿ ಪಾಟೀಲ್ ರವರು ಹಾಗೂ ಸುಧಾ ಬೆಣ್ಣೂರ ರವರು ಅಡುಗೆ ಮನೆಯ ಸಾಧಕಿಯರಿಗೊಂದು ವೇದಿಕೆಯನ್ನು ಕಲ್ಪಿಸಿ ಕವಿಗೋಷ್ಠಿ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭ ಹಮ್ಮಿಕೊಂಡು ಹಲವಾರು ಚಿಂತನೆಗಳನ್ನು ಈ ಕಾರ್ಯಕ್ರಮದಲ್ಲಿ ಮೂಡಿಸಿದರು. ಈ ಸಂದರ್ಭದಲ್ಲಿ ಜ್ಯೋತಿ ಮಾಲಿ ಪಾಟೀಲ್ ರವರು ಮಾತನಾಡಿ ಮಹಿಳೆಯು ನಾಲ್ಕು ಗೋಡೆಗಳ ಮಧ್ಯೆ ಕುಟುಂಬ ನಿರ್ವಹಣೆಗಷ್ಟೇ ಸೀಮಿತವೆಂಬ ಕಾಲ ಬದಲಾಗಿದೆ. ಮಹಿಳೆಯರು ಈಗ ಪುರುಷರಿಗೆ ಸರಿ ಸಮಾನ, ಮಹಿಳೆಯರು ಸ್ವಯಂ ಉದ್ಯೋಗದ ಮೂಲಕ ಬದುಕು ಕಟ್ಟಿಕೊಂಡು ಆರ್ಥಿಕವಾಗಿ ಸಬಲರಾಗಬೇಕು ಉನ್ನತ ಸ್ಥಾನ ಅಲಂಕರಿಸಿ ಪುರುಷರಿಗೆ ಹಾಗೆ ಸಮನಾಗಿ ಬಾಳಬೇಕು. ಮಹಿಳಾ ಸಬಲೀಕರಣ ಎಂದರೆ ಮಹಿಳೆಯರ ಸುರಕ್ಷತೆಗೆ ಒತ್ತು ನೀಡುವುದಾಗಿದೆ. ಮಹಿಳೆಯರ ಮೇಲೆ ಸಮಾಜದಲ್ಲಿ ನಡೆಯುವ ದೌರ್ಜನ್ಯದ ಬಗ್ಗೆ ಅರಿವು ಮೂಡಿಸಿ ಧೈರ್ಯ ತುಂಬಿ ಸ್ವಾವಲಂಬಿಗಳಾಗಿಸಬೇಕು. ವೇದಗಳ ಕಾಲದಲ್ಲೂ ಮಹಿಳೆಯರಿಗೆ ಸಮಾನ?ಅವಕಾಶಗಳಿದ್ದವು. ಮಹಿಳೆಯರನ್ನು ಕುಟುಂಬಕ್ಕೆ ಸೀಮಿತಗೊಳಿಸದೆ ಎಲ್ಲಾ ಕ್ಷೇತ್ರದಲ್ಲೂ ಭಾಗವಹಿಸುವಂತೆ ಅವಕಾಶ ಕಲ್ಪಿಸಬೇಕು’ ಎಂದು ಹೇಳಿದರು.

ಸಮಾರಂಭದಲ್ಲಿ ಸೊನ್ನದ ಡಾ.ಶಿವಾನಂದ ಸ್ವಾಮೀಜಿ, ಯಡ್ರಾಮಿಯ ಸಿದ್ದಲಿಂಗ ಸ್ವಾಮೀಜಿ ಸಾನಿದ್ಯ ವಹಿಸಿದ್ದರು. ಸಂಘಟನೆಯ ತಾಲೂಕು ಘಟಕದ ಅಧ್ಯಕ್ಷೆ ಜ್ಯೋತಿ ಮಾಲಿ ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಕಸಾಪ ಗೌರವ ಅಧ್ಯಕ್ಷರಾದ ಚನ್ನಮಲ್ಲಯ್ಯ ಸ್ವಾಮಿ ಹಿರೇಮಠ, ಶೋಭಾ ಬಾಣಿ, ವಚನ ಸಾಹಿತ್ಯ ತಾಲೂಕು ಅಧ್ಯಕ್ಷರಾದ ಕಲ್ಯಾಣಕುಮಾರ ಸಂಗಾವಿ, ಬಸವ ಕೇಂದ್ರದ ಅಧ್ಯಕ್ಷ ಶರಣಬಸವ ಕಲ್ಲಾ, ಕ.ಸಾ.ಪ ತಾಲೂಕ ಅಧ್ಯಕ್ಷ ಎಸ್.ಕೆ.ಬಿರಾದಾರ, ವೀರೇಶ ಕಂದಗಲ್, ಡಾ.ಪಿ.ಎಂ.ಮಠ, ರಾಜಶೇಖರಗೌಡ ಮಾಲಿ ಪಾಟೀಲ್ ಜೈನಾಪೂರ, ಜೀ ವಾಹಿನಿಯ ಉಲ್ಲಾಸ ಗುರುಮಠ, ಸದಾನಂದ ಪಾಟೀಲ್, ಅಂಬೋಜಿ, ಶ್ರೀ ಹರಿ ಕರಕಿಹಳ್ಳಿ, ಶರಣಗೌಡ ಪಾಟೀಲ ಜೈನಾಪೂರ,ಮಹಾಲಕ್ಷ್ಮೀ ಕಾಲೇಜ್ ಪ್ರಾಚಾರ್ಯರಾದ ಡಾ.ಧರ್ಮಣ್ಣ ಬಡಿಗೇರ, ಜ್ಯೋತಿ ಮಾಲಿ ಪಾಟೀಲ್, ಮಲ್ಲಿಕಾರ್ಜುನ ಬಿಲ್ದಾರ, ಸಂಘಟನಾ ಕಾರ್ಯದರ್ಶಿಗಳಾದ ಶ್ರೀಮತಿ ಸುಧಾ ಬೆಣ್ಣೂರವರು ಪ್ರಾಸ್ತಾವಿಕ ನುಡಿಗಳನ್ನು ಹೇಳಿದರು. ಭಗವಂತ್ರಾಯ ಬೆಣ್ಣೂರ, ಖಜಾಂಚಿ ಬಸಯ್ಯ ಶಾಸ್ತ್ರಿ,ಬಸವರಾಜ ಬಾಗೇವಾಡಿ, ಕ.ರಾ.ರೈತ ಸಂಘ ಜಿಲ್ಲಾಧ್ಯಕ್ಷರಾದ ಪ್ರಶಾಂತಗೌಡ ಮಾಲಿ ಪಾಟೀಲ್, ಶಿವಾನಂದ ಘಂಟಿಮಠ, ಐ.ಎಸ್.ಹಿರೇಮಠ, ಡಾ.ಮಹಾಂತೇಶ ಹಿರೇಮಠ, ಕ.ರಾ.ಬರಹಗಾರರ ಸಂಘದ ಜಿಲ್ಲಾಧ್ಯಕ್ಷರು ಹಾಗೂ “ತಿಳಿದುಕೋ ವಿಕಟ ವಚನ ಸಾಹಿತ್ಯ”ಪುಸ್ತಕ ಬಿಡುಗಡೆವಮಾಡಿದ ಮಹಾಂತೇಶ ಮಾಲಿ ಪಾಟೀಲ್ ಯಾತನೂರ, ಉರಗ ತಜ್ಞ ಅನೀಲ ಪವಾರ, ಪ್ರಮೋದ್ ದೊರೆ ಸೇರಿದಂತೆ ಹಲವಾರು ಜನ ಭಾಗವಹಿಸಿದ್ದರು. ಸಾಹಿತಿ ಸದಾನಂದ ಪಾಟೀಲ್ ಸ್ವಾಗತಿಸಿ, ಬಸವರಾಜ ಬಾಗೆವಾಡಿ ನಿರೂಪಿಸಿದರು.

ವರದಿ: ಚಂದ್ರಶೇಖರ ಪಾಟೀಲ್ ಗುಡೂರ ಎಸ್ ಎನ್‌.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ