
ಬಾಗಲಕೋಟೆ ಜಿಲ್ಲೆಯ ಮುಧೋಳ ನಗರದ ಗಾಂಧಿ ಸರ್ಕಲ್ ನ ಶ್ರೀ ಹನುಮಾನ್ ಯುವಕ ಸಂಘದ ವತಿಯಿಂದ ಆಂಜನೇಯ ದೇವಸ್ಥಾನ ಕಾರ್ತಿಕೋತ್ಸವ ನಿಮಿತ್ಯವಾಗಿ ಅನ್ನಪ್ರಸಾದ ಹಾಗೂ ಸಂಜೆ ದೀಪೋತ್ಸವ ವಿಜೃಂಭಣೆಯಿಂದ ನೆರವೇರಿತು. ಕಾರ್ತಿಕೋತ್ಸವದಲ್ಲಿ ನಗರದ ಭಕ್ತ ಸಮೂಹ ಸಾರ್ವಜನಿಕರು ತಂಡೋಪತಂಡವಾಗಿ ಮುಧೋಳ ನಗರದ ಸದ್ಭಕ್ತರು ಅನ್ನಪ್ರಸಾದ ಸವಿದು ಆಶೀರ್ವಾದ ಪಡೆದರು.
ಈ ಕಾರ್ಯಕ್ರಮವನ್ನು ಶ್ರೀ ಹನುಮಾನ್ ಸಂಘದ ಪದಾಧಿಕಾರಿಗಳಾದ ಮಹೇಶ್ ಹಡಪದ್, ಶ್ರೀಶೈಲ್ ತಾಂಬೋಳಿ, ರಾಘು ಸುಲಾಕೆ, ಅಜಯ್ ಗೌಳಿ, ತುಕಾರಾಂ ಬೋಯಿ, ರಾಮಕೃಷ್ಣ ಮೋಹಿತೆ, ಹನುಮಂತ್ ಕಳಸಗೊಪ್ಪ, ದಯಾನಂದ ವಸ್ತ್ರದ್ ಸುನಿಲ್ ಸಕ್ರಿ, ಪರಶುರಾಮ್ ಸುಲಾಕೆ, ವೆಂಕಟೇಶ್ ತಾಂಬೋಳಿ, ಚುಡು ವಸ್ತ್ರದ್, ಅಕ್ಷಯ್ ಮುತ್ತೂರು, ಉಮೇಶ್ ಗಡ್ಡಿ ಸೇರಿದಂತೆ ಸರ್ವ ಸೇವಾ ಸದಸ್ಯರು ಯಶಸ್ವಿಯಾಗಿ ನೆರವೇರಿಸಿದರು
