ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಸಿ ಕೆ ಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಹರಿಹರಪುರ ಗ್ರಾಮದ ಬೂತಮ್ಮನವರು ಕುಟುಂಬ ಸಮೇತ ಗುಡಸಿನಲ್ಲಿ ವಾಸವಿದ್ದು ಅವರು ವಾಸವಿದ್ದ ಗುಡಿಸಲಿಗೆ ಅಕಸ್ಮಿಕವಾಗಿ ಬೆಂಕಿ ಬಿದ್ದು ಮನೆಯಲ್ಲಿ ಇದ್ದ ದವಸ ಧಾನ್ಯ ಮತ್ತು ಮಕ್ಕಳಿಗೆ ಸಂಬಂಧಿಸಿದ ವಿದ್ಯಾಭ್ಯಾಸದ ದಾಖಲೆ ಮತ್ತು ದಿನ ಬಳಕೆಯ ವಸ್ತುಗಳು ಸುಟ್ಟು ಕರಕಲಾಗಿವೆ.
ಈ ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ದೌಡಾಯಿಸಿ ಮಾಜಿ ಶಾಸಕರಾದ ಕೆ. ಎಂ. ತಿಮ್ಮರಾಯಪ್ಪ ನವರು ಸಂಬಂಧ ಪಟ್ಟ ಅಧಿಕಾರಿಗಳ ಜೋತೆ ಮಾತನಾಡಿ ಸರ್ಕಾರದಿಂದ ಪರಿಹಾರ ಬರುವಂತೆ ಕ್ರಮ ವಹಿಸಿ ನಷ್ಟವಾದ ಕುಟುಂಬಕ್ಕೆ ನ್ಯಾಯ ಹೋದಗಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿ ಬೂತಮ್ಮನವರಿಗೆ ಅರ್ಥಿಕ ಸಹಾಯ ಮಾಡಿದರು.
ವರದಿ : ಪೃಥ್ವಿರಾಜು ಜಿ ವಿ
