ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಮೋಸದ ಜಾಲ

ಹೆಣ್ಣು-ಗಂಡು… ಸೃಷ್ಟಿಯ ಎರಡು ಕಣ್ಣು!
ಪ್ರಕೃತಿಯ ದೃಷ್ಟಿಯಲ್ಲಿ ಹೆಣ್ಣು-ಗಂಡು… ಮನುಷ್ಯರಾದವರೆಲ್ಲರೂ ಸರಿಸಮ, ಗಂಡು-ಹೆಣ್ಣಿನ ಮಧ್ಯೆ ತಾರತಮ್ಯ ಸಲ್ಲದು! ಆದರೆ ಇಲ್ಲಿ… ಕೆಲ
ಸ್ವಾರ್ಥಿಗಳು ತಮ್ಮ ಸ್ವಾರ್ಥ ಸಾಧನೆಗಾಗಿ ಧರ್ಮದ ಹೆಸರಿನಲ್ಲಿ, ದೇವರ ಹೆಸರಿನಲ್ಲಿ,ಜಾತಿಯ ಹೆಸರಿನಲ್ಲಿ, ನಾಗರಿಕತೆಯ ಹೆಸರಿನಲ್ಲಿ…ಸಂಸ್ಕೃತಿ ಎಂಬ ಸೋಗಿನಲ್ಲಿ ಕಟ್ಟುಪಾಡುಗಳನ್ನು ನಿರ್ಮಿಸಿ ಮಾಡಿದ್ದೇನು ಮಾಡುತ್ತಿರುವುದೇನು…?

ಕೆಲ ವಿದೇಶಿ ಠಕ್ಕ ನರಿಗಳು ಎ.ಸಿ, ಎಸ್ ಟಿ, ಓಬಿಸಿ ಎಂಬ ನಾಯಿ ಬೆಕ್ಕು ಕತ್ತೆ ಅಂಥ ಮೂಲ ನಿವಾಸಿ ಭಾರತೀಯ ಜನಗಳ ಮೆದುಳಿನಲ್ಲಿ ಜಾತಿ- ಧರ್ಮ, ಮೇಲು-ಕೀಳು, ವರ್ಣ ಅಸ್ಪೃಶ್ಯತೆ… ಎಂಬಿತ್ಯಾದಿ ಅಜ್ಞಾನದ ಅಂಧಕಾರವನ್ನು ತುಂಬಿ ಮಾಯದ ಬೀಗ ಜಡಿದು, ಬೀಗದ ಕೀಯನ್ನು ಯಾರಿಗೂ ಸಿಗದಂತೆ ಆಳವಾದ ಸಮುದ್ರದಲ್ಲಿ ಬಿಸಾಕಿವೆ. ಇದರಿಂದಾಗಿ ಮೂಲನಿವಾಸಿ ಭಾರತೀಯರು ತಮ್ಮ ಅಸ್ತಿತ್ವವನ್ನೇ ಕಳೆದುಕೊಂಡು ಮೂಢನಂಬಿಕೆಯ ಗಾಡಾಂಧಕಾರದಲ್ಲಿ ಮುಳುಗಿಹೋಗಿದ್ದಾರೆ. ತನ್ನ ಸ್ವಂತ ಬುದ್ಧಿಶಕ್ತಿಯನ್ನು ಗುಳ್ಳೆನರಿಯಂತಹ ಮನುವಾದಿಗಳ ಬಳಿ ಗಿರವಿ ಇಟ್ಟಿದ್ದಾರೆ. ಮನುವಾದಿ ಪೂಜಾರಿ ಹೇಳಿದ್ದನ್ನೇ ಕೇಳುತ್ತಾ ತನಗರಿಯದಂತೆ ಗುಲಾಮಗಿರಿ ಮಾಡುತ್ತಾ ಗುಲಾಮಗಿರಿಯಲ್ಲಿಯೇ ಮಜವನ್ನು ಕಾಣುತ್ತಾ ಎಳ್ಳಷ್ಟು ನಾಚಿಕೆ ಪಟ್ಟುಕೊಳ್ಳದೆ ನಪುಂಸಕರಂತೆ ಹೀನಾಯವಾದ ಬಾಳನ್ನು ಬಾಳುತ್ತಿರುವಾಗ…ಈ ದುರಂತವನ್ನು ಸರಿಪಡಿಸುವುದಕ್ಕಾಗಿ ಬುದ್ಧ, ಬಸವ, ಪುಲೆ, ಪೆರಿಯಾರ್, ಅಂಬೇಡ್ಕರ್, ಸಾಹು, ಕುವೆಂಪು,ಕನಕ… ಅವರಂತಹ ಇನ್ನೂ ಅನೇಕ ಜನ ಮಹಾಪುರುಷರು ಹುಟ್ಟಿ ಬಂದು ಜ್ಞಾನವೆಂಬ ಸಾಗರದಲ್ಲಿ ಈಜಾಡಿ- ಹೋರಾಡಿ ಮೂಲನಿವಾಸಿ ಭಾರತೀಯರ ಮೆದುಳಿಗೆ ಹಾಕಿದ ಬೀಗದ ಕೀ ತೆಗೆಯಲು ಪ್ರಯತ್ನಿಸಿದರು.

“ಶಿಕ್ಷಣ ಸಂಘಟನೆ ಹೋರಾಟ”
ಎಂಬ ಕೀ ಯಿಂದ ತಮ್ಮ ಮೆದುಳಿಗೆ ಹಾಕಿದ ಬೀಗ ತೆಗೆದು ಬಿಸಾಕಬಹುದು. ಸ್ವಾರ್ಥ ಸಾಧನೆಗಾಗಿ ತಮ್ಮ ಮೆದುಳಲ್ಲಿ ತುಂಬಿದ ಮೂಢನಂಬಿಕೆಯ ಅಜ್ಞಾನದ ಅಂಧಕಾರವನ್ನು ಸಂಪೂರ್ಣವಾಗಿ ಹೋಗಲಾಡಿಸಿಕೊಳ್ಳಬಹುದು” ಎಂದು ಹೇಳಿ ತೊಳೆದ ಮುತ್ತಿನಂತೆ ಮಿಂಚಿ ಮರೆಯಾಗಿ ಹೋದರು- ಅಮರರಾಗಿ ಹೋದರು. ಆದರೆ… ಆಗಿದ್ದೇನು? ನಡೆದಿದ್ದೇನು? ದುರಂತದ ವಿಪರ್ಯಾಸದ ಸಂಗತಿ ಏನು ಅಂದರೆ, ತಮ್ಮ ಮಹಾಪುರುಷರು ಕಂಡುಹಿಡಿದ ಜ್ಞಾನವೆಂಬ ಬೀಗದ ಕೀಯಿಂದ, ತಮ್ಮ ಮೆದುಳಿಗೆ ವಿದೇಶಿ ಗುಳ್ಳೆನರಿಗಳು ಹಾಕಿದ ಆ ಬೀಗ ತೆಗೆದು ಬಿಸಾಕಿ ತಮ್ಮ ಬ್ರೈನ್ ವಾಶ್ ಮಾಡಿಕೊಳ್ಳದೆ, ತಮ್ಮ ಮಹಾಪುರುಷರು ಕಂಡುಹಿಡಿದ ಆ “ಕೀ” ಪುನಃ ತಮ್ಮ ಶತ್ರುಗಳ ಕೈಗೆ ನೀಡಿ ಕೆಲವರು ಕಂಗಾಲಾದರೆ, ಇನ್ನೂ ಕೆಲವರು ತಮ್ಮ ಆ ಹಳೆ ಚಾಳಿಯನ್ನೇ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ ಎಂದು ಹೇಳಲು ವಿಷಾದ ಉಂಟಾಗುತ್ತದೆ.

ಬಂಧುಗಳೇ…
ಭಾರತದ ಬಂಗಾರದ ಜಿಂಕೆ ಮತ್ತು ವಿದೇಶಿ ಠಕ್ಕ ನರಿಯ ಮಧ್ಯೆ ಯುದ್ಧ ನಡೆದಿದೆ. ಯುದ್ಧದಲ್ಲಿ ಠಕ್ಕನರಿ ಗೆದ್ದಿದೆ. ಅಮಾಯಕ ಜಿಂಕೆ ಸೋತಿದೆ. ಶತ-ಶತಮಾನಗಳಿಂದಲೂ ಸೋತ ಜಿಂಕೆಯನ್ನು ಕಡೆಗಣಿಸುತ್ತಾ ಬರಲಾಗಿದೆ. ಕೆಲ ನರಿಗಳು ಪುರಾಣಗಳಲ್ಲಿ, ಇತಿಹಾಸದ ಪುಟಗಳಲ್ಲಿ ಸ್ವಾರ್ಥ ಸಾಧನೆಗಾಗಿ ತಮ್ಮ ಪರ ಬರೆದುಕೊಂಡಿವೆ. ಇತಿಹಾಸ ಗೆದ್ದವರು ಪರ ಬರೆಯಲಾಗುತ್ತದೆ.ಇತಿಹಾಸ ಬರೆಯುವನು ಗೆದ್ದವರ ಪರ ಬರೆಯುತ್ತಾನೆ.ಸೋತವರ ಪರ ಇರುವುದಿಲ್ಲ!
ಜಿಂಕೆಯ ಇತಿಹಾಸ ಬರೆಯಲು ಠಕ್ಕ ನರಿಯ ಕೈಯಲ್ಲಿ ಕೊಟ್ಟರೆ ಅದನ್ನು ನಿಯತ್ತಾಗಿ ಬರೆಯಲು ಹೇಗೆ ಸಾಧ್ಯ…!? ಭಾರತದ ಇತಿಹಾಸ ಕಂತೆ ಪುರಾಣಗಳಿಂದ ಕೂಡಿದೆ. ಭಾರತದ ಮೂಲನಿವಾಸಿಗಳು ಶೀಘ್ರದಲ್ಲಿಯೇ ಜಾಗೃತಗೊಂಡು ನಿಜ ಇತಿಹಾಸ ಬರೆಯಬೇಕಾಗಿದೆ!
ಹೊಸ ಇತಿಹಾಸ ಸೃಷ್ಟಿಸಬೇಕಾಗಿದೆ…! ಜಾತಿ-ಧರ್ಮವನ್ನು ಧಿಕ್ಕರಿಸಬೇಕಾಗಿದೆ!!
ಧಾರ್ಮಿಕ ಭಯೋತ್ಪಾದಕರ ವಿರುದ್ಧ ಸಮರ ಸಾರಬೇಕಾಗಿದೆ.
ಮೇಲು-ಕೀಳು, ವರ್ಣ – ಅಸ್ಪೃಶ್ಯತೆ, ದೇವರು, ಧರ್ಮ, ವಿಷ್ಣು ಪುರಾಣ, ಶಿವ ಪುರಾಣ, ಗರುಡ ಪುರಾಣ, ಭವಿಷ್ಯ ಪುರಾಣ, ಆ ಪುರಾಣ-ಈ ಪುರಾಣ… ಮನಸ್ಸಿಗೆ ಬಂದಿದ್ದೆಲ್ಲವನ್ನೂ ಬರೆದು
ನಿನ್ನಂಥ ಅಮಾಯಕ ಮುಗ್ಧ ಜನರಿಗೆ ಮಂಕು ಬೂದಿ ಎರಚಿ ಮರಳು ಮಾಡಿದ್ದಾರೆ ತಮ್ಮ ಇಂಥ ಹಾದರದ ಕಥೆಗಳನ್ನೇ ನಂಬಿ ನಿನ್ನ ಪೂರ್ವಜರು ಮತ್ತು ನೀನು ಮೋಸ ಹೋಗುತ್ತಲೇ ಬಂದಿದ್ದೀರಿ…! ಈ ಮೋಸದ ಜಾಲದಿಂದ ಹೊರಬರಬೇಕು ಅಂದ್ರೆ ಬಹುಜನರು ಬರೆದ ನಿಜ ಇತಿಹಾಸ ಓದಿ ತಿಳಿದುಕೊಳ್ಳಬೇಕಾಗಿದೆ. ಎಚ್ಚೆತ್ತುಕೊಳ್ಳಬೇಕಾಗಿದೆ,
ಭ್ರಮೆಯ ಪೊರೆ ಕಳಚಬೇಕಾಗಿದೆ, ಭ್ರಮೆಯ ಪೊರೆ ಕಳಚಿದ್ದಾಗ ಕಹಿ ನಗ್ನ ಸತ್ಯ ಅನಾವರಣಗೊಳ್ಳುತ್ತದೆ. ಸುಳ್ಳನ್ನು ಧಿಕ್ಕರಿಸಿ ಸತ್ಯದ ಮಾರ್ಗದಲ್ಲಿ ನಡೆದಾಗ ಬದುಕು ಹಸನಾಗುತ್ತದೆ…!
ಕೆಳವರ್ಗದ ಜನಗಳು ಎನಿಸಿಕೊಂಡ (ಭಾರತೀಯ) ಮೂಲನಿವಾಸಿಗಳು ತಮಗೆ ಕಷ್ಟಗಳು ಬಂದರೆ ಬ್ರಾಹ್ಮಣರ,ಜ್ಯೋತಿಷಿಗಳ, ಬಾಬಾಗಳ, ಇದ್ದಬಿದ್ದ ದೇವರುಗಳ ಹತ್ತಿರ ಹೋಗುತ್ತಾರೆ. ಬ್ರಾಹ್ಮಣರಿಗೆ ಕಷ್ಟಬಂದಾಗ ಎಲ್ಲಿ ಹೋಗುತ್ತಾರೆ…? ಎಂಬ ತಮ್ಮ ನಿಗೂಢ ಪ್ರಶ್ನೆಗೆ ನನ್ನ ಅಭಿಪ್ರಾಯ ಮತ್ತು ಉತ್ತರ ಈ ರೀತಿ ಇದೆ ಮನುಷ್ಯರೆಲ್ಲರಿಗೂ ಕಷ್ಟಗಳು ಬರುವುದು ಸರ್ವೇ ಸಾಮಾನ್ಯ…
ಆದರೆ ಮೂಲನಿವಾಸಿ ಭಾರತೀಯರಿಗೆ ಬರುವಂತಹ ಕಷ್ಟಗಳು ಬ್ರಾಹ್ಮಣರಿಗೆ ಬರುವುದಿಲ್ಲ.ಯಾಕೆ ಅಂದರೆ ಭಾರತೀಯ ಮೂಲನಿವಾಸಿಗಳ ಕಷ್ಟಕಾರ್ಪಣ್ಯಗಳಿಗೆ ಕಾರಣ ವಿದೇತಿ ಷಡ್ಯಂತ್ರಕಾರಿ ಮನುವಾದಿ ಬ್ರಾಹ್ಮಣನಾಗಿದ್ದಾನೆ. ಕಷ್ಟಗಳ ಸೃಷ್ಟೀಕೃತ, ಮೂಢನಂಬಿಕೆ ಮತ್ತು ಅಜ್ಞಾನಿಗಳ ಜನಕ… ಇತ್ಯಾದಿ ಈ ವಿದೇಶಿ ಠಕ್ಕ ಮನುವಾದಿಯೇ ಮೂಲಕ ಕಾರಣನಾಗಿದ್ದಾನೆ! ಹೀಗಿರುವಾಗ ಮನುವಾದಿಗಳಿಗೆ ಕಷ್ಟ ಬರಲು ಹೇಗೆ ಸಾಧ್ಯ?
ಒಂದು ವೇಳೆ ಮೂರ್ಖ ಮೂಲನಿವಾಸಿಗಳಿಗೆ ಬಂದಂಥ ಕಷ್ಟಗಳು ಬ್ರಾಹ್ಮಣವಾದಿಗಳಿಗೆ ಬಂದರೆ- “ದೇವರು-ದೆವ್ವ, ಕರ್ಮಫಲ, ಜಾತಕ ಫಲ.” ಎಂಬ ಇತ್ಯಾದಿ ಮೂಢನಂಬಿಕೆಗಳ ಹೊಲಸನ್ನು ಮತ್ತಷ್ಟು ಹರಡಿಸಿ ತಮ್ಮ ಕಷ್ಟಗಳನ್ನು ಪರಿಹಾರ ಮಾಡಿಕೊಳ್ಳುತ್ತಾರೆ.
ಈ ಸತ್ಯವನ್ನು ಅಥವಾ ಈ ನಿಗೂಢ ರಹಸ್ಯವನ್ನು ಮೂಲನಿವಾಸಿ ಭಾರತೀಯರು ಅರಿತುಕೊಳ್ಳಬೇಕಾದದ್ದು
ಜರೂರಿಯಾಗಿದೆ.
ಬಹುಜನ ಭಾರತೀಯರು ಯಾವಾಗ ಕಲ್ಲು-ಮಣ್ಣಿನ ಕೊಳಕು
ದೇವರುಗಳನ್ನು ಪೂಜಿಸಲು ಶುರು ಮಾಡಿದರು ಆವಾಗಿನಿಂದಲೇ ಗುಲಾಮಗಿರಿಗೆ ಶರಣಾದರು. ನಿಮ್ಮ ತಾತ ದೇವರನ್ನು ನಂಬಿದ. ನಿಮ್ಮ ಮುತ್ತಾತ ದೇವರಲ್ಲಿ ನಂಬಿಕೆ ಇಟ್ಟಿದ್ದ, ನಿಮ್ಮ ತಂದೆ ಪ್ರತಿದಿನ ದೇವರಿಗೆ ನಮಸ್ಕರಿಸಿದ. ಮುಂದೆ ನೀವೂ ಸಹ ಕಲ್ಲು ದೇವರ
ಮುಂದೆ ಅಡ್ಡ ಬಿದ್ದು ಅರಿಯದೆ ಮೋಸ ಹೋಗುತ್ತಿದ್ದೀರ, ನಿಮ್ಮ ತಾತ, ಮುತ್ತಾತನಿಗೆ ಕೀಳು ಜಾತಿಯವನು, ಅಸ್ಪೃಶ್ಯನೆಂದು ಊರ ಹೊರಗೆ ಇರಿಸಿದ್ದಾಗ,
ತಾವು ನಂಬಿದ ದೇವರುಗಳು ಎಲ್ಲಿ ಹಾಳಾಗಿ ಹೋಗಿದ್ದರು?
ಕತ್ತೆ ಹಾಗೆ ದುಡಿದರೂ ಹೊಟ್ಟೆಗೆ ಅನ್ನ ಸಿಗದಿದ್ದಾಗ, ಕುಡಿಯಲು ನೀರು ಕೊಡದೆ ಹೋದಾಗ, ಇರಲು ಮನೆ-ತೊಡಲು ಬಟ್ಟೆ ಸಿಗದೆ ಇದ್ದಾಗ, ಕೊರಳಲ್ಲಿ ಮಡಿಕೆ ಮತ್ತು ಪೊರ್ಕೆ ಕಟ್ಟಿದಾಗ… ನೀವು ನಂಬಿದ,ನಿಮ್ಮವರು ನಂಬಿದ ದೇವರುಗಳು ಬಂದು ನಿಮ್ಮನ್ನು ಯಾಕೆ ಕಾಪಾಡಲಿಲ್ಲ…? ನಿಮಗೆ ಶಿಕ್ಷಣ ಮತ್ತು ಸಮಾನತೆಯ ಹಕ್ಕು ಸಿಕ್ಕಿದ್ದು, ಕಲ್ಲು-ಮಣ್ಣಿನ ಕೊಳಕು ದೇವರುಗಳಿಂದಲ್ಲ. ಡಾಕ್ಟರ್ ಅಂಬೇಡ್ಕರ್ ಬರೆದ ಸಂವಿಧಾನದಿಂದ ಎಂದು ಅರಿಯದೆ ಹೋಗಿರುವುದು ದುರಂತದ ವಿಪರ್ಯಾಸವಾಗಿದೆ.
ಈ ಸಂದರ್ಭದಲ್ಲಿ ನನಗೊಂದು ತ್ರಿಪಿಟಕದಲ್ಲಿರುವ ಕಥೆ ನೆನಪಿಗೆ ಬರುತ್ತಿದೆ.ಅದನ್ನು ನಾನು ನನ್ನದೇಯಾದ ಶೈಲಿಯಲ್ಲಿ ಈಗ ಇಲ್ಲಿ ಪ್ರಸ್ತುತಪಡಿಸುತ್ತಿದ್ದೇನೆ.
ಒಬ್ಬ ಯುವಕ-

“ನನಗೆ ಅವಳು ಬೇಕು. ಅವಳ ಪ್ರೀತಿ ಬೇಕು ನನಗೆ.ಅವಳಿಲ್ಲದೆ ನಾನು ಬದುಕಿರಲಾರೆ. ಅವಳು ನನಗೆ
ಬೇಕೇ ಬೇಕು!”
“ಅವಳು ಯಾರು? ಅವಳ ಹೆಸರೇನು?”
“ಗೊತ್ತಿಲ್ಲ.”

“ಗೊತ್ತಿಲ್ಲ… ಅವಳು ಯಾರು ಅಂತ ಗೊತ್ತಿಲ್ಲ, ಅವಳ ಹೆಸರು ಏನು ಅಂತನೂ ಗೊತ್ತಿಲ್ಲ. ಆದರೂ ಸಹ ನೀನು ಅವಳನ್ನು ಪ್ರೀತಿಸುತ್ತಿದ್ದೀಯ?”
“ಹೌದು… ತುಂಬಾ ಪ್ರೀತಿಸುತ್ತಿದ್ದೇನೆ. ಅವಳು ನನಗೆ ಬೇಕು. ಅವಳನ್ನು ಬಿಟ್ಟು ನಾನು ಬದುಕಿರಲಾರೆ. ಅವಳು ನನ್ನವಳಾಗಬೇಕು. ನಾನು ಅವಳನ್ನು ಮದುವೆ ಆಗಬೇಕು…”
“ಅದ್ಸರಿ, ನೀನು ಅವಳನ್ನು ಮದುವೆ ಆಗುವಿಯಂತೆ. ಅವಳು ಎಲ್ಲಿ ಅಂತ ಹೇಳು. ಅವಳನ್ನು ಕರೆ ತಂದು ನಿನ್ನನ್ನು ಮದುವೆ ಮಾಡಿಸುತ್ತೇವೆ.”
“ದಯವಿಟ್ಟು ಹಾಗೆ ಮಾಡಿ.”
“ಖಂಡಿತ ಮಾಡ್ತೇವಪ್ಪ, ನಿನ್ನ ಸಂತೋಷವೇ ನಮ್ಮ ಸಂತೋಷ. ಅವಳಲ್ಲಿರ್ತಾಳೆ? ಅವಳ ಅತ ಪತ
ಏನಾದರೂ ಹೇಳು…!”
“ಗೋ.. ಗೊತ್ತಿಲ್ಲ.”
“ಅವಳು ನೋಡಲು ಹೇಗಿದ್ದಾಳೆ ಅಂತದಾರೂ ಹೇಳು.”
“ಗೊತ್ತಿಲ್ಲ…”
ಅವಳ ಹೆಸರು ಗೊತ್ತಿಲ್ಲ.
ಅವಳ ಅಡ್ರೆಸ್‌ ಗೊತ್ತಿಲ್ಲ!
ಅವಳು ನೋಡಲು ಹೇಗಿದ್ದಾಳೆ ಅಂತಾನೂ ಗೊತ್ತಿಲ್ಲ!
ಆದರೂ ಸಹ ಅವನು ಅವಳನ್ನು ತುಂಬ ಪ್ರೀತಿಸುತ್ತಿದ್ದಾನೆ… ಅವನನ್ನು ತಾವು ಏನಂತೀರಾ? ಹುಚ್ಚ.. ಅಂತೀರ ಅಲ್ವಾ? ಸೋ… ದೇವರನ್ನು ನೋಡಿಲ್ಲ. ದೇವರು ಹೇಗಿದ್ದಾನೆ ಅಂತ ಗೊತ್ತಿಲ್ಲ. ಆದರೂ ಸಹ ದೇವರು ಬೇಕು ಅನ್ನುವವರಿಗೆ ನೀವೇನಂತೀರಾ…!?
ಹುಲಿ ಮೇಲೆ ಕುಳಿತು ಬಂದ. ಕಾಗೆ ಮೇಲೆ ಕುಳಿತು ಬಂದ. ಇಲಿ ಮೇಲೆ ಕುಳಿತು ಬಂದ…ಎಂದೇನೆಲ್ಲಾ ಕಥೆ ಹೇಳಿ ಕತ್ತೆಗಳಂಥ ಜನರನ್ನು ಮಂಕುಬೂದಿ ಎರಚಿ ಮರಳ ಮಾಡಿದರು. ಮಳ್ಳ ಜನ, ಕಳ್ಳರ ಸುಳ್ಳನ್ನೇ ಸತ್ಯವೆಂದು ನಂಬಿ ಮೋಸ ಹೋಗುತ್ತಲೇ ಬಂದರು.. ಇದು ಆಗಿನ ಕಾಲದ ಹಳೆಯ ಕಥೆ! ಚಂದ್ರಲೋಕದಲ್ಲಿ ಏನಿದೆ?
ಮಂಗಳ ಗ್ರಹದಲ್ಲಿ ಮಾನವ ವಾಸಿಸಲು ಸಾಧ್ಯಾನಾ?
ಭೂಮಿಯನ್ನೇ ಹೋಲುವ ಮತ್ತೊಂದು ಗ್ರಹ ಇದೆಯಾ?
ಕಣ್ಣು ಮುಚ್ಚಿ ಕಣ್ಣು ತೆರೆಯುವಷ್ಟರಲ್ಲಿಯೇ ಇಡೀ ಪ್ರಪಂಚವೇ ಸುಟ್ಟುಬಿಡುವ ಮಹಾ ಅಸ್ತ್ರ ಮಾನವನ

ಬಳಿ ಇದೆಯಾ… ಇದು ಈಗಿನ ಕಾಲದ ಹೊಸ ಕಥೆ! ಹೊಲ, ಮನೆ, ಉದ್ಯೋಗ, ಆರೋಗ್ಯ, ಬಸ್ಸು, ಕಾರು, ವಿಮಾನ, ಹಡಗು, ಟಿವಿ,ಫ್ಯಾನ್, ರೇಡಿಯೋ,ಮೊಬೈಲ್, ಕಂಪ್ಯೂಟರ್ಸ್… ಇತ್ಯಾದಿ ಸೌಕರ್ಯಗಳೆಲ್ಲಾ ಸಿಕ್ಕಿದ್ದು ಆ ನಿಮ್ಮ ಹಳೆ ಕಥೆಗಳಲ್ಲಿ ಬರುವ ದೇವರುಗಳಿಂದಲ್ಲ! ಶಿಕ್ಷಣವೆಂಬ ವಿಜ್ಞಾನದ ಹೊಸ ಕಥೆಯಿಂದ…! ಆ ಹಳೆ ಕಥೆ ಇವತ್ತಿಗೆ ಮುಗಿದುಹೋಗಲಿ. ವೈಜ್ಞಾನಿಕ ಮನೋಭಾವನೆ ತಮ್ಮದಾಗಲಿ, ವಿಜ್ಞಾನ ಇನ್ನಷ್ಟು ಪ್ರಗತಿ ಸಾಧಿಸಲಿ. ಎಂದಷ್ಟೇ ಹೇಳಬಯಸುತ್ತೇನೆ ನಾನು.
ಹಿಂದಿನ ಕಾಲದಲ್ಲಿ ಹೆಣ್ಣು-ಮಣ್ಣು, ಹೊನ್ನಿಗಾಗಿ ಯುದ್ಧಗಳು ನಡೆಯುತ್ತಿದ್ದವು. ಗೆದ್ದವರು ಹೆಣ್ಣು-ಮಣ್ಣು, ಹೊನ್ನು… ಎಲ್ಲವನ್ನೂ ಪಡೆದುಕೊಳ್ಳುತ್ತಿದ್ದರು. ಯುದ್ಧದಲ್ಲಿ ಸೋತವರು ಮತ್ತು ನೇರವಾಗಿ ಯುದ್ಧ ಮಾಡಿ ಪಡೆದುಕೊಳ್ಳಲಾಗದ ನಪುಂಸಕ ಹೇಡಿಗಳೆಲ್ಲರೂ ಸೇರಿ ಏನು ಮಾಡಿದರು ಅಂತ ಗೊತ್ತಾ!? ಜಾತಿ- ಧರ್ಮ, ಮೇಲು-ಕೀಳು,ವರ್ಣ, ಅಸ್ಪೃಶ್ಯತೆ ಹುಟ್ಟು ಹಾಕಿ ಅಟ್ಟಹಾಸದಿಂದ ಮೆರೆಗಾಡಿದರು. ನಾಗರಿಕತೆ- ಸಂಸ್ಕೃತಿ ಎಂಬ ಸೋಗಿನಲ್ಲಿ ಕಟ್ಟುಪಾಡುಗಳನ್ನು ನಿರ್ಮಿಸಿ ಶೋಷಣೆ ಮಾಡತೊಡಗಿದರು. ಕಾಣದ ದೇವರ ಹೆಸರಿನಲ್ಲಿ ಅನ್ಯಾಯ-ಅತ್ಯಾಚಾರ ಮಾಡತೊಡಗಿದರು. ಮುಂದೆನು ನಡೀತು, ಪ್ರಸ್ತುತ ಈಗೇನು ನಡೆಯುತ್ತಿದೆ ಎಂದು ಹೇಳಬೇಕಾಗಿಲ್ಲ. ಮನುವಾದಿಗಳ ಮೋಸದ ಜಾಲಕ್ಕೆ ಸಿಲುಕದೆ ಸದಾ ಜಾಗರೂಕತೆಯಿಂದ ಇರಬೇಕಾದುದು ಜರೂರಿಯಾಗಿದೆ…!

  • ಜಿ ಎಲ್ ನಾಗೇಶ್,
    ಧನ್ನೂರ (ಆರ್) – ೫೮೫೩೩೦
    ಬಸವಕಲ್ಯಾಣ ತಾಲೂಕು
    ಬೀದರ್ ಜಿಲ್ಲೆ.
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ