ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಜಗದ ಕವಿ ಕುವೆಂಪು

ಕನ್ನಡ ನಾಡು ಕಂಡ ಶ್ರೇಷ್ಠ ಸಾಹಿತಿ,ರಾಷ್ಟ್ರ ಕವಿ ,ಸಾಹಿತ್ಯ ಲೋಕದ ಧ್ರುವತಾರೆ, ಮಾನವೀಯತೆಯ ಸಂದೇಶವನ್ನು ವಿಶ್ವಕ್ಕೆ ಸಾರಿದ ಮೇಧಾವಿ, ಕರುನಾಡಿನ ಹೆಮ್ಮೆಯ ಪುತ್ರ ಕುವೆಂಪುರವರು ಈ ನಾಡು ಕಂಡ ಪ್ರಗತಿಪರ ಸಾಹಿತಿ ಎಂದೇ ಪ್ರಖ್ಯಾತರಾಗಿದ್ದವರು.
ಕುವೆಂಪುರವರು ಜನಪರ ಕಾಳಜಿಯನ್ನು ಗಮನದಲ್ಲಿಟ್ಟುಕೊಂಡು ಅತ್ಯಂತ
ಪ್ರಾಮಾಣಿಕತೆಯಿಂದ ಅಷ್ಟೇ ದಕ್ಷತೆಯಿಂದ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡ ಶ್ರೇಷ್ಠ ಚಿಂತಕರು.
ಅವರ ಜೀವನ ಮೌಲ್ಯಗಳ ಸಾಹಿತ್ಯವನ್ನು ನಾಡಿಗೆ ಧಾರೆಯೆರೆದ ಶ್ರೇಷ್ಠ ಸಮಾಜವಾದಿಯಾಗಿದ್ದಾರೆ. ವರಕವಿ ಬೇಂದ್ರೆಯವರಿಂದ ‘ಯುಗದ ಕವಿ ಜಗದ ಕವಿ’ ಎನಿಸಿಕೊಂಡವರು.ವಿಶ್ವಮಾನವ ಸಂದೇಶ ನೀಡಿದವರು. ಕನ್ನಡದ ಎರಡನೆಯ ರಾಷ್ಟ್ರಕವಿ. ಜ್ಞಾನಪೀಠ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಮೊದಲ ಬಾರಿಗೆ ಕರುನಾಡಿಗೆ ತಂದುಕೊಟ್ಟವರು. ಕರ್ನಾಟಕ ಸರ್ಕಾರವು ಕೊಡಮಾಡುವ ಕರ್ನಾಟಕ ರತ್ನ ಹಾಗೂ ಪಂಪ ಪ್ರಶಸ್ತಿಯನ್ನು ಮೊಟ್ಟ ಮೊದಲ ಬಾರಿಗೆ ಪಡೆದವರು. ಮೈಸೂರಿನ ಮಹಾರಾಜಾ ಕಾಲೇಜಿನಲ್ಲಿ ಓದಿದ ಇವರು ಮೈಸೂರು ವಿಶ್ವವಿದ್ಯಾಲಯದಲ್ಲಿ ಸೇವೆ ಸಲ್ಲಿಸಿ, ಉಪಕುಲಪತಿಯಾಗಿ ನಿವೃತ್ತರಾದವರು.

ಅಂದ ಹಾಗೇ ಅವರು ಕೈಗೊಂಡ ಹತ್ತು ಹಲವು ಸಾಮಾಜಿಕ ಹಾಗೂ ಸಾಹಿತ್ಯದ ಸೇವಾ ಕೈಂಕರ್ಯಗಳು ಇಂದಿನ ಸಮಾಜಕ್ಕೆ ಮಾದರಿಯಾಗಿ ನಿಂತಿವೆ ಎಂದರೆ ಖಂಡಿತವಾಗಿಯೂ ತಪ್ಪಾಗಲಾರದು. ಅದಕ್ಕಾಗಿ ಕುವೆಂಪುರವರ ಸಾಹಿತ್ಯದ
ಸುಗಂಧವನ್ನು ತಿಳಿದುಕೊಳ್ಳುವ ಯತ್ನ ನಾವೆಲ್ಲರೂ ಸೇರಿ ಮಾಡುವುದು ಅತಿ ಅವಶ್ಯಕತೆ ಇರುವ ಈ ಹಿನ್ನೆಲೆಯಲ್ಲಿ ಅವರ ಕುರಿತು ಬರೆಯುವ ಸಣ್ಣ ಪ್ರಯತ್ನ ಇಲ್ಲಿ ಮಾಡಲಾಗಿದೆ.

ಆತ್ಮೀಯ ಬಂಧುಗಳೇ, ಕುಪ್ಪಳ್ಳಿಯ ವೆಂಕಟಪ್ಪನವರ ಮಗ ಪುಟ್ಟಪ್ಪನವರು ಸಾಹಿತ್ಯ ಕ್ಷೇತ್ರದಲ್ಲಿ ಅಗಾಧವಾದ ಕೃಷಿ ಮಾಡಿ,ಈ ನಾಡು ಎಂದೆಂದಿಗೂ ಮರೆಯಲಾಗದ ವಿಶ್ವ ಭ್ರಾತೃತ್ವ, ಸೌಹಾರ್ದತೆ, ಸಹೋದರತೆ, ಸಹಬಾಳ್ವೆ,ಸಮಾನತೆ, ಮಾನವೀಯತೆಯ ಸಂದೇಶವನ್ನು ಶಾಶ್ವತವಾಗಿ ಈ ಪುಣ್ಯ ಭೂಮಿಯಲ್ಲಿ ಸಾರಿದ ಭಾವೈಕ್ಯತೆಯ ಸಹೃದಯಿಗಳು, ಪ್ರೇರಣಾದಾಯಕರು ಎಂದರೆ ತಪ್ಪಾಗಲಾರದು.

ಕುವೆಂಪುರವರು ಮಾನವೀಯತೆಯ ಸುಗಂಧವನ್ನು ಸರ್ವ ಜನಾಂಗಕ್ಕೂ ತಲುಪಿಸುವ, ಸರ್ವ ಜನಾಂಗವನ್ನು ಪ್ರೀತಿಸುವ ಗುಣವನ್ನು ಪ್ರಚುರಪಡಿಸುವ ನಿಟ್ಟಿನಲ್ಲಿ ಹಗಲಿರುಳು ಶ್ರಮಿಸಿದ್ದು ಕಾಣುತ್ತೇವೆ.
ಇನ್ನು ಈ ದೇಶದಲ್ಲಿ ಕ್ರೂರ ಅನ್ಯಾಯ ಸೃಷ್ಟಿಸಿದ ಜಾತಿ,ಧರ್ಮ ವ್ಯವಸ್ಥೆ ವಿರುದ್ಧ, ದೇವರು ,ಮೌಢ್ಯ, ಕಂಧಾಚಗಳಿಗೆ ಸೆಡ್ಡುಹೊಡೆದು, “ನೂರು ದೇವರನೆಲ್ಲಾ ನೂಕಾಚೆ ದೂರ” ಎಂದು ಕರೆ ನೀಡಿ, ಅನ್ಯಾಯಕ್ಕೊಳಗಾದ ಜನರನ್ನು “ಗುಡಿ ಚರ್ಚು ಮಸೀದಿಗಳಿಂದ ಹೊರಗಡೆ ಬನ್ನಿ” ಎಂದು ಸಂದೇಶ ಸಾರಿದ ಮಾಹಾನ ಕವಿ. ಆ ತನ್ಮೂಲಕ ಮಾನವರಿಗೆಲ್ಲಾ ವಿಶ್ವಮಾನವ ತತ್ವವನ್ನು ಸಾರಿ.., ಬಸವಣ್ಣನವರ ಸಮಾನತೆಯ ವಚನ ಸಾಹಿತ್ಯ ಮತ್ತು ಬಾಬಾಸಾಹೇಬರ ಸಂವಿಧಾನದ ಆಶಯವನ್ನು ಸರ್ವರಿಗೂ ತಲುಪುವಂತೆ ಮಾಡಿ, ತಿಳಿಸಿದವರು. ಅದೇ ರೀತಿ ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ಎಂಬ ಸಮಾನತೆಯ ಬಸವಾದಿ ಶರಣರ ವಾಣಿಯಂತೆ ಝೇಂಕರಿಸಿದ ಕುವೆಂಪುರವರ ಸಾಹಿತ್ಯ ಸೇವೆ ಇತಿಹಾಸದ ಪುಟಗಳಲ್ಲಿ ಅಜರಾಮರವಾಗಿ ದಾಖಲಾಗಿದೆ.
ಅಲ್ಲದೆ ಅವರು ಸತ್ಯ, ನ್ಯಾಯ, ನಿಷ್ಠೆ , ಪ್ರಮಾಣಿಕತೆಗೆ ಹೆಚ್ಚು ಒತ್ತು ಕೊಟ್ಟು ವಾಸ್ತವ ವಿಚಾರಗಳ ನಿಜಾಂಶವನ್ನು ಸಾಹಿತ್ಯದ ಮೂಲಕ ಜನಸಾಮಾನ್ಯಕ್ಕೆ ತಿಳಿಸುವ ಕಾರ್ಯದಲ್ಲಿ ಪ್ರಯತ್ನ ಶೀಲರಾದವರು ಕುವೆಂಪುರವರು.

ಕುವೆಂಪು ರವರು ಬರೆದು ಹಾಡಿದ ಹಾಡು.., “ವಿಚಾರ ಕ್ರಾಂತಿಗೆ ಮುನ್ನುಡಿ ಬರೆದು, ಐತಿಹಾಸಿಕ ಕ್ರಾಂತಿಯ ಕಹಳೆಗೆ ನಾಂದಿ ಹಾಡಿದ್ದು ಯಾರು ಮರೆಯುವಂತಿಲ್ಲ. ಅವುಗಳಿಗೆ ಹೊಸ ರೂಪ ಕೊಟ್ಟು, ವೈಚಾರಿಕ ವಿಚಾರಗಳಿಗೆ ಮುನ್ನುಡಿ ಬರೆದವರು ಕುವೆಂಪುರವರು.

ಹೀಗೆ ಕ್ರಾಂತಿಕಾರಕ ಪುಸ್ತಕಗಳ ಮೂಲಕ ಬಡವರ ನೋವನ್ನು ಧನಿಕ ವರ್ಗಕ್ಕೆ ತಿಳಿಸುವ ಯತ್ನವನ್ನು ಮಾಡಿ, ಬಹುಜನರಿಗೆ ವೈಜ್ಞಾನಿಕ ಬೆಳಕನ್ನು ಚೆಲ್ಲುವ ಮತ್ತು ಸತ್ಯಾಂಶವನ್ನು ತಿಳಿಸಿ ಕಾಯಕ ಮಾಡಿರುತ್ತಾರೆ.
ಜೊತೆಗೆ ಜನರಲ್ಲಿ ವಾಸ್ತವ ಚಿತ್ರಣವನ್ನು ಕಟ್ಟಿಕೊಡುವ ಕಾರ್ಯದಲ್ಲಿ ನಿರತರಾಗಿ, ಜಾಗೃತಗೊಳಿಸುವ ಕಾರ್ಯ ಅವರು ಮಾಡಿದ್ದು ಶ್ಲಾಘನೀಯವಾಗಿದೆ.
ಪ್ರಶಸ್ತಿ-ಪುರಸ್ಕಾರ, ಮಾನ-ಸನ್ಮಾನ, ಹೆಸರು-ಕೀರ್ತಿ, ಅಂತ ಕುವೆಂಪು ಅವರು ಎಂದೂ ಕೂಡಾ ಅವುಗಳ ಹಿಂದೆ ಬಿದ್ದವರಲ್ಲ. ಕೀರ್ತಿ ಶನಿ ತೊಲಗಾಚೆ ಎಂದವರು ಅವರು. ಆದರೆ ಅವುಗಳೇ ಅವರನ್ನು ಬೆನ್ನತ್ತಿ ಬಂದು ಆಲಂಗಿಸಿಕೊಂಡವು. ಹಾಗಾಗಿ ತಮ್ಮ ಸಾಹಿತ್ಯ ಸಾಧನೆಯಿಂದ ಹಲವು ಮೊದಲುಗಳಿಗೆ ಭಾಜನರಾದ ಕುವೆಂಪು ಅವರು ತಮ್ಮ “ಶ್ರೀ ರಾಮಾಯಣ ದರ್ಶನಂ” ಮಹಾಕಾವ್ಯದ ಮೂಲಕ ರಾಷ್ಟ್ರದ ಪ್ರತಿಷ್ಠಿತ ಪ್ರಶಸ್ತಿಗಳಾದ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮತ್ತು ಜ್ಞಾನಪೀಠ ಪ್ರಶಸ್ತಿ ಸೇರಿದಂತೆ ಹಲವು ಹತ್ತು ಪ್ರಶಸ್ತಿಗಳನ್ನು ಮೊಟ್ಟ ಮೊದಲಿಗೆ ಕನ್ನಡಕ್ಕೆ ತಂದುಕೊಟ್ಟ ಕೀರ್ತಿಯೊಡನೆ ಕರ್ನಾಟಕ ಸರಕಾರದ ಪ್ರಮುಖ ನಾಗರಿಕ ಪ್ರಶಸ್ತಿಗಳಾದ ಕರ್ನಾಟಕ ರತ್ನ ಪ್ರಶಸ್ತಿ ಮತ್ತು ಪಂಪ ಪ್ರಶಸ್ತಿ ಪಡೆದ ಮೊದಲಿಗರೆನಿಸಿದ್ದಾರೆ. ಹಾಗೆಯೇ ಪದ್ಮಭೂಷಣ ಪಡೆದ ಕನ್ನಡದ ಮೊದಲ ಕವಿಯೂ ಸಹ ಹೌದು. ಕುವೆಂಪು ಅವರ ಮತ್ತೊಂದು ವಿಶೇಷವೆಂದರೆ ಕನ್ನಡಕ್ಕೊಂದು ಓಜಸ್ವಿಯಾದ ಶೈಲಿಯನ್ನು ತಂದುಕೊಟ್ಟದ್ದು. ಹಾಗೆಯೇ ಸಾಹಿತ್ಯದ ಮೂಲಕ ಕನ್ನಡ ಪ್ರಜ್ಞೆ, ವೈಜ್ಞಾನಿಕ ಪ್ರಜ್ಞೆ, ವೈಚಾರಿಕ ಪ್ರಜ್ಞೆ, ಭಾವೈಕ್ಯ ಪ್ರಜ್ಞೆ, ಮನುಜಮತ ಪ್ರಜ್ಞೆ, ವಿಶ್ವಪಥ ಪ್ರಜ್ಞೆ ಒಟ್ಟಾರೆ ವಿಶ್ವಮಾನವ ಪ್ರಜ್ಞೆ ಮೂಡಿಸಿದವರು. ಆದಿಕವಿ ಪಂಪ ನುಡಿದ ಮನುಷ್ಯ ಜಾತಿ ತಾನೊಂದೆ ವಲಂ ಎಂಬುದನ್ನು ತಮ್ಮ ಬದುಕಿನ ಧ್ಯೇಯ ವಾಕ್ಯವನ್ನಾಗಿಸಿಕೊಂಡು ಅದರಂತೆಯೇ ಬರೆದು ಬದುಕಿದವರು. ಗುಡಿ, ಚರ್ಚು, ಮಸೀದಿಗಳನ್ನು ಬಿಟ್ಟು ಹೊರಬನ್ನಿ, ಬಡತನವ ಬುಡಮಟ್ಟ ಕೀಳಬನ್ನಿ, ಮೌಡ್ಯತೆಯ ಮಾರಿಯನು ಹೊರದೂಡ ಮುಂದೆ ಬನ್ನಿ, ವಿಜ್ಞಾನ ದೀವಿಗೆಯ ಹಿಡಿಯಲು ಬೇಗ ಬೇಗ ಮುಂದೆ ಬನ್ನಿ ಎಂದವರು. ಅವರು ತಮ್ಮ ಜೀವನ ಸಂಧ್ಯಾ ಕಾಲದಲ್ಲಿ ವಿಶ್ವಮಾನವತ್ವಕ್ಕೆ ಮಿಡಿದ ಹೃದಯ ಬಗೆ ಇಡೀ ಮಾನವ ಕುಲಕ್ಕೆ ಆದರ್ಶ ಪ್ರಾಯವಾಗಿದಾರೆ. ಓ ನನ್ನ ಚೇತನ,ಆಗು ನೀ ಅನಿಕೇತನ ಎನ್ನುವ ಅವರ ವಿಚಾರಧಾರೆಯ ನೀತಿಯಂತೆ ರಾಷ್ಟ್ರಕವಿ ಕುವೆಂಪು ರವರ ವಿಶ್ವಮಾನ್ಯ
ಆದರ್ಶ ಚಿಂತನೆಗಳು ಈ ಹೊತ್ತಿನಲ್ಲಿ ಪ್ರಸ್ತುತವಾಗಿವೆ ಎಂದರೆ ತಪ್ಪಾಗಲಾರದು. ಅದಕ್ಕಾಗಿಯೇ ಇಂದಿಗೂ ಅವರ ವಿಚಾರಧಾರೆಗಳು ಜನಮನದಲ್ಲಿ ಸಾಕ್ಷಿಪ್ರಜ್ಞೆಯಾಗಿ ನಿಂತು ಎಚ್ಚರಿಸುತ್ತಿವೆ.

ಸ್ವಾರ್ಥತೆಯನ್ನು ಬದಿಗೊತ್ತಿ ಬನ್ನಿ

ನಮ್ಮ ನಮ್ಮ ಸ್ವಾರ್ಥತೆಯನ್ನು ಬದಿಗೊತ್ತಿ ವಿಶ್ವಮಾನವನ ಸಂದೇಶವನ್ನು ತಿಳಿದುಕೊಳ್ಳುವುದು ಅನಿವಾರ್ಯ ಮತ್ತು ಅಗತ್ಯತೆ ಇದೆ. ಅದಕ್ಕಾಗಿ ಸರ್ವರಿಗೂ ಸ್ವಚ್ಛಂದ ವಾತಾವರಣ ನಿರ್ಮಾಣ ಮಾಡಿಕೊಳ್ಳಬೇಕು. ಮಾಡಿಕೊಡುವ ಮೂಲಕ ಕುವೆಂಪು ಅವರ ಆಶಯದಂತೆ ಹೆಜ್ಜೆ ಹಾಕಬೇಕು. ಅದೇ ರೀತಿ ಅವರ ಸಂದೇಶವನ್ನು ಸರ್ವ ಜನಾಂಗಕ್ಕೂ ತಲುಪಿಸುವ ಕೆಲಸ ವ್ಯವಸ್ಥಿತವಾಗಿ ಮಾಡಬೇಕಾಗಿರುವುದು ನಮ್ಮಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಭಾವಿಸಿ ಮುನ್ನಡೆಯಬೇಕಾಗಿದೆ.ಅವರ ಆದರ್ಶವನ್ನು ಜನಮಾನಸಕ್ಕೆ ಕೊಂಡೊಯ್ಯುವುದು, ಅನ್ಯಾಯವನ್ನು ಬುಡಸಮೇತ ಕಿತ್ತು, ವಿಶ್ವಮಾನವತೆ ಕಡೆಗೆ ಸಾಗುವ ನಿಟ್ಟಿನಲ್ಲಿ ನಾವು ಕುವೆಂಪು ಅವರ ಆಶಯದಂತೆ ಬದುಕುವ ಹಾಗೂ ಸಾಗುವ ಕೆಲಸವನ್ನು ನಿತ್ಯ ನಿರಂತರವಾಗಿ ಮಾಡಬೇಕು. ಅಂದಾಗಲೇ ಮಾತ್ರ ಅವರು ಕಂಡ ನವ ಆದರ್ಶ ಸಮಾಜದ ಕನಸುಗಳನ್ನು ನನಸಾಗಿಸಲು ಸಾಧ್ಯ. ಅದಕ್ಕಾಗಿಯೇ ನಮ್ಮೆಲ್ಲರಲ್ಲಿಯೂ ಇರುವ ಬೇದ ಭಾವಗಳನ್ನು ಕಿತ್ತೊಗೆದು ಒಂದಾಗಿ ಬನ್ನಿ ಎನ್ನುವ ಅವರ ಆಸೆಯಕ್ಕೆ ಆಸೆರೆಯಾಗುವ ಕೆಲಸ ಮಾಡಬೇಕಾಗಿರುವುದು ಇಂದಿನ ಪ್ರಜ್ಞಾವಂತ ನಾಗರಿಕರ ಕಾಯಕವಾಗಿದೆ.

ಹಲವು ಕೃತಿಗಳನ್ನು ನಾಡಿಗೆ ಧಾರೆ ಎರೆದವರು

ಐತಿಹಾಸಿಕ – ಶ್ಲಾಘನೀಯ ಸಾಹಿತ್ಯ ಸೇವೆಯನ್ನು ರಚಿಸುವ ಮೂಲಕ ಹಲವು ಕೃತಿಗಳನ್ನು ನಾಡಿಗೆ ಧಾರೆ ಎರೆದಿದ್ದಾರೆ.
ಅವರ ಪ್ರಮುಖ ಕೃತಿಗಳು ಹೀಗಿವೆ –
ಕಥನ ಕವನಗಳು, ಕಲಾ ಸುಂದರಿ, ನವಿಲು, ಪಕ್ಷಿಕಾಶಿ, ಶ್ರೀರಾಮಾಯಣ ದರ್ಶನಂ ಮಹಾಕಾವ್ಯವೂ ಸೇರಿ 30ಕ್ಕೂ ಹೆಚ್ಚು ಕಾವ್ಯ ಕೃತಿಗಳು. ಜಲಗಾರ, ಯಮನಸೋಲು, ಬೊಮ್ಮನಹಳ್ಳಿ ಕಿಂದರಿ ಜೋಗಿ, ವಾಲ್ಮೀಕಿ ಭಾಗ್ಯ ಸ್ಮಶಾನ ಕುರುಕ್ಷೇತ್ರ, ಮಹಾರಾತ್ರಿ, ರಕ್ತಾಕ್ಷಿ, ಬಿರುಗಾಳಿ, ಬೆರಳ್‌ಗೆ ಕೊರಳ್, ಶೂದ್ರ ತಪಸ್ವಿ, ಇತರೆ ನಾಟಕಗಳು, ಕಾನೂರು ಹೆಗ್ಗಡತಿ, ಮಲೆಗಳಲ್ಲಿ ಮದುಮಗಳು ಕಾದಂಬರಿಗಳು, ವಿಮರ್ಶೆ, ಕಾವ್ಯ ಮೀಮಾಂಸೆ-ಕಾವ್ಯ ,ಶಿಶುಸಾಹಿತ್ಯ ಸೇರಿದಂತೆ ಹಲವಾರು ಕೃತಿಗಳು ಸಾಹಿತ್ಯ ಲೋಕಕ್ಕೆ ನೀಡಿರುತ್ತಾರೆ. ಅವರ ಬದುಕಿನ ಕಟ್ಟಕಡೆಯ ಸಂದೇಶ ವಿಶ್ವಮಾನವ ಸಂದೇಶ ಎನ್ನುತ್ತಲೇ 1994 ರ ನವೆಂಬರ್‌ 11 ರಂದು ಸೃಷ್ಟಿಕರ್ತನ ಮಡಿಲಲ್ಲಿ ಲೀನರಾದ ಕುವೆಂಪುರವರು, ಮಹಾ ಮಾನವತಾವಾದಿಯಾಗಿ ಬದುಕಿದವರು. ಅಂತೆಯೇ ಕನ್ನಡ ಸಾಹಿತ್ಯ ಮತ್ತು ಭಾರತೀಯ ಸಾಹಿತ್ಯಕ್ಕಷ್ಟೇ ಅಲ್ಲದೇ ವಿಶ್ವ ಸಾಹಿತ್ಯಕ್ಕೆ ವಿಚಾರ ಕ್ರಾಂತಿಯ ಮಹಾಬೆಳಕು ನೀಡಿದ ಯುಗ ಪುರುಷರಾಗಿ ಬೆಳಗುತ್ತಿದ್ದಾರೆ.

ಜಗದ ಕವಿಗೆ ಭಕ್ತಿಯ ನಮನಗಳು

ಜಯ ಭಾರತ ಜನನಿಯ ತನುಜಾತೆ, ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು, ಓ ನನ್ನ ಚೇತನ ಆಗುವ ನೀ ಅನಿಕೇತನ ಎನ್ನುವಂತೆ ಅವರ ವಿಚಾರಧಾರೆಗಳ ಆಶಯದಂತೆ ಬಾಳಿದವರು ಜಗದ ಕವಿ, ರಾಷ್ಟ್ರಕವಿ ಕುವೆಂಪುರವರು.
ಅವರ ಹಲವಾರು ಕವನಗಳು ಕನ್ನಡಿಗರ ಮನದಾಳದಲ್ಲಿ ಇಂದಿಗೂ – ಎಂದೆಂದಿಗೂ ಹಾಸುಹೊಕ್ಕಾಗಿವೆ ಎಂಬುದಂತೂ ಸತ್ಯ.
ವಿಶ್ವಕ್ಕೇ ಮಾನವೀಯತೆಯ ಸಂದೇಶಗಳನ್ನು ಸಾರಿದ ಮಾಹಾನ ಕವಿಯ, ಕವಿವಾಣಿಯ, ಕ್ರಾಂತಿಕಾರಕ ಕವಿತೆಗಳನ್ನು ಓದೋಣ, ಕೇಳೋಣ, ಅವರ ವಿಚಾರಗಳನ್ನು ಕುರಿತು ಚರ್ಚಿಸೋಣ – ಅರಿಯೋಣ. ನಿಜಪ್ರಜ್ಞೆಯನ್ನು ಜಾಗೃತಗೊಳಿಸೋಣ, ವಿಶ್ವಮಾನವನ ಮಾನವೀಯತೆಯ ಮೌಲ್ಯಾಧಾರಿತ ಸಂದೇಶಗಳ ತತ್ವಗಳನ್ನು ಅನುಸರಿಸಿ, ಜಾಗತಿಕ ಪ್ರಪಂಚಕ್ಕೆ ಮಾದರಿಯಾಗುವ ಕೆಲಸ ಮಾಡೋಣ.
ಈ ಸಂದರ್ಭದಲ್ಲಿ ಜಗದ ಕವಿಗೆ ಭಕ್ತಿಯ ನಮನಗಳು ಸಲ್ಲಿಸುತ್ತೇವೆ.

ಲೇಖಕರು – ಸಂಗಮೇಶ ಎನ್ ಜವಾದಿ
ಸಾಹಿತಿ, ಪತ್ರಕರ್ತ, ಹೋರಾಟಗಾರರು ,ಬೀದರ ಜಿಲ್ಲೆ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ