ವೆಂಕಟಪ್ಪ ಸೀತಮ್ಮರ ಸುಪುತ್ರರು
ಹೇಮಾವತಿಯ ಹೃದಯ ಪ್ರಿಯರು
ರಾಮಕೃಷ್ಣ ಪರಮಹಂಸರ ಶಿಷ್ಯರು
ಕುಪ್ಪಳ್ಳಿಗೆ ಹೆಸರು ತಂದ ಮಹಾತ್ಮರು.
ಇಂಗ್ಲಿಷ್ ಭಾಷೆಯ ಅಧ್ಯಾಪಕ
ಕನ್ನಡ ಸಾಹಿತ್ಯ ಬೆಳೆಸಿದ ಜನಕ
ಬೆರೆಸಿ ಕಲ್ಪನಾ ಭಾವ ಶೃಂಗಾರ
ರಚಿಸಿದರು ಜ್ಞಾನದ ಭಂಡಾರ.
ಜಗವು ಮೆಚ್ಚಿದ ಯುಗದ ಕವಿ
ಮೊದಲ ಜ್ಞಾನಪೀಠ ರಾಷ್ಟ್ರಕವಿ
ಮಲೆನಾಡಿನ ಮಡಿಲಿನ ಕಂದ
ಸಾಹಿತ್ಯವೇ ಜೀವದುಸಿರೆಂದ.
ಆಗಿ ಮಂತ್ರ ಮಾಂಗಲ್ಯಕೆ ಸ್ಪೂರ್ತಿ
ತಂದು ದಲಿತ ಬಂಡಾಯಕ್ಕೆ ಕೀರ್ತಿ
ಕರ್ನಾಟಕವು ಕಂಡ ಜ್ಞಾನಕೋಶ
ಕೊಟ್ಟರು ವಿಶ್ವ ಮಾನವ ಸಂದೇಶ.
-ಬ್ಯಾಡನೂರು ವೀರಭದ್ರಪ್ಪ ಶಿವಶರಣ, ಎಸ್.
ಪಾವಗಡ ತಾಲ್ಲೂಕು, ತುಮಕೂರು ಜಿಲ್ಲೆ.
ದೂರವಾಣಿ ಸಂಖ್ಯೆ : 9740199896.
