” ಕನ್ನಡವನ್ನು ಸುಭದ್ರಪಡಿಸಿ ಕನ್ನಡವನ್ನು ಶಾಶ್ವತವಾಗಿ ಉಳಿಸಿ ಬೆಳಸಬೇಕಾದರೆ, ಕನ್ನಡ ನೆಲದ ಆಳ್ವಿಕೆ ಪರಿಪೂರ್ಣವಾಗಿ ಕನ್ನಡಿಗರದ್ದೇ ಆಗಬೇಕು, ಕನ್ನಡ ನಾಡಿನಲ್ಲಿ ಕನ್ನಡವೇ ಸಾರ್ವಭೌಮವಾಗಬೇಕು ಈ ನಿಟ್ಟಿನಲ್ಲಿ ನಮ್ಮ ನಾಡು – ನಮ್ಮ ಆಳ್ವಿಕೆ ತಂಡ ಶ್ರಮ ಪಡುತ್ತಿರುವುದು ಶ್ಲಾಘನೀಯ ಮತ್ತು ಎಲ್ಲಾ ಕನ್ನಡಿಗರು ಅವರ ಪ್ರಯತ್ನಕ್ಕೆ ಕೈ ಜೋಡಿಸಬೇಕಿದೆ “.
- ಕಿರಣ್ ಕೆ.ಟಿ, ವಕೀಲರು, ತುಮಕೂರು.
ಸಶಕ್ತ, ಸ್ವಾವಲಂಬಿ ಕರ್ನಾಟಕ ಕಟ್ಟಲು ಕನ್ನಡಿಗರೆಲ್ಲರೂ ” ನಮ್ಮ ನಾಡು – ನಮ್ಮ ಆಳ್ವಿಕೆ ” ತಂಡದ ಜೊತೆ ಕೈ ಜೋಡಿಸಲು ಕರೆ.
- ಕರ್ನಾಟಕ ಯಾವಾಗಲೂ ದೆಹಲಿ ಹೈ ಕಮಾಂಡ್ ಆಳ್ವಿಕೆಗೆ ಒಳಪಟ್ಟು ನಾಡು, ನುಡಿ, ನೆಲ, ನೀರಿನ ವಿಚಾರದಲ್ಲಿ ತಾರತಮ್ಯ ಅನುಭವಿಸುತ್ತಿದೆ.
- ಅನಿಯಂತ್ರಿತ ವಲಸೆ, ಹಿಂದಿ ಹೇರಿಕೆಯಿಂದಾಗಿ ಕನ್ನಡ ಮತ್ತು ಕನ್ನಡಿಗರ ಮೇಲೆ ದಬ್ಬಾಳಿಕೆಯಾಗುತ್ತಿದೆ.
- ಕರ್ನಾಟಕದ ಪ್ರತಿ ಹಳ್ಳಿಯ ನೆಲ, ಸಂಪನ್ಮೂಲ, ವ್ಯವಹಾರ, ಸೃಷ್ಟಿಯಾಗುತ್ತಿರುವ ಉದ್ಯೋಗ, ಸರ್ಕಾರಿ ಸೇವೆಯಲ್ಲಿ ವಲಸಿಗರ ಪಾಲು ಹೆಚ್ಚಾಗುತ್ತಿದೆ.
- ನಮ್ಮಿಂದ ಸಂಗ್ರಹಿಸುವ ಪ್ರತಿ 100 ರೂ. ತೆರಿಗೆಗೆ ಒಕ್ಕೂಟ ಸರಕಾರ ಕೇವಲ 13 ರೂ. ವಾಪಾಸು ನೀಡಿ, ಅದೇ ಉತ್ತರದ ಕೆಲವು ರಾಜ್ಯಗಳಿಗೆ 100 ಕ್ಕೆ 300 ರೂ. ನೀಡುತ್ತದೆ. ನಮ್ಮದೇ ಹಣಕ್ಕೆ ನಾವು ಕೈ ಚಾಚಿ ಬೇಡುವ ದಯನೀಯ ಪರಿಸ್ಥಿತಿಯಿದೆ.
ಕರ್ನಾಟಕದ ಶಾಲೆಗಳಲ್ಲಿ ಹಿಂದಿ ಪರೀಕ್ಷೆ ನಿಲ್ಲಿಸಿ ಅಭಿಯಾನ ಹಮ್ಮಿ ಕೊಂಡಿರುವ “ನಮ್ಮ ನಾಡು ನಮ್ಮ ಆಳ್ವಿಕೆ” ತಂಡ. - ಹಿಂದಿ ರಾಜ್ಯಗಳ ಮಕ್ಕಳು, ತಮಿಳುನಾಡಿನ ಮಕ್ಕಳು ಮೂರನೇ ಬಾಷೆ ಕಲಿಯುತ್ತಿಲ್ಲ. ತ್ರಿಬಾಷ ಸೂತ್ರದಡಿ ಕರ್ನಾಟಕದ ಮಕ್ಕಳ ಮೇಲೆ ಮಾತ್ರ ಹಿಂದಿ ಹೇರಿಕೆಯಾಗುತ್ತಿದೆ.
- 2023-24ರ ಶೈಕ್ಷಣಿಕ ವರ್ಷದಲ್ಲಿ 90,510 ಮಕ್ಕಳು ಎಸ್.ಎಸ್.ಎಲ್.ಸಿ ಹಿಂದಿ ಪರೀಕ್ಷೆಯಲ್ಲಿ ಮಾತ್ರ ವಿಫಲರಾಗಿ, ಅವರ ಭವಿಷ್ಯ ಕುಂಠಿತವಾಗಿದೆ.
- ಹಿಂದಿ ಕಡ್ಡಾಯ ಕಲಿಕೆಯ ಹೊರೆಯಿಂದ ಹಿಂದಿ ಪಾಸಾಗಿರುವ ಮಕ್ಕಳಿಗೂ ಕೂಡಾ ಹಿಂದಿಯಲ್ಲಿ ಕಡಿಮೆ ಅಂಕ ಬಂದು ಒಟ್ಟಾರೆ ಸರಾಸರಿ ಅಂಕ ಗಳಿಕೆಗೆ ಹಿನ್ನಡೆಯಾಗಿ ಅವರ ಭವಿಷ್ಯಕ್ಕೂ ತೊಂದರೆಯಾಗಿದೆ.
- ಮೂರನೇ ಭಾಷೆ ಹೊರೆಯಿಲ್ಲದ ಹಿಂದಿ ರಾಜ್ಯಗಳ ಹಾಗೂ ತಮಿಳು ನಾಡಿನ ಮಕ್ಕಳಿಗೆ ಬೇರೆ ವಿಷಯಗಳ ಅಧ್ಯಯನಕ್ಕೆ ಹೆಚ್ಚಿನ ಸಮಯ ಸಿಕ್ಕು ಹೆಚ್ಚಿನ ಅಂಕಗಳಿಕೆ ಸಾಧ್ಯವಾಗುತ್ತಿದೆ.
- ನಮ್ಮ ಪರಿಸರದ ದೈನಂದಿನ ಚಟುವಟಿಕೆಗಳಿಗೆ ಕನ್ನಡ/ತಾಯ್ನುಡಿ ಬಳಕೆ ಹಾಗೂ ಕರ್ನಾಟಕದ ಹೊರಗಿನ ಜನರೊಂದಿಗೆ, ಪ್ರಪಂಚದ ಜೊತೆಗಿನ ವ್ಯವಹಾರಕ್ಕೆ ಇಂಗ್ಲೀಷ್ ಸಾಕು.
- ಸ್ವಯಿಚ್ಛೆಯಿಂದ ಯಾರು ಎಷ್ಟು ಭಾಷೆಯನ್ನಾದರೂ ಕಲಿಯಬಹುದು, ಅದಕ್ಕೆ ಅಭ್ಯಂತರವಿಲ್ಲ.
- ಹಿಂದಿ ಭಾಷಿಕರು ವ್ಯಾಪಾರ, ಉದ್ಯಮ, ಅಧ್ಯಯನ, ಕೆಲಸದ ಕಾರಣಗಳಿಗೆ ಕರ್ನಾಟಕಕ್ಕೆ ಬಂದರೆ, ಅವರು ಕನ್ನಡ ಕಲಿಯಬೇಕು. ಅದು ನ್ಯಾಯ.
- ಕರ್ನಾಟಕದ ಮಕ್ಕಳಿಗೆ ಮೂರನೇ ಭಾಷೆ ಕಡ್ಡಾಯದ ಹೊರೆ ಬೇಡ.
ಒಟ್ಟಾರೆ ಕನ್ನಡ ಮತ್ತು ಕನ್ನಡಿಗರ ಅಸ್ತಿತ್ವಕ್ಕೆ ಆತಂಕ ಎದುರಾಗಿದೆ. ಇದಕ್ಕೆಲ್ಲಾ ಏಕೈಕ ಪರಿಹಾರ, ನೆರೆಯ ತಮಿಳುನಾಡು, ಆಂಧ್ರಗಳಂತೆ ನಮ್ಮ ನಾಡನ್ನು ನಮ್ಮದೇ ಮಣ್ಣಿನ, ಹೈಕಮಾಂಡ್ ಹಂಗಿಲ್ಲದ ಪಕ್ಷಗಳು ಆಳುವುದು. ಆ ದಿಸೆಯಲ್ಲಿ ಕನ್ನಡಿಗರಲ್ಲಿ ಅರಿವು ಮೂಡಿಸಿ ಒಗ್ಗೂಡಿಸಲು ಸಮಾನ ಮನಸ್ಕ ಕನ್ನಡಾಭಿಮಾನಿಗಳ ಬಳಗ ‘ನಮ್ಮ ನಾಡು ನಮ್ಮ ಆಳ್ವಿಕೆ’ ಸ್ಥಾಪನೆಯಾಗಿದೆ. ಸಶಕ್ತ, ಸ್ವಾವಲಂಬಿ ಕರ್ನಾಟಕ ಕಟ್ಟಲು ಕನ್ನಡಿಗರೆಲ್ಲರು ನಮ್ಮೊಂದಿಗೆ ಕೈಜೋಡಿಸಿ ಎಂದು “ನಮ್ಮ ನಾಡು ನಮ್ಮ ಆಳ್ವಿಕೆ” ತಂಡ ಕರೆ ನೀಡಿದೆ.
