ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಕೆ.ಹೊಸಹಳ್ಳಿ ಗ್ರಾಮದಲ್ಲಿ ಇಂದು ಶ್ರೀ ವೀರಭದ್ರಪ್ಪ ಶಿವಶರಣರ 70ನೇ ಪುಣ್ಯ ತಿಥಿ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿತು.
ಸುಮಾರು152 ವರ್ಷಗಳಿಂದ ಕೆ.ಹೊಸಹಳ್ಳಿ ಹಾಗೂ ನಾಗಲಾಪೂರ ಗ್ರಾಮಗಳ ಭಕ್ತರು ಸೇರಿಕೊಂಡು ಎಳ್ಳ ಅಮವಾಸ್ಯೆಯ ಒಂದು ದಿನದ ಮುಂಚಿತವಾಗಿ ಪುಣ್ಯ ತಿಥಿ ಕಾರ್ಯಕ್ರಮ ಮಾಡಿಕೊಂಡು ಬರುತ್ತಿದ್ದಾರೆ. ಇದನ್ನು ಮುಂದುವರೆಸಿಕೊಂಡು ಇಂದು ಮಹಿಳೆಯರು ಕುಂಭ ಕಳಸಗಳೊಂದಿಗೆ ಕಳಸಾರೋಹಣ ಮಾಡಿದರು.
ಶನಿವಾರ ಬೆಳಗ್ಗೆ ಶ್ರೀ ವೀರಭದ್ರಪ್ಪ ಶಿವಶರಣರ ಕತೃಗದ್ದುಗೆಗೆ ರುದ್ರಾಭಿಷೇಕ,ಪುಷ್ಪಾಲಂಕಾರ ಹಾಗೂ ಗಂಣಾಂಗಗಳ ಪಾದ ಪೂಜೆ ಮಾಡಿ ಕಳಸಾರೋಹಣ ನೆರವೇರಿಸಲಾಯಿತು. ತಮ್ಮ ಕಷ್ಟಗಳನ್ನು ಈಡೇರಿಸಿಕೊಳ್ಳಲು ಆಗಮಿಸಿದ ಸರ್ವ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಯಿತು.
ಇದೇ ಸಂಧರ್ಭದಲ್ಲಿ ಶ್ರೀ ರಾಮಚಾರಿ ಮತ್ತು ರಾಜೇಶ್ವರಿ ಹಾಗೂ ರುದ್ರಯ್ಯ ಸ್ವಾಮಿ ಜ್ಯೋತಿ ಎಂಬ ನೂತನ ದಂಪತಿಗಳು ಮದುವೆಯ ಸವಿನೆನಪಿಗಾಗಿ ದೇವಸ್ಥಾನದ ಆವರಣದಲ್ಲಿ ಸಸಿ ನೆಟ್ಟು ದೇವರ ಕೃಪೆಗೆ ಪಾತ್ರರಾದರು.
ಈ ಸಂದರ್ಭದಲ್ಲಿ ಮುತ್ತಗಯ್ಯ ಸ್ವಾಮಿ ಹಿರೇಮಠ,ಶಿವಯ್ಯ ಸ್ವಾಮಿ,ಪಂಪಣ್ಣ ಶಿಕ್ಷಕರು ನಾಗಲಾಪೂರ,ವೀರನಗೌಡ ಮೈಲಾಪೂರ,ಬೀರಪ್ಪ ಶಿಕ್ಷಕರು ನಾಗಲಾಪೂರ,ಶರಣಪ್ಪ ಕಲಮಂಗಿ,ಮಲ್ಲಪ್ಪ ಕಲಮಂಗಿ,ವೀರೇಶಪ್ಪ ಪೋ. ಪಾ.,ಪಕೀರಯ್ಯ ಸ್ವಾಮಿ, ನಾಗಪ್ಪ ಬಡಿಗೇರ, ಗುರುಲಿಂಗಯ್ಯ ಸ್ವಾಮಿ, ವೀರೇಶ ಅಲಬನೂರು, ಸಿರಸಪ್ಪ ಹತ್ತಿಗುಡ್ಡ,ಚನ್ನಪ್ಪ ಕೆ. ಹೊಸಹಳ್ಳಿ ವನಸಿರಿ ಫೌಂಡೇಷನ್ ಸಾಮಾಜಿಕ ಜಾಲತಾಣದ ಅಧ್ಯಕ್ಷರು, ಸುರೇಶ ಸ್ವಾಮಿ,ಹನುಮೇಶ ಬಡಿಗೇರ ಇದ್ದರು.
