ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಮರಿದಾಸನಹಳ್ಳಿ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ಬರುವ ತಿಪ್ಪಯ್ಯನದುರ್ಗ ಗ್ರಾಮದ ದಲಿತರ ಕಾಲೋನಿ ಮೂಲಭೂತ ಸೌಕರ್ಯಗಳಿಲ್ಲದೆ ವಂಚಿತವಾಗಿದೆ ಈ ಗ್ರಾಮದಲ್ಲಿ ಮೂರು ಜನ ಗ್ರಾಮ ಪಂಚಾಯಿತಿ ಸದಸ್ಯರಿದ್ದು ಗ್ರಾಮದಲ್ಲಿ ಸ್ವಚ್ಚತಾ ಕಾರ್ಯಗಳು ನಡೆಯುತ್ತಿಲ್ಲ ಹಾಗೂ ರಾತ್ರಿ ವೇಳೆ ಸರಿಯಾದ ರೀತಿಯಲ್ಲಿ ಬೆಳಕಿನ ವ್ಯವಸ್ಥೆ ಇಲ್ಲದೆ ವಿಧಿ ಇಲ್ಲದೆ ಕತ್ತಲೆ ಹಾಗೂ ಕೊಳಚೆಯಂತೆ ಇರುವ ಪ್ರದೇಶದಲ್ಲಿ ವಾಸ ಮಾಡುತ್ತಿದ್ದಾರೆ.
ಈ ವಿಷಯ ಇಲ್ಲಿನ ಜನಪ್ರತಿನಿಧಿಗಳು ಕಣ್ಣಾರೆ ನೋಡಿಯೂ ನೋಡದಂತೆ ಹೋಗುತ್ತಿದ್ದಾರೆ ಇಲ್ಲಿನ ನಿವಾಸಿಗಳು ಎಷ್ಟೋ ಬಾರಿ ಈ ವಿಷಯದ ಬಗ್ಗೆ ಪಿಡಿಒ ಬಳಿ ಮನವಿ ಮಾಡಿದರೂ ಸರಿಪಡಿಸುತ್ತೇವೆ ಎಂದು ಭರವಸೆ ನೀಡುತ್ತಾರೆ ಆದರೆ ಆರು ತಿಂಗಳಾದರೂ ಯಾವುದೇ ಕೆಲಸ ನಡೆಯುವುದಿಲ್ಲ.
ಎಲ್ಲೆಂದರಲ್ಲಿ ನಿಂತ ಕೊಳಚೆ ನೀರಿನಿಂದಾಗಿ ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗಿ ಸಾಂಕ್ರಾಮಿಕ ರೋಗಗಳ ಭಯದಿಂದ ಜೀವನ ಸಾಗಿಸುವಂತಾಗಿದೆ ಎಂದು ಇಲ್ಲಿನ ವಾಸಿಗಳು ತಮ್ಮ ಅಳಲನ್ನು ಹೇಳಿಕೊಂಡು ಸಂಬಂಧ ಪಟ್ಟ ಅಧಿಕಾರಿಗಳಾದ ತಾಲೂಕಿನ ಕಾರ್ಯ ನಿರ್ವಹಣಾಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಇಲ್ಲಿನ ಸಮಸ್ಯೆಗಳನ್ನು ಬಗೆಹರಿಸಲು ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದರು.
ವರದಿಗಾರರು : ಪೃಥ್ವಿರಾಜು.ಜಿ.ವಿ
