
ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ಸೈದಾಪುರ ಗ್ರಾಮದಲ್ಲಿ ಗ್ರಾಮ ದೇವತೆ ಜಾತ್ರೆ ಜರುಗಿತು.
ಶ್ರೀ ಮ.ನಿ.ಪ್ರ ಸಿದ್ಧಲಿಂಗ ಶಿವಯೋಗಿಗಳು ವಿರಕ್ತಮಠ ಯಡ್ರಾಮಿ ಇವರು ದಿವ್ಯ ಸಾನಿಧ್ಯ ವಹಿಸಿ, ಆಶೀರ್ವಚನ ನೀಡುತ್ತಾ ಎಲ್ಲಾ ಧರ್ಮ ಗ್ರಂಥಗಳು ಒಂದೇ ಸಾರವನ್ನು ಸಾರಿವೆ ಅದನ್ನು ಅರ್ಥ ಮಾಡಿಕೊಂಡ ಸೈದಾಪುರ ಗ್ರಾಮಸ್ಥರು ಬೇರೆಯವರಿಗೆ ಮಾದರಿಯಾಗಿದ್ದಾರೆ ಎಂದರು.
ಸೈದಾಪುರ ಗ್ರಾಮದಲ್ಲಿ ಬಹುತೇಕ ಇಸ್ಲಾಂ ಧರ್ಮದವರು ಇದ್ದು ಹಿಂದೂ ಧರ್ಮ ಹಾಗೂ ಮುಸ್ಲಿಂ ಬಾಂಧವರು ಕೂಡಿಕೊಂಡು ಜಾತ್ರೆಯನ್ನು ತುಂಬಾ ವಿಜೃಂಭಣೆಯಿಂದ ಆಚರಿಸಿದರು. ಸಂದರ್ಭದಲ್ಲಿ ಯಡ್ರಾಮಿ ಪಟ್ಟಣದ ಮಲ್ಲಾರಾವ್ ಬಿ. ಕುಲಕರ್ಣಿ ಮನೆಯವರಿಂದ ದೇವಿ ಪೂಜೆ ನೆರವೇರಿತು.
ಈ ವೇದಿಕೆ ಸಮಾರಂಭದಲ್ಲಿ ಯಡ್ರಾಮಿಯ
ಗ್ರಾಮದ ಹಿರಿಯರು ಹಿಂದೂ ಮುಸ್ಲಿಂ ಭಾವೈಕ್ಯತೆಯ ಈ ಕಾರ್ಯಕ್ರಮದ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.ನಂತರ ಸೈದಾಪುರ ಗ್ರಾಮಸ್ಥರು ಅಕ್ಕಪಕ್ಕದ ಗ್ರಾಮಗಳಿಂದ ಆಗಮಿಸಿದ್ದ ಅತಿಥಿಗಳಿಗೆ
ಶಾಲು ಹೊದಿಸಿ ಸನ್ಮಾನ ಮಾಡಿದರು.
ಈ ಸಮಯದಲ್ಲಿ ಚಂದ್ರಶೇಖರ ಪುರಾಣಿಕ,
ರಾಘವೇಂದ್ರ ಕುಲಕರ್ಣಿ,
ಅಪ್ಪುಗೌಡ ಮಾಲಿಪಾಟೀಲ್,
ದೇವೇಂದ್ರಪ್ಪಗೌಡ ಸರಕಾರ,
ಮಲ್ಲು ಹಲ್ಕರ್ಟಿ,
ಇಬ್ರಾಹಿಂ ಸಾಬ್ ಉಸ್ತಾದ್,
ಉಸ್ಮಾನ್ ಸಾಬ್ ಮಾಲಿಪಾಟೀಲ್ ಸೈದಾಪುರ, ಊರಿನ ದಳಪತಿ ಸೇರಿದಂತೆ
ಈ ಕಾರ್ಯಕ್ರಮವನ್ನು ಸುತ್ತ ಮುತ್ತಲಿನ ಗ್ರಾಮಸ್ಥರು ಕೂಡಾ ಪಾಲ್ಗೊಂಡು ಯಶಸ್ವಿಯಾಗಿ ನೆರವೇರಿಸಿದರು.
ವರದಿ ರಾಚೋಟಯ್ಯ ಹಿರೇಮಠ
