ಭಾರತದ ಅರ್ಥವ್ಯವಸ್ಥೆಯನ್ನು ಅರ್ಥಪೂರ್ಣವಾಗಿ ಸರಿಯಾಗಿ ಸಧೃಡ ಮಾಡಿದಂತಹ ಅರ್ಥಶಾಸ್ತ್ರಜ್ಞ ದಿವಂಗತ ಮನಮೋಹನ್ ಸಿಂಗ್ ರವರಿಗೆ ಗೌರವ ಸೂಚಿಸುವ ಸಮಯವಿದು
ನಮ್ಮ ಮಾಜಿ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ರವರು ನಮಗೆ ನೀಡಿರುವ ಕೊಡುಗೆಗಳು
ಅಪಾರ, ಅವರು ನೀಡಿರುವ ಜನಪ್ರಿಯ ಆರ್.ಟಿ.ಐ ಮತ್ತು ಆರ್.ಟಿ.ಇ ಕಾಯ್ದೆಗಳು ಹಾಗೂ ಇನ್ನೂ ಅನೇಕ ಜನಪ್ರಿಯ ಕಾಯ್ದೆಗಳು ಜನ ಸಾಮಾನ್ಯರಿಗೆ ಅತ್ಯುತ್ತಮ ರೀತಿಯಲ್ಲಿ ಉಪಯೋಗವಾಗಿವೆ.
ಇಂತಹ ಮಹಾನ್ ವ್ಯಕ್ತಿ ಈಗ ನಮ್ಮ ಜೊತೆಗಿಲ್ಲ ಅವರು ನೀಡಿರುವ ಹಲವಾರು ಯೋಜನೆಗಳು ನಮ್ಮ ಜೊತೆಗಿವೆ.
ದೈಹಿಕವಾಗಿ ನಮ್ಮನ್ನಗಲಿದ ಮಹಾನ್ ನಾಯಕನಿಗೆ ನಾವು ಈಗ ಗೌರವ ನೀಡುವುದು ನಮ್ಮ ಮುಖ್ಯ ಕರ್ತವ್ಯವಾಗಿದೆ.
ಆದ್ದರಿಂದ ನಾವು ಸರ್ಕಾರ ಘೋಷಿಸಿರುವ 7 ದಿನ ಶೋಕಾಚರಣೆಯನ್ನು ಶಿಸ್ತುಬದ್ಧವಾಗಿ ಆಚರಿಸೋಣ…
7 ದಿನಗಳ ಕಾಲ ಯಾವುದೇ ಮೋಜು ಮಾಸ್ತಿ ಕೂಟದಲ್ಲಿ ಭಾಗಿಯಾಗದೆ ಹಾಗೂ ಹೊಸ ವರುಷಾರಂಭ ಬಂದಿರುವುದರಿಂದ ಯಾವುದೇ ಮೋಜು ಮಸ್ತಿ ಮಾಡದೆ ಮನೆಯಲ್ಲಿಯೇ ಉತ್ತಮ ಮತ್ತು ಸರಳವಾಗಿ ಹೊಸವರ್ಷ ಆಚರಿಸಿ ಅವರಿಗೆ ಗೌರವ ಸಲ್ಲಿಸೋಣ. ಈ ಮಹಾನ್ ನಾಯಕನನ್ನು ಗೌರವಿಸೋಣ, ಪ್ರೀತಿಸೋಣ ಹಾಗೂ ವಂದಿಸೋಣ.

- ಪೂಜಾ ಎಂ. ಎನ್., ತುಮಕೂರು.

One Response
ಬಡ ಜನರಿಗೆ ತುಂಬಾ ಸಹಾಯ.ಮತ್ತು ಮೊಟ್ಟಿವೆಷನ್.