ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಪಟ್ಟ ವಿಜಯನಗರ ಜಿಲ್ಲಾ ಕೊಟ್ಟೂರು ತಾಲೂಕು ಅಲಬೂರು ಗ್ರಾಮದಲ್ಲಿ ನಡೆದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಸಾಲಗಾರರ ಕ್ಷೇತ್ರದ ಮೈತ್ರಿ (ಬಿ.ಜೆ.ಪಿ ಮತ್ತು ಜೆ.ಡಿ.ಎಸ್) ಪಕ್ಷದ ಚುನಾಯಿತ ಅಭ್ಯರ್ಥಿಗಳಾದ ಅಜ್ಜಯ್ಯ ಕೆ ಎಂ, ಕೆ.ಶ್ರೀನಿವಾಸ ಶ್ಯಾನುಭೋಗರ , ಕೊಟ್ರೇಶ ಜಿ, ಬಸವರಾಜ ಮಡಿವಾಳರ, ಮಲ್ಲಪ್ಪ ಬೊಮ್ಮನಹಳ್ಳಿ, ಶಾರದಮ್ಮ ಬಾತಿ, ಶಿವಪ್ಪ ಕಳ್ಳಿಮನಿ, ಹಾಲೇಶ್ ಎನ್, ನಿಂಗಮ್ಮ ಕೋಡಿಹಳ್ಳಿ ಮತ್ತು ಸಾಲಗಾರರಲ್ಲದ ಕ್ಷೇತ್ರದ ಅಭ್ಯರ್ಥಿಯಾಗಿ ಬಿ ನಾಗರಾಜ ಇವರುಗಳು ಭರ್ಜರಿ ಬಹುಮತದಿಂದ ಚುನಾಯಿತರಾಗಿ ಅಧಿಕಾರವನ್ನು ಮುಡಿಗೇರಿಸಿಕೊಂಡಿದ್ದಾರೆ. ಈ ಚುನಾವಣೆಯಲ್ಲಿ ಕೆಲಸ ಮಾಡಿದಂತ ಪಕ್ಷದ ಕಾರ್ಯಕರ್ತರು ಮತ್ತು ಊರಿನ ಸಮಸ್ತ ಮತದಾರರು ಮತದಾನ ಮಾಡುವುದರ ಮೂಲಕ ತಮ್ಮ ಪಕ್ಷವನ್ನು ಗೆಲ್ಲಿಸಿ ಗೆಲುವನ್ನು ಮುಡಿಗೇರಿಸಿಕೊಂಡಿದ್ದಾರೆ.
ವರದಿಗಾರರು: ಎನ್. ಚಂದ್ರಗೌಡ
