ಯಾದಗಿರಿ/ಹುಣಸಗಿ: ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಮಾಜಶಾಸ್ತ್ರ ಉಪನ್ಯಾಸಕ ಶ್ರೀ ಹಯ್ಯಾಳಪ್ಪ ನಾಟಿಕಾರ ಸಾ.ವಿಭೂತಿಹಳ್ಳಿ ಇವರು ಡಾ. ನಿಧಿರಾಣಿ ಅವರ ಮಾರ್ಗದರ್ಶನದಲ್ಲಿ ರಾಜಸ್ಥಾನದ ಸನ್ ರೈಸ್ ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದಲ್ಲಿ ‘ಎ ಸೋಶಿಯಲಾಜಿಕಲ್ ಸ್ಟಡಿ ಆನ್ ಸೋಶಿಯಲ್ ಮೊಬೈಲಿಟಿ ವಿತಿನ್ ಎ ಕ್ಯಾಸ್ಟ್ ‘ಎಂಬ ವಿಷಯದ ಮೇಲೆ ಮಹಾ ಪ್ರಬಂಧ ಮಂಡಿಸಿದ್ದಕ್ಕೆ ಪಿ. ಎಚ್. ಡಿ ಪದವಿ ನೀಡಿ ಗೌರವಿಸಿದೆ.
ಆದ ಕಾರಣ ಕ. ವಿ. ಪ್ರ. ನಿಗಮದ ಪ.ಜಾತಿ ಮತ್ತು ಪ.ಪಂಗಡ ಕಲ್ಯಾಣ ಸಂಸ್ಥೆಯ 466 ಸಂಘದ ಅಧ್ಯಕ್ಷರಾದ ಶ್ರೀ ನಿಂಗಣ್ಣ ನಾಟಿಕಾರ್ ಹೆಸ್ಕಾಂ ಇಂಡಿ ಇವರು ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.
ವರದಿ ಮನೋಜ್ ನಿಂಬಾಳ
