ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಅಂಗನವಾಡಿ ಹುದ್ದೆಗಳಿಗೆ ನೇಮಕಾತಿ: ಹೈಕೋರ್ಟ್ ತಡೆಯಾಜ್ಞೆ

ವಿಜಯಪುರ/ ಇಂಡಿ: ಜಿಲ್ಲೆಯಲ್ಲಿ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿ ಖಾಲಿ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಜಿಲ್ಲೆಯ ಉಪ ನಿರ್ದೇಶಕರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಅರ್ಜಿ ಆಹ್ವಾನಿಸಲಾಗಿದ್ದು, ಅದನ್ನು ಕಲಬುರ್ಗಿ ಹೈಕೋರ್ಟ್ ತಡೆಯಾಜ್ಞೆ ನೀಡಿ ಆದೇಶ ಹೊರಡಿಸಿದೆ.
ರಾಜ್ಯ ಸರ್ಕಾರದ ಆದೇಶ ಸಂಖ್ಯೆ ಮ ಮ ಇ 154 ಐ ಸಿ ಡಿ 2020 ಮತ್ತು 03-12-2022 ರ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿ ನೇಮಕಾತಿ ಮಾರ್ಗಸೂಚಿಯಂತೆ ಜಿಲ್ಲಾಧಿಕಾರಿ ಕಡತ್ ಅನುಮೋದನೆಯಂತೆ ಸ ಮ: ಉ ನಿ ವಿ/ಮ ಮ ಅ ಇ/ ಅಂ. ಕಾ.ಕ/ಅಂ. ಸ/ನೇಮಕಾತಿ/2024/25 ರ , ದಿನಾಂಕ 09/10/2024 ರಂದು ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿ ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿತ್ತು.
ಒಟ್ಟು ಅಂಗನವಾಡಿ ಕಾರ್ಯಕರ್ತೆ 313, ಸಹಾಯಕಿ 857 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು,
ಆದರೆ ಇಂಡಿ ತಾಲೂಕಿನ ಅಂಗನವಾಡಿ ಕಾರ್ಯಕರ್ತೆ 67 ಹುದ್ದೆ ಅದರಲ್ಲಿ ಪರಿಶಿಷ್ಟ ಪಂಗಡಕ್ಕೆ 1 ಹುದ್ದೆ ಮೀಸಲಾತಿ ನೀಡಿದ್ದು ಸರಕಾರದ ಮಾರ್ಗ ಸೂಚಿ ಪಾಲನೆ ಆಗಿಲ್ಲ. ಸರಕಾರದ ಆದೇಶ ದಿನಾಂಕ 28/12/2022 ರ ಸುತ್ತೋಲೆ ಪ್ರಕಾರ ರಾಜ್ಯದಲ್ಲಿ ಪ.ಜಾತಿಗೆ 17%, ಪ.ಪಂಗಡಕ್ಕೆ 7%, ಮೀಸಲಾತಿ ಕೊಡಬೇಕು ಎಂದು ಸ್ಪಷ್ಟವಾಗಿ ಆದೇಶ ಇದೆ. ಆದರೆ ಅಧಿಕಾರಿಗಳು ಈ ಆದೇಶ ಪಾಲಿಸದೆ ಪರಿಶಿಷ್ಟ ಪಂಗಡಕ್ಕೆ ಸಿಗಬೇಕಾದ ಮೀಸಲಾತಿ ಕಲ್ಪಿಸಿಲ್ಲ ಎಂದು ಇಂಡಿ ತಾಲೂಕಿನ, ಅಗರಖೇಡ ಗ್ರಾಮದ ವಿಜಯಲಕ್ಷ್ಮಿ ರಾಮಣ್ಣ ಕೋಳಿ ,ರಾಮ್ ಕೌಲಗಿ ಮಾಜಿ ಗ್ರಾ.ಪಂ. ಅಧ್ಯಕ್ಷರು ಅಗರಖೇಡ, ಚಂದ್ರಾಮ್ ತಳವಾರ್ ಹೈಕೋರ್ಟ್ ಮೊರೆ ಹೋಗಿದ್ದರಿಂದ ಈ ಸದ್ಯ ಕಲಬುರ್ಗಿ ಹೈಕೋರ್ಟ್ ಡಿಸೆಂಬರ್ 3, 2024 ರಂದು ತಡೆಯಾಜ್ಞೆ ನೀಡಿ ಆದೇಶ ಹೊರಡಿಸಿದೆ.

” ಅರ್ಜಿ ಆಹ್ವಾನಿಸುವ ಮುಂಚೆ ನಾವು ಜಿಲ್ಲಾಧಿಕಾರಿಗಳಿಗೆ ಹಾಗೂ ಜಿಲ್ಲಾ ಪಂಚಾಯತ್ ಸಿ ಇ ಓ ಅವರಿಗೆ ಹಾಗೂ ಜಿಲ್ಲಾ ಉಪ ನಿರ್ದೇಶಕರು ಮಹಿಳಾ ಮತ್ತು ಅಭಿವೃದ್ಧಿ ಇಲಾಖೆ ಇವರಿಗೆ ಪರಿಶಿಷ್ಟ ಪಂಗಡಕ್ಕೆ ಮೀಸಲಾತಿ ಕೊಡಬೇಕೆಂದು ವಿನಂತಿ ಪತ್ರ ಸಲ್ಲಿಸಿದರು ಕೂಡಾ ಅವರು ಮೀಸಲಾತಿಯನ್ನು ಕಲ್ಪಿಸಿಲ್ಲ ಆದ ಕಾರಣ ನಾವು ಕಲಬುರ್ಗಿ ಹೈಕೋರ್ಟ್ ಇಂದ ತಡೆಯಾಜ್ಞೆಯನ್ನು ತಂದಿದ್ದೇವೆ “.

-ಚಂದ್ರಾಮ ತಳವಾರ್

  • ವರದಿ ಮನೋಜ್ ನಿಂಬಾಳ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ