ಕೊಪ್ಪಳ ಜಿಲ್ಲೆಯ ಕುಕನೂರು ತಾಲ್ಲೂಕಿನ ಮಂಗಳೂರು ಗ್ರಾಮದಲ್ಲಿ ವಿಸ್ತಾರ ಸಂಸ್ಥೆಯ VRS ಕಲಿಕಾರ್ತಿಗಳಿಂದ ಲಿಂಗ ತಾರತಮ್ಯ ಹಿಂಸೆಯ ವಿರುದ್ಧ ಕುರಿತು ನಾಟಕ ವಟಪರವಿ, ಕುದರಿಮೋತಿ, ಬೈರನಾಯಕನಹಳ್ಳಿ, ಚಂಡಿನಾಳ, ನೆಲಜೇರಿ ಗ್ರಾಮಗಳಲ್ಲಿ ಸಮಾಜದಲ್ಲಿ ಮಹಿಳೆಯರ ಮೇಲೆ ನಡೆಯುವ ಹಿಂಸೆಗಳ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ನಾಟಕ ಪ್ರದರ್ಶನ ಮಾಡಲಾಯಿತು. ಶಿಶು ಹತ್ಯೆ, ಮುಟ್ಟಿನ ಸಮಯದಲ್ಲಿ ಶುಚಿತ್ವ ಮತ್ತು ಸಮಾನ ಕೆಲಸ ಸಮಾನ ವೇತನ ವಿಷಯಕ್ಕೆ ಸಂಬಂಧಿಸಿದಂತೆ ನಾಟಕವನ್ನು ತುಂಬಾ ಚೆನ್ನಾಗಿ ಕಲಿಕಾರ್ತಿಗಳು ಅಭಿನಯಸಿದರು.
ಈ ಕಾರ್ಯಕ್ರಮಕ್ಕೆ ಊರಿನ ಗ್ರಾಮ ಪಂಚಾಯ್ತಿ ಸದ್ಯಸರು ಮುಖಂಡರು ಇಂತಹ ಜಾಗೃತಿ ಮೂಡಿಸುವ ಕಾರ್ಯ ವಿಸ್ತಾರ ಸಂಸ್ಥೆ ಮಾಡಿದ್ದು ನಮಗೆ ಖುಷಿ ಆಯಿತು ಅದರ ಜೊತೆಗೆ ಇನ್ನೂ ಮಹಿಳೆಯರ ಮೇಲೆ ಹಿಂಸೆಗಳು ಆಗುತ್ತಿರುವುದು ವಿಷಾದನೀಯ ನಾವು ಯಾರೂ ಹಿಂಸೆ ಮಾಡಬಾರದು ಎಂದು ಹೇಳಿದರು.
ಈ ಸಂದರ್ಭದಲ್ಲಿ VRS ರಂಗ ಸಹ ಶಿಕ್ಷಕರಾದ ವಿರೇಶ ಜಯಶ್ರೀ ಮಂಜುಳಾ ಮಂಗಳೂರು ಅಶ್ವಿನಿ ಮಂಜುಳಾ ಅಲಿಸಾಬ ಮತ್ತು ಕಲಿಕಾರ್ತಿಗಳು ಇದ್ದರು.
