ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

2024 ಹಳೆಯ ವರ್ಷಕ್ಕೆ ವಿದಾಯ 2025 ರ ನೂತನ ವರ್ಷಕ್ಕೆ ಸ್ವಾಗತ

ಪ್ರತಿ ವರ್ಷ ಮುಗಿಯುವಾಗ ಡಿಸೆಂಬರ್ 31ರ ರಾತ್ರಿ ಬರುತ್ತದೆ. ಹಾಗೆಯೇ 2024ರ ಡಿಸೆಂಬರ್ 31ರಂದು ಪಾಶ್ಚಿಮಾತ್ಯ ಶೈಲಿಯಲ್ಲಿ ಮುಗಿಯುತ್ತಿರುವ ವರ್ಷಕ್ಕೆ, good bye ಹೇಳಲು Party ಮಾಡುವ ಯುವಜನ ಕುಡಿದು ಕುಣಿದು ಕುಪ್ಪಳಿಸುತ್ತಾರೆ. ಈ ಬಾರಿ ಅಕಸ್ಮಾತ್, ಇಂಥ ಪಾರ್ಟಿಗಳಲ್ಲಿರುವವರ ಸಂಕಲ್ಪ ಹೀಗಿದ್ದರೆss— “ಇನ್ನು ಮೇಲೆ ಧೂಮಪಾನ, ಮದಿರೆ, ಮಾದಕ ಪದಾರ್ಥ ಸೇವನೆ ಎಲ್ಲಕ್ಕೂ No! ಕುಡಿದು ಡ್ರೈವ್ ಮಾಡಿ ಅಪಘಾತ ಮಾಡಿ, ನಾವೂ ಸಾಯೋಲ್ಲ ಇತರರನ್ನೂ ಸಾಯಿಸೊಲ್ಲ.” ಇದು ಇವರ 2025ರ ನೂತನ ವರ್ಷದ ಸಂಕಲ್ಪವಾಗುತ್ತದೇನೋ!

ಮುಕ್ತಾಯ ಹೇಳಬಯಸುವ 2024 ವರ್ಷ ಮುಗಿಯಲಿದ್ದು, ಡಿ 31 ರ ರಾತ್ರಿ 11.ಗಂಟೆ 59 ನಿಮಿಷ 59 ಸೆಕೆಂಡಿಗೆ, ಮುಕ್ತಾಯವಾಗಲಿದೆ. 2025ರ ನೂತನ ವರ್ಷ ಬುಧವಾರ 1-1-2025ರ 00.00 ಗಂಟೆಗೆ ಆರಂಭವಾಗಲಿದೆ.

ಈ ಸಂದರ್ಭದಲ್ಲಿ, ಪ್ರಪಂಚದಲ್ಲಾದ ದೇಶದಲ್ಲಾದ, ರಾಜ್ಯದಲ್ಲಾದ ಬದಲಾವಣೆಗಳು, ತಲ್ಲಣಗಳು, ವಿಪತ್ತುಗಳು, ಪರಿಹಾರಗಳು, ಎಲ್ಲಾ ಪತ್ರಿಕೆಗಳಲ್ಲಿ TV ಚಾನೆಲ್‌ಗಳಲ್ಲಿ ಜನರ ಮನಸ್ಸಿನಲ್ಲಿ, ಸಾಲುಸಾಲಾಗಿ ಬರುತ್ತವೆ. ಹೀಗಾಗಿ ಅವುಗಳ ಬಗ್ಗೆ ಪ್ರಸ್ತಾಪಿಸದೇ, ಪ್ರತಿ ವರ್ಷದ ಕೊನೆಯಲ್ಲಿ, ಹೊಸ ವರ್ಷದ ಆರಂಭದಲ್ಲಿ, ವ್ಯಕ್ತಿಯಾಗಿ ವಿಶ್ಲೇಷಿಸುತ್ತಿರುವ ವೈಯಕ್ತಿಕ ಸ್ಥಿತಿಗತಿ, ಮನಸ್ಸಿನ ಸ್ಥಿತಿ, ಪ್ರತಿ ಒಬ್ಬರೂ ಮಾಡುತ್ತಿರುವ ವಿಶ್ಲೇಷಣೆ ಬಗ್ಗೆ ಇಲ್ಲಿ ಗಮನ ಸೆಳೆಯ ಬಯಸುತ್ತೇನೆ.

ಪ್ರತಿ ಮನೆಯ ಶಾಲಾ ವಿದ್ಯಾರ್ಥಿಯ ಮನಸ್ಸಿನಿಂದ ಆರಂಭಿಸುವ. ಗುರಿಯ ಮನಸ್ಸು “ಈ ವರ್ಷ ನಾನು ಜಾಸ್ತಿ ನಿದ್ದೆ ಮಾಡಿ, ಹೆಚ್ಚು ಆಟ-ಆಡ್ತಾ, ಕಡಿಮೆ ಓದಿ ಅಪ್ಪಾ ಅಮ್ಮಾ ನಮ್ಮ Teacherಗೆ ಬೇಜಾರು ಮಾಡಿದೆ. ಮುಗಿತಿರೋ ವರ್ಷದ ಜತೆ ನನ್ನ ಕೆಟ್ಟ ಗುಣ ತಿದ್ದಕೋಬೇಕು.” ಇದೇ ವಿದ್ಯಾರ್ಥಿಯ ನೂತನ ವರ್ಷದ ಸಂಕಲ್ಪ ಹೀಗಿದೆ. “ದೇವ್ರೇ ನಾನು 7ನೇ ತರಗತೀನ ಚೆನ್ನಾಗಿ ಓದಿ ನಮ್ಮ ಕ್ಲಾಸಿಗೇ First ಬರ್ತೀನಿ. ಜಾಸ್ತಿ ಓದ್ತೀನಿ. ಕಡಿಮೆ T.V. ನೋಡ್ತೀನಿ ಅಪ್ಪ ಅಮ್ಮ Teacherಗೆ ಬೇಜಾರು ಮಾಡೋಲ್ಲ”

ಇನ್ನೊಂದು ಮನೆಯ S.S.L.C ಗೆ ವಿದ್ಯಾರ್ಥಿನಿ ಮಾನಸ ಮನದ ಮಾತು ಇವು“ನಮ್ಮ class teacher, HM ಹೇಳಿದಾರೆ. ಮಾನಸ ನೀನು ನಮ್ಮ ಶಾಲೆಗೆ ಹೆಸರು ತರಬೇಕು. Distinction ಬರಬೇಕು. ಪರೀಕ್ಷೆ ಆಗೋತನಕ ಮನಸ್ಸು ಗಟ್ಟಿ ಮಾಡಿಟ್ಟುಕೋ, ಓದು/ಬಿಟ್ಟು ಬೇರೇನೂ ಮಾಡಬೇಡಾಂತ. ಅದೇನೋ ಸರಿ ಆದರೆ ಈ ವರ್ಷ ಕ್ಲಾಸ್‌ಲ್ಲಿ ಎಷ್ಟೊಂದು ಗಲಾಟೆ ಮಾಡಿದ್ವಿ. Sir ಗಳನ್ನ Madamಗಳನ್ನ ಏನೇನೋ Code ಹೆಸರಿಟ್ಟು, ಆಡ್ಕೊಂಡ್ವಿ. ಕ್ಲಾಸ್‌ಲ್ಲಿ ಪಾಠ ನಡೆಯೋವಾಗ ಮೊಬೈಲ್ message ನೋಡ್ತಿದ್ದೆ. ಮನೇಲಿ ಸುಳ್ಳು ಹೇಳಿ Friends ಜತೆ ಸಿನಿಮಾ Hotelಗೆ ಹೋಗಿದ್ದೆ. ಈ ರೀತಿ ಮನೇಲಿ ಸುಳ್ಳು ಹೇಳಿ ಹೋಗಿದ್ದಕ್ಕೆ ಬಹಳ ಬೇಜಾರಾಗ್ತಿದೆ. ಇನ್ಮೇಲೆ ಖಂಡಿತ ಹೀಗೆ ಮಾಡಬಾರದು”ಅದೇ ಮನಸ್ಸಿನಲ್ಲಿಯ ಸಂಕಲ್ಪ ಇದು. “ನಾನು ಈ ಸಲ S.S.L.C ಗೆ ರಾಜ್ಯ Rank ಬರೋ ತರಹ ಓದ್ತೀನಿ. ಇವತ್ತಿಂದ ಹೆಚ್ಚು Systematic ಆಗಿ ತಯಾರಾಗ್ತೀನಿ ದೂರದರ್ಶನ ಚಂದನ ವಾಹಿನೀಲಿ ಬರೋ ದಶ ದೀವಿಗೆ ಕಾರ್ಯಕ್ರಮನಾ ತಪ್ಪದೇ ನೋಡಿ, ತಜ್ಞರು ಕೊಡೋ Points ಬರೆದಿಟ್ಟುಕೋತೀನಿ. ಪತ್ರಿಕೆಗಳಲ್ಲಿ ಕೊಡೋ ಮಾರ್ಗದರ್ಶನ tips ಇರೋ, S.S.L.C ಪಾಠ ಪುರವಣಿಗಳನ್ನು ಚೆನ್ನಾಗಿ ಓದಿ ಅರ್ಥ ಮಾಡಿಕೋತೀನಿ. Friends ಜತೆ time pass waste ಹರಟೆ ನಿಲ್ಲಿಸಿ, ಪಾಠದ discussion ಸುರು ಮಾಡ್ತೀನಿ. ನನಗೇ ಆಶ್ಚರ್ಯವಾಗಬೇಕು ಹಾಗೆ ಬದಲಾಗ್ತೀನಿ.”

ನಮ್ಮ ಪಕ್ಕದ್ಮನೆ ಕಾವ್ಯ ಮನಸ್ಸನ್ನು ಈಗ ಹೊಕ್ಕೋಣ ಬನ್ನಿ “ ನಾನು 6 ತಿಂಗಳಿಂದ ಗೋಪೀನ್ನ ಗಮನಿಸೋದೇ ಆಯ್ತು. ಆತನ ಒಂದು ನೇರ ದೃಷ್ಟಿ ನನ್ನ ಮೇಲೆ ಬಿದ್ರೆ ಧನ್ಯ ಅಂತ ಕಾಯ್ತಿದೀನಿ. ಆತ ಸುಂದರ ತರುಣ ಸರಿ. ಅವನ ಗುಣ ಸರಿ ಇಲ್ಲ, ಕೆಟ್ಟ ಚಾಳಿಗಳು ಅಂತ, ಆಗಾಗ ಹೇಳಿದ ಸ್ನೇಹಿತೆ ಬೃಂದಾ ಜೊತೆ ಜಗಳಾಡಿ ಟೂ ಬಿಟ್ಟಿದೀನಿ. ಈಗ ನಿಧಾನವಾಗಿ ಯೋಚಿಸಿದಾಗ, ನಂದೇ ಆತುರ ಹಾಗೂ ತಪ್ಪು ಅಂತ ತಿಳೀತು. ಹದಿಹರೆಯದ ಈ ಆಕರ್ಷಣೆ ಸಹಜ. ಆದರೆ ಇದನ್ನು ಅತಿಯಾಗಿ ಹಚ್ಚಿಕೊಳ್ಳದೇ, ಓದೋ ಕಡೆ ಗಮನ ಕೊಡ್ತೀನಿ. ನನ್ನ ಮುಂದಿನ ಕರಿಯರ್ ಕಡೆ, ಅಪ್ಪಾ ಅಮ್ಮನ ಮಾತಿಗೆ ಬೆಲೆ ಕೊಡ್ತೀನಿ. ಟೂ ಬಿಟ್ಟ ಗೆಳತಿ ಜತೆ ಮತ್ತೆ ಸೇರ್ತೀನಿ.”

ಆಚೆ ಬೀದಿ ತರುಣ ಅರುಣನ ಹೊಯ್ದಾಟ “ಅಯ್ಯೋ ನಾನೇನು ಮಾಡಿಬಿಟ್ಟೆ! ಏನೋ ಸಾಧಿಸ್ತೀನಿ ಅಂತ ಕೊಚ್ಚಿಕೊಂಡಿದ್ದೆ. Friends temptation ಮುಂದೆ ಕರಗಿಹೋದೆ. ಮೊದಲು ಕುತೂಹಲಕ್ಕೆ ಸಿಗರೇಟು. ಆಮೇಲೆ Drinks, tobacco. ಈಗ drugs -! ಛೇ ಛೇ ದಿನದಿನ ಅಧಃ ಪತನ. ಬೀಳ್ತಿರೋ ನನ್ನ ತಡೆದು ನಿಲ್ಲಿಸೋವ್ರು ಯಾರು?” ನಿಧಾನವಾಗಿ ಯೋಚಿಸಿ ಅರುಣ ತಗೊಂಡ ಧೃಢಸಂಕಲ್ಪ. “ಇಲ್ಲ. ಇನ್ನೂ ಮುಂದೆ ಇದು ಸುತರಾಂ ಬೇಡ. ಹೊಸ ವರ್ಷ ಬಂತು. ನಾನು ಇನ್ನು ಹೊಸ ಮನುಷ್ಯ. ಉತ್ತಮ ಶಿಕ್ಷಣ ಮುಗಿಸಿ, ಒಳ್ಳೇ ಕೆಲಸ ಪಡೆದು, ದೇಶದ ಉತ್ತಮ ನಾಗರಿಕನಾಗ್ತೀನಿ.”

ಗೃಹಿಣಿ ಉಮಾ ಪ್ರಮಾಣ “ಛೇ –ನಂಗೊಳ್ಳೆ TV Serial ಹುಚ್ಚು ಹಿಡಿದಿದೆ. ಈ ವರ್ಷ ನಮ್ಮ ರಾಯರು, ಮಗ ಆಡಿಕೊಂಡೇ ಆಡಿಕೋತಾರೆ. ಅಡಿಗೆ ಬೇಡ. ಇನ್‌ಸುಲಿನ್ ಆಮೇಲೆ. ನಿದ್ದೆ ಕಡಿಮೆ. ತಡ ರಾತ್ರಿ ಮಲಗಿ, ಬೆಳಗ್ಗೆ ಬೇಗ ಏಳೋಕಾಗ್ತಿಲ್ಲ. ಡಾಕ್ಟರ್ ಹೇಳಿದ Walking, Exercise ಆಗ್ತಾನೇ ಇಲ್ಲ. ಬಹಳ ಯೋಚಿಸಿ ಉಮಾ ತಗೊಂಡ ನೂತನ ವರ್ಷದ ಸಂಕಲ್ಪ.”ಛೇ ನಾನು ಜನವರಿ 1 ರಿಂದ, ಪೂರಾ ಬದಲಾಗ್ತೀನಿ. ಆರೋಗ್ಯ, timeಗೆ ಮಹತ್ವ. ಬೇರಾವುದಕ್ಕೂ ಇಲ್ಲ”

ಶಿಕ್ಷಕ ಕಲ್ಯಾಣ್ಣಪ್ಪನ ಚಿಂತನೆ “ಇಷ್ಟು ದಿನ ಬರೀ ನನ್ನ Posting, transfer, ಸ್ಥಳೀಯ ರಾಜಕೀಯ ಮಾಡಿದೆ. ಸಾಕಿನ್ನು. ನನ್ನ ಶಾಲೆ ಮಕ್ಕಳನ್ನು ಚೆನ್ನಾಗಿ ಓದಿಸಬೇಕು ಶಾಲೆಗೆ ಬಾರದವರನ್ನ ಶಾಲೆಗೆ ಕರೆ ತರ‍್ತೀನಿ”.

ಡಾಕ್ಟರ್ ರಾಮ್ ಯೋಚನೆ “ನನ್ನ ಹತ್ತಿರ ಬಂದ ರೋಗಿಗಳಿಗೆ ತಪಾಸಣೆ ಮಾಡಿ, lab test ಮಾಡಿಸಿ ವೈದ್ಯಕೀಯ ಸಲಹೆ ಕೊಡ್ತಿದೀನಿ. ಆದರೆ ಅವರಿಗೆ ಆರೋಗ್ಯ ಶಿಕ್ಷಣ ಕೊಡಬೇಕು. ನನ್ನ ವೈದ್ಯಕೀಯ ಜ್ಞಾನದ ಕಿರುಪುಸ್ತಕ ಮಾಡಿ, ರೋಗಿಗಳಿಗೆ ಹಂಚಿ, ಅವರಿಗೆ ಆರೋಗ್ಯ ಶಿಕ್ಷಣ ಕೊಡ್ತೀನಿ.” ನಟ, ನಿರ್ದೇಶಕ ಉಮೇಶ್ ಅಂದ್ಕೋತಿದಾನೆ. “ದುಡ್ಡಿಗಾಗಿ ಚಿತ್ರ ತೆಗೆದಾಯ್ತು ಇನ್ನು ಸಾಮಾಜಿಕ ಬದ್ಧತೆ ಇರೋ ಚಿತ್ರ ಮಾತ್ರ ತೆಗೀತೀನಿ”.

ನಿರ್ಮಾಪಕ ಶೆಟ್ಟಿ ಮನಸು. “ಛೇ. ಬರಿ ಅಲ್ಲಿಂದ ಇಲ್ಲಿಂದ ಕದ್ದು ಸೇರಿಸಿ, ಕನ್ನಡ ಚಿತ್ರ ಮಾಡಿದ್ದಾಯ್ತು. ಇನ್ನೇನಿದ್ರೂ, ಕನ್ನಡದ ಕಥೆ ಕಾದಂಬರಿ ಆಧರಿಸಿ ಚಿತ್ರ ಮಾಡ್ತೀನಿ”.

ವಿಜ್ಞಾನಿ ಮನಸ್ಸಿನ ಲಹರಿ “ನನ್ನ ಪ್ರಯೋಗಶಾಲೆ, ರಿಸಲ್ಟ್, ಸಂಶೋಧನೆ ಫಲ, ಹಳ್ಳಿಯ ರೈತರಿಗೆ, ಸಾಮಾನ್ಯ ಜನರಿಗೆ ಸಿಗೋ ಹಾಗೆ ಮಾಡೋದೇ, ನನ್ನ ಹೊಸ ವರ್ಷದ ಸಂಕಲ್ಪ.”

ಹಳ್ಳೀ ರೈತನ ಕನಸು. “ನಾ ಹಳ್ಳಿ ಬಿಟ್ಟು ನಗರಕ್ಕೆ ಓಡೋಲ್ಲ. ಸಾವಯುವ ಕೃಷಿ ಮಾಡ್ತೀನಿ. ವೈಜ್ಞಾನಿಕವಾಗಿ ಬೆಳೆ ಬೆಳೀತೀನಿ. ಕಡಿಮೆ ನೀರು ಖರ್ಚು ಮಾಡಿ, 2-3 ಬೆಳೆ, ತರಕಾರಿ ಬೆಳೀತೀನಿ. ನಮ್ಮದೇ ಸಂಘಟನೆ ಮೂಲಕ, ನೇರ ಬಳಕೆದಾರರಿಗೆ ಆಹಾರ ಪದಾರ್ಥ ಮಾರ್ತೀನಿ”

ರಾಜಕಾರಣಿ ಉವಾಚ. “ಸಾಕು ಸಾಕು ಎಲೆಕ್ಷನ್ ಭಾಷಣ ಹಾಗೂ ಪ್ರಮಾಣಗಳು. ಹೋದ ಬಾರಿ ಕೊಟ್ಟೆ ವಚನ ಪೂರೈಸೊಕೆ, ನಾಳೆಯಿಂದಲೇ ನನ್ನ ಪ್ರಯತ್ನ ಆರಂಭ. ನನ್ನ ನಂಬಿ ಓಟು ಕೊಟ್ಟವರ. ಹಿತ ಕಾಯೋದೇ ನನ್ನ ಮುಂದಿನ ಗುರಿ.

ಇವರೆಲ್ಲರ ಹಳೇ ವರ್ಷದ ಬೇಡದ ಚಾಳಿಗಳೂ ನಿಲ್ಲಲಿ. ಹೊಸವರ್ಷದ ಸಂಕಲ್ಪ ನೆರವೇರಲಿ. ಅನ್ನೋದೇ, ನನ್ನ ಹಾರ್ಧಿಕ ಆಶಯ. ನೀವೇನಂತೀರಾ ಓದುಗರೇ?

  • ಎನ್.ವ್ಹಿ.ರಮೇಶ್,ನಿವೃತ್ತ ಕಾರ್ಯಕ್ರಮ ಅಧಿಕಾರಿಗಳು ಆಕಾಶವಾಣಿ.
    ಮೊ:-98455-65238
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ