ಕಲಬುರಗಿ: ಬೀದರ ಜಿಲ್ಲೆಯ ಯುವ ಗುತ್ತಿಗೆದಾರ ಸಚಿನ ಪಾಂಚಾಳ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರ ಆತ್ಮಹತ್ಯೆಯ ನಿಜಸ್ವರೂಪ ಏನಿದೆ ಎಂದು ಸಂಪೂರ್ಣವಾಗಿ ತನಿಖೆ ಮಾಡಬೇಕು. ಆದರೆ ತನಿಖೆಗೆ ಮುಂಚೆನೆ ಸಚಿವರಾದ ಶ್ರೀ ಪ್ರೀಯಾಂಕ್ ಖರ್ಗೆಜಿಯವರ ಮೇಲೆ ಬಿಜೆಪಿ ನಾಯಕರುಗಳು ಇಲ್ಲಸಲ್ಲದ ಆರೋಪ ಮಾಡುತ್ತಿರುವುದು ಖಂಡನೀಯ ಎಂದು ಕಮಲಾಪೂರ ಬ್ಲಾಕ್ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಆನಂದ ಆರ್.ಹುಲಿ ತಾವರಗೇರಾ ಅವರು ತೀವ್ರವಾಗಿ ಖಂಡಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು, ಸಚಿನ ಪಾಂಚಾಳ ಇವರು ಸಾವಿಗೂ ಮುನ್ನ ಬರೆದಿಟ್ಟಿರುವ ಡೆತ್ ನೋಟ್‌ನಲ್ಲಿ ಯಾವುದೇ ರೀತಿಯ ಸಚಿವರ ಹೆಸರಾಗಲೀ, ಭೇಟಿಯಾಗಲಿ ಎಲ್ಲಿಯೂ ಪ್ರಸ್ತಾಪಿಸಿಲ್ಲ. ಆದರೂ ಬಿಜೆಪಿ ಮುಖಂಡರು ತನಿಖೆಗೆ ಮುಂಚೆ ದ್ವೇಷರಾಜಕಾರಣ ಹಾಗೂ ಸಚಿವರ ಏಳಿಗೆ ಸಹಿಸಲಾಗದೇ ಅವರ ಮೇಲೆ ಆರೋಪ ಮಾಡಿ ರಾಜಿನಾಮೆ ಕೇಳುತ್ತಿರುವುದು ನಾಚಿಕೆಗೇಡಿತನ ವಿಷಯವಾಗಿದೆ ಎಂದರು. ಸಚಿವರಾದ ಪ್ರೀಯಾಂಕ್ ಖರ್ಗೆಯವರು ಸ್ವತಃ ಪತ್ರಿಕಾ ಮಾಧ್ಯಮಗೋಷ್ಠಿಯಲ್ಲಿ ಸಚಿನ ಪಾಂಚಾಳ ಅವರ ಆತ್ಮಹತ್ಯೆಗೆ ಸಂಪೂರ್ಣ ತನಿಖೆಯನ್ನು ನಿಷ್ಪಕ್ಷಪಾತವಾಗಿ ನಡೆಯಬೇಕೆಂದು ಮುಖ್ಯಮಂತ್ರಿಗಳು ಮತ್ತು ಗೃಹ ಸಚಿವರಾದ ಪರಮೇಶ್ವರ ಅವರಿಗೆ ಖುದ್ದಾಗಿ ಭೇಟಿ ನೀಡಿ ಸಿ.ಐ.ಡಿ. ಯವರಿಗೆ ಪ್ರಕರಣ ವಹಿಸಬೇಕು ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.
ಸಚಿನ ಪಾಂಚಾಳ ಆತ್ಮಹತ್ಯೆಗೆ ಮುಂಚೆ ಬರೆದಿಟ್ಟಿರುವ ಡೆತ್ ನೋಟ್‌ನಲ್ಲಿರುವ ಹೆಸರುಗಳನ್ನು ಸಚಿವರಾದ ಪ್ರೀಯಾಂಕ್ ಖರ್ಗೆಜಿಯವರ ಆಪ್ತರು ಎಂದು ಒಂದೇ ಕಾರಣಕ್ಕಾಗಿಯೇ ಸಚಿವರ ಮೇಲೆ ಆರೋಪ ಮಾಡುವುದು ಎಷ್ಟರ ಮಟ್ಟಿಗೆ ಸರಿ ? ಎಂದು ಅವರು ಪ್ರಶ್ನಿಸಿದರು.
ರಾಜ್ಯದಲ್ಲಿ ಸತತ 3 ಬಾರಿ ಶಾಸಕರಾಗಿ, ಸಚಿವರಾಗಿ, ಜನ ಸೇವೆ ಮಾಡುತ್ತಿರುವ ಯುವ ನಾಯಕ ಪ್ರಿಯಾಂಕ್ ಖರ್ಗೆಜಿಯವರ ಏಳಿಗೆ ಸಹಿಸಲಾರದ ಬಿಜೆಪಿ ನಾಯಕರು ವಿನಾಕಾರಣ ಆರೋಪ ಮಾಡಿ ರಾಜಿನಾಮೆ ಕೇಳುತ್ತಿರುವುದು ಉಗ್ರವಾಗಿ ಖಂಡಿಸುತ್ತೇನೆ ಎಂದರು. ಸಚಿನ ಪಾಂಚಾಳ ಇವರ ಆತ್ಮಹತ್ಯೆಗೆ ಕಾರಣರಾದವರು ಯಾರೇ ಆಗಲೀ ನಿಷ್ಪಕ್ಷಪಾತವಾಗಿ ತನಿಖೆ ಮಾಡಿ ತಪ್ಪಿಸ್ಥರ ಮೇಲೆ ಕಾನೂನು ಪ್ರಕಾರ ಕ್ರಮ ಕೈಗೊಂಡು ಸಚಿನ ಕುಟುಂಬದವರಿಗೆ ನ್ಯಾಯ ಕೋಡಿಸಬೇಂದು ಈ ಪತ್ರಿಕಾ ಪ್ರಕಟಣೆ ಮೂಲಕ ರಾಜ್ಯ ಸರ್ಕಾರಕ್ಕೆ ಅವರು ಮನವಿ ಮಾಡಿಕೊಂಡರು.
