ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಮಾರ್ಟಳ್ಳಿಯಲ್ಲಿ ಭೀಮ ಕೋರೆಂಗಾವ್ ವಿಜಯೋತ್ಸವ ಸಂಭ್ರಮಾಚರಣೆ

ಭೀಮ ಕೋರೆಂಗಾವ್ ವಿಜಯೋತ್ಸವದ ಹಿಂದೆ ಸಾಕಷ್ಟು ವಿಚಾರಗಳಿವೆ: ಫಾದರ್ ಟೆನ್ನಿಕುರಿಯನ್

ಹನೂರು : ಭೀಮ ಕೋರೆಂಗಾವ್ ವಿಜಯೋತ್ಸವವನ್ನು ಆಚರಣೆ ಮಾಡುತ್ತಿರುವುದು ತುಂಬಾ ಸಂತೋಷ ವಾಗಿದೆ. ವಿಜಯೋತ್ಸವ ಹಿಂದೆ ಸಾಕಷ್ಟು ವಿಚಾರಗಳಿವೆ, ಭೀಮ ಕೋರೆಂಗಾವ್ ಆಚರಣೆಯ ಬಗ್ಗೆ ಪ್ರತಿಯೊಬ್ಬರು ತಿಳಿದುಕೊಳ್ಳಬೇಕು ಎಂದು ಚರ್ಚ್ ಫಾದರ್ ಟೆನ್ನಿಕುರಿಯನ್ ಅವರು ತಿಳಿಸಿದರು.

ತಾಲೂಕಿನ ಮಾರ್ಟಳ್ಳಿ ಗ್ರಾಮದ ಸೆಂಟ್ ತೇರೆಸ್ಸಾ ಚರ್ಚ್ ಅವರಣದ ಸಮುದಾಯ ಭವನದಲ್ಲಿ ಮೈಸೂರು ವಿಭಾಗ ಚಾ‌ಮರಾಜನಗರ ಜಿಲ್ಲೆ
ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ 207ನೇ ಭೀಮ ಕೋರೆಂಗಾವ್ ವಿಜಯೋತ್ಸವ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ನಂತರ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ, ಗೌರವ ಸಲ್ಲಿಸಿ ನಂತರ ಮಾತನಾಡಿದರು.

ಬಾಬಾ ಸಾಹೇಬ್ ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರು ಭಾರತಕ್ಕೆ ಸಂವಿಧಾನವನ್ನು ಕೊಡುಗೆಯಾಗಿ ನೀಡಿದ್ದಾರೆ, ಭಾರತದಲ್ಲಿ ಜೀವಿಸುವ ಎಲ್ಲರಿಗೂ ಜನರು ಸಮಾಜದಲ್ಲಿ ಸರಿ ಸಮಾನ ಸ್ಥಾನಮಾನ ಸಿಗಬೇಕು ಎನ್ನುವ ನಿಟ್ಟಿನಲ್ಲಿ ಎಲ್ಲರ ವರ್ಗದ ಜನರಿಗೆ ಜಾತಿ ಜನಾಂಗಕ್ಕೆ ಸೇರಿದ ಸಂವಿಧಾನ ನೀಡಿದ್ದಾರೆ. ಅದನ್ನು ಅರ್ಥ ಮಾಡಿಕೊಳ್ಳಬೇಕು ಎನ್ನುವ ಸಂದೇಶವನ್ನು ನೀಡಿದ್ದಾರೆ. ಸಮಾಜ ಮುಂದೆ ಬರಬೇಕಾದರೆ ವಿದ್ಯಾವಂತರಾಗಬೇಕು ಎಂದು ಸಲಹೆ ನೀಡಿದರು.

ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚು ಜನರು ಮೊಬೈಲ್ ಗೆ ಗುಲಾಮರಾಗುತ್ತಿದ್ದೇವೆ, ಸಂಬಂಧಗಳನ್ನು ನಾಶ ಮಾಡಿಕೊಳ್ಳುತ್ತಿದ್ದೇವೆ, ಕೆಟ್ಟದ್ದಕ್ಕೆ ಉಪಯೋಗವಾಗುತ್ತಿದೆ ಆದ್ದರಿಂದ ಕೆಟ್ಟ ಕೆಲಸಗಳಿಗೆ ಭಾಗಿಯಾಗುವವರು ಗುಲಾಮರಾಗುತ್ತಾರೆ, ಅಂಬೇಡ್ಕರ್ ಅವರ ವ್ಯಕ್ತಿತ್ವಗಳನ್ನು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.

ನಂತರ ಕೊಳ್ಳೇಗಾಲ ಡಾ. ಬಿಆರ್ ಅಂಬೇಡ್ಕರ್ ಪ್ರತಿಮೆ ನಿರ್ಮಾತೃ ಹಾಗೂ ಪ್ರಥಮ ದರ್ಜೆ ಗುತ್ತಿಗೆದಾರ ಓಲೆ ಮಾದೇವ ಅವರು ಮಾತನಾಡಿ ಭೀಮ ಕೋರಂಗಾವ್ ವಿಜಯೋತ್ಸವ ಆಚರಣೆಯ ವಿಚಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವರಾದ ಮಹದೇವಪ್ಪ ಅವರ ಗಮನಕ್ಕೆ ತಂದು ಜನವರಿ ಒಂದರ ಭೀಮ ಕೊರಂಗಾವ್ ಆಚರಣೆಯಂದು ರಜಾ ದಿನವನ್ನಾಗಿ ಘೋಷಣೆಯನ್ನಾಗಿ ಮಾಡಬೇಕು ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಗ್ರಾಮ ಪಂ. ಮಾಜಿ ಉಪಾಧ್ಯಕ್ಷ ಹಾಲಿ ಸದಸ್ಯ ರಾಮಲಿಂಗಂ ಅವರು ಮಾತನಾಡಿ ಸಮಾಜದಲ್ಲಿ ಶೋಷಿತರ ತುಳಿತಕ್ಕೆ ಒಳಗಾಗಿದ್ದವರು, ದಲಿತರನ್ನು ಆಸ್ಪಕ್ಷತೆಯಿಂದ ನೋಡುತ್ತಿದ್ದರು. ದಲಿತರು ಸಮಾಜದಲ್ಲಿ ಶೈಕ್ಷಣಿಕವಾಗಿ ಹಿಂದುಳಿದ್ದರು. ಅಂಬೇಡ್ಕರ್ ಅವರ ಸಂವಿಧಾನದ ಕೊಡುಗೆಯಿಂದ ಇವತ್ತು ಸಮಾಜದಲ್ಲಿ ಸಮಾನತೆ ಸ್ವಾತಂತ್ರ್ಯ ಬಂದಿದೆ.

ನಮ್ಮ ದೇಶಕ್ಕೆ ಅಮೂಲ್ಯವಾದ ಸಂವಿಧಾನವನ್ನು ಕೊಡುಗೆಯಾಗಿ ನೀಡಿದ ಮಹಾನ್ ನಾಯಕರು ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರ ತತ್ವ ಆದರ್ಶಗಳ ಬಗ್ಗೆ ತಿಳಿದುಕೊಂಡು. ಶಿಕ್ಷಣ ಕೊಡಿಸುವ ನಿಟ್ಟಿನಲ್ಲಿ ಸಮಾಜದಲ್ಲಿ ಬೆಳೆಯುವಂತಾಗಬೇಕು.

206 ವರ್ಷಗಳ ಹಿಂದೆ ಪೇಶ್ವೆಯ 25 ಸಾವಿರ ಸೈನಿಕರ ವಿರುದ್ಧ ಐನೂರು ಮಂದಿ ದಲಿತ ಮಹಾರ್ ಸೈನಿಕರು ಹೋರಾಡಿದ ಜನವರಿ ಒಂದನ್ನು ದಲಿತರು ನಾವು ಅನುಭವಿಸಿದ ಅಸ್ಪೃಶ್ಯತೆಯ ನೋವು ಸಂಕಟಗಳ ಪ್ರತಿರೋಧ ದಿನವನ್ನಾಗಿ ದೇಶ್ಯಾದ್ಯಂತ ಆಚರಿಸಲಾಗುತ್ತದೆ. ಸಂವಿಧಾನದ ಅಡಿಯಲ್ಲಿ ನಮ್ಮ ಹಕ್ಕುಗಳನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಫಾದರ್ ಟೆನ್ನಿ ಕುರಿಯನ್ ಅವರು ಭೀಮ ಕೊರಂಗಾವ್ ಪುಸ್ತಕವನ್ನು ಬಿಡುಗಡೆ ಮಾಡಿದರು. ಚಾಮರಾಜನಗರ ಜಿಲ್ಲಾ ಎಸ್.ಸಿ ಎಸ್.ಟಿ ಗುತ್ತಿಗೆದಾರ ಸಂಘದ ಅಧ್ಯಕ್ಷ ಎಂಎಸ್ ಮಾದಯ್ಯ, ಹಾಗೂ ಡೆಲ್ಲಿ ಡಾ.ಬಿಆರ್ ಅಂಬೇಡ್ಕರ್ ನ್ಯಾಷನಲ್ ಫಿಲೋಸಫಿ ಪ್ರಶಸ್ತಿ ಪುರಸ್ಕೃತರು ರಾಮಲಿಂಗಂ ಅವರಿಗೆ ನಿಂಪುವಾರ್ತೆ ಪತ್ರಿಕೆ ಸಂಪಾದಕ ರಾಜೇಶ್ ಅವರು ಸನ್ಮಾನಿಸಿದರು.

ಕಾರ್ಯಕ್ರಮಕ್ಕೆ ಮೊದಲು ಮಾರ್ಟಳ್ಳಿ ಗ್ರಾಮದಲ್ಲಿ ನಡೆದ ಭೀಮ ಕೋರೆಂಗಾವ್ ವಿಜಯೋತ್ಸವ ಆಚರಣೆಯ ವಿಶೇಷವಾಗಿ ಗ್ರಾಮದ ಮುಖ್ಯ ರಸ್ತೆಯಲ್ಲಿ ಜೈ ಭೀಮ್ ಬಾವುಟ ಹಿಡಿದು ಘೋಷಣೆ ಕೂಗುತ್ತಾ ಮೆರವಣಿಗೆ ಮಾಡಲಾಯಿತು.

ಈ ಸಂದರ್ಭದಲ್ಲಿ ಮಾರ್ಟಳ್ಳಿ ಗ್ರಾಮ ಪಂ. ಅಧ್ಯಕ್ಷ ಇನ್ನಾಸಿಮತ್ತು, ಗುಡ್ ರಾಜ್ಯ ಸಂಘಟನಾ ಸಂಚಾಲಕರು ಮೈಸೂರು ವಿಭಾಗೀಯ ಸಂಚಾಲಕ ವಾಡಿ ಸಿದ್ದರಾಜು, ನಿಂಪು ವಾರ್ತೆ ಪತ್ರಿಕೆ ಸಂಪಾದಕ ರಾಜೇಶ್, ದಲಿತ ಮುಖಂಡರಾದ ಮುಳ್ಳೂರು ಶಿವಮಲ್ಲು, ನಾಗರಾಜು, ಬಾಲಯ್ಯ, ಗುತ್ತಿಗೆದಾರ ಪುಟ್ಟಸ್ವಾಮಿ, ಪೆದ್ದನಪಾಳ್ಯ ಮಣಿ, ಎಂ.ಜಿ ದೊಡ್ಡಿ ಮುರುಗೇಶ್, ಮಹದೇಶ್ವರ ಬೆಟ್ಟ ದೊರೆಸ್ವಾಮಿ (ಜಾನಿ), ಮಾದೇಶ, ವೇಲನ್ ಸೇರಿದಂತೆ ಇನ್ನಿತರರು ಹಾಜರಿದ್ದರು

ಜಾತಿ ಭೇದ ಅಸ್ಪೃಶ್ಯತೆ ಇನ್ನೂ ಜೀವಂತವಾಗಿದೆ: ಸಿಸ್ಟರ್ ಕ್ರಿಸ್ಟಿ

ಮಾರ್ಟಳ್ಳಿಯಲ್ಲಿ ನಡೆದ ಭೀಮ ಕೋರೆಂಗಾವ್ ವಿಜಯೋತ್ಸವ ಆಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಶೆಫರ್ಡ್ ಸಂಸ್ಧೆಯ ಸಿಸ್ಟರ್ ಕ್ರಿಸ್ಟಿ ಅಸ್ಪೃಶ್ಯತೆ ಜಾತಿ ತಾರತಮ್ಯದ ವಿರುದ್ಧ ಹೋರಾಟ ಮಾಡಿದ ನೂರಾರು ವರ್ಷಗಳಿಂದಲೂ ಸಹ ಇಂದಿಗೂ ಬೇದ ಭಾವ ಜಾತಿ ತಾರತಮ್ಯ ಇಂದಿಗೂ ಜೀವಂತವಾಗಿದೆ. ಇಂದಿಗೂ ಸಮಾಜದಲ್ಲಿ ಸಮಾನತೆಯ ಸ್ವಾತಂತ್ರ್ಯ ಸಿಕ್ಕಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಈ ಭಾಗದ ದಲಿತ ಜನರು ಆರ್ಥಿಕವಾಗಿ ಬೆಳೆಯಲು ಶೆಫರ್ಡ್ ಸಂಸ್ಥೆಯ ಮೂಲಕ ಐವತ್ತು ಅರವತ್ತು ಸಾವಿರ ರೂ. ವೆಚ್ಚದಲ್ಲಿ ಐದಾರು ಬಡ ಕುಟುಂಬಗಳಿಗೆ ರಾಗಿ ಮಿಷನ್ ಕೊಡಸಲಾಗಿತ್ತು. ಇದರಿಂದ ಬರುವ ಆದಾಯದಿಂದ ಕುಟುಂಬಗಳು ಆರ್ಥಿಕವಾಗಿ ಬೆಳೆಯಲಿ ಎಂಬ ಉದ್ದೇಶವಾಗಿತ್ತು. ಆದರೆ ಸ್ವಲ್ಪ ದಿನಗಳು ಕಳೆದ ನಂತರ ನಂದ ಕುಟುಂಬದವರು ನಮಗೆ ಇದರಿಂದ ಆದಾಯ ಬರುವುದಿಲ್ಲ ನಿಮ್ಮ ಸಂಸ್ಥೆಗೆ ವಾಪಸ್ ತೆಗೆದುಕೊಳ್ಳಿ ಎಂದು ಭಾವುಕನುಡಿಗಳ ನಾಡಿದ ದಿನಗಳಿವು.

ಏಕೆಂದರೆ ನನಗೆ ಅಲ್ಲಿ ಅರ್ಥವಾಗಿದ್ದು ದಲಿತರ ಯಾವುದೇ ವ್ಯಾಪಾರ ವಹಿವಾಟು ನಡೆಸಿದರೆ ವ್ಯಾಪಾರ ತೀರಾ ಕಡಿಮೆಯಾಗುತ್ತದೆ. ಆದರೆ ನಮಗೆ ಬೇಡ ಎಂದು ತಿರಸ್ಕರಿಸಿದರು ಏಕೆಂದರೆ ಈ ಭಾಗದಲ್ಲಿ ಇನ್ನೂ ಬೇದಭಾವ ಜಾತಿ ತಾರತಮ್ಮ ಇನ್ನೂ ಇದೆ ಇದರಿಂದ ನಮ್ಮನ್ನು ನೋಡುತ್ತಾರೆ ಎಂದಿದ್ದಾರೆ. ಇದು ಈ ಭಾಗದಲ್ಲಿ ಜಾತಿ ತಾರತಮ್ಯದಲ್ಲಿರುವ ವ್ಯಾಮೋಹ ಎಂಬುದು ಪರೋಕ್ಷವಾಗಿಯೇ ತಿಳಿದಂತಾಯಿತು ಎಂದು ಉದಾಹರಣೆ ನೀಡಿದರು.

ಬಡ ಜನರು ಮಕ್ಕಳಿಗೆ ಶೆಫರ್ಡ್ ಸಂಸ್ಧೆಯ ಮೂಲಕ ವಿದ್ಯಾಭ್ಯಾಸ ಆಸ್ಪತ್ರೆ ಮನೆಗಳಿಗೆ ಶೌಚಾಲಯವನ್ನು ನಮ್ಮ ಸಂಸ್ಥೆಯ ಮೂಲಕ ಮಾಡಿಕೊಡಲಾಗಿದೆ. ಈ ಭಾಗದಲ್ಲಿ ಇನ್ನು ಜಾತಿ ತಾರತಮ್ಯ ಇಂದಿಗೂ ಜೀವಂತವಾಗಿದೆ ಇದನ್ನು ಯಾವ ಕಾಲಕ್ಕೂ ಬದಲಾವಣೆ ತರಲು ಸಾಧ್ಯವಿಲ್ಲ. ಬದಲಾವಣೆ ಬಯಸಬೇಕಾದರೆ ಪ್ರತಿಯೊಬ್ಬರು ಪ್ರತಿ ಮಕ್ಕಳು ಶಿಕ್ಷಣದಿಂದ ವಿದ್ಯಾವಂತರ ಆದರೆ ಮಾತ್ರ ಸಾಧ್ಯ.

ಅಂತಹ ಅಸ್ಪೃಶ್ಯತೆ ಇದ್ದಂತಹ ಕಾಲದಲ್ಲಿ ನೊಂದು ಬೆಂದು ಬೆಳೆದು ಡಾಕ್ಟರ್ ಬಿ.ಆರ್ ಅಂಬೇಡ್ಕರ್ ಅವರು ಓದಿ ವಿದ್ಯಾವಂತರಾಗಿ ಸಂವಿಧಾನವನ್ನು ಕೊಟ್ಟಿದ್ದಾರೆ. ಅವರ ಸಾಧನೆ ಹೋರಾಟ ಆದರ್ಶಗಳ ಬಗ್ಗೆ ತಿಳಿದುಕೊಂಡು. ಅವರ ಮಾರ್ಗದರ್ಶನದಿಂದ ಪ್ರತಿಯೊಬ್ಬರು ವಿದ್ಯಾವಂತರಾದರೆ ಅಂಬೇಡ್ಕರ್ ಅಂತಹ ಸಾಧಕರಾಗಬಹುದು.
ಖಡ್ಗವನ್ನು ಎತ್ತಿ ಬೆಳೆಯುವುದಕ್ಕೆ ಬುದ್ಧಿ ಶಕ್ತಿ ಉಪಯೋಗಿಸಿ ವಿದ್ಯಾವಂತರಾಗಿ ಅಸ್ಪೃಶ್ಯತೆಯ ವಿರುದ್ಧ ಹೋರಾಡಿ ಸಮಾಜದಲ್ಲಿ ಸಮಾನತೆಯಿಂದ ಬದುಕುವುದನ್ನು ಕಲಿಯಬೇಕು ನಮ್ಮ ಬುದ್ಧಿಶಕ್ತಿಯಿಂದ ವಿದ್ಯಾವಂತರಾಗಬೇಕು ಎಂದು ತಿಳಿಸಿದರು.

ವರದಿ ಉಸ್ಮಾನ್ ಖಾನ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ