ಮಂಗಳೂರು : ಕರ್ನಾಟಕ ರಾಜ್ಯ ವಿಧಾನಸಭೆಯ ಸಭಾಧ್ಯಕ್ಷರು, ಮಂಗಳೂರು ಶಾಸಕರಾದ ಶ್ರೀ ಯು.ಟಿ. ಖಾದರ್ ಇವರ ಸಾರಥ್ಯದಲ್ಲಿ ಇದೇ ಬರುವ ತಾ. 11-01-2025ನೇ ಶನಿವಾರ ಬೆಳಿಗ್ಗೆ ಗಂಟೆ 9.00ರಿಂದ ಮಂಗಳೂರು ಸಮೀಪದ ನರಿಂಗಾನ ಗ್ರಾಮದ ಮೋರ್ಲ-ಬೋಳದಲ್ಲಿ
ತೃತೀಯ ವರ್ಷದ ಹೊನಲು ಬೆಳಕಿನ ಲವ-ಕುಶ ಜೋಡುಕರೆ ನರಿಂಗಾನ ಕಂಬಳೋತ್ಸವ
ಜರುಗಲಿರುವುದು ಎಂದು ಕಂಬಳ ಸಮಿತಿ ಗೌರವ ಅಧ್ಯಕ್ಷ ಶ್ರೀ ವೆಂಕಪ್ಪ ಕಾಜವ ಹಾಗೂ ಕಾರ್ಯಾಧ್ಯಕ್ಷ ಮಿತ್ತಕೋಡಿ ಶ್ರೀ ಪ್ರಶಾಂತ ಕಾಜವ ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಆ ಪ್ರಯುಕ್ತ ಕಂಬಳಾಭಿಮಾನಿಗಳು, ಕೋಣಗಳ ಯಜಮಾನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಕಂಬಳ ಸಮಿತಿ ಅಧ್ಯಕ್ಷ ರಾದ ಮಂಗಳೂರು ಶಾಸಕ ಹಾಗೂ ವಿಧಾನ ಸಭೆ ಅಧ್ಯಕ್ಷ ಶ್ರೀ ಯು ಟಿ ಖಾದರ್ ಅವರು ಸಹ ವಿನಂತಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ವರದಿ : ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ
