ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕು ಖಾನಾಹೊಸಹಳ್ಳಿ ಹೋಬಳಿಯ 03/01/2025 ರಂದು ನಡೆಯುವ ಭೀಮ ಕೋರಗಾಂವ್ ವಿಜಯೋತ್ಸವದ ಯಾತ್ರೆಗೆ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಚಾಲನೆ ನೀಡಿ ಅಂಬೇಡ್ಕರ್ ಸರ್ಕಲ್ ಹೊರಗೆ ಮುಕ್ತಾಯಗೊಳಿಸಲಾಯಿತು.
ಪ್ರೊ. ಬಿ ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ ವಿಜಯನಗರ ಸಂಚಾಲಕರಾದ ಎಸ್ ದುರ್ಗೇಶ್ ರವರು ಮಾತನಾಡುತ್ತಾ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ತುರ್ತು ಕಾರ್ಯ ಕೆಲಸಗಳಿದ್ದರೂ ಸಹ ಅವುಗಳೆಲ್ಲವನ್ನೂ ಬದಿಗಿರಿಸಿ, ಜಗತ್ತಿನ ಯಾವ ಮೂಲೆಯಲ್ಲಿದ್ದರೂ ಸಹ ಅಲ್ಲಿಂದ ಜನವರಿ ಒಂದನೇ ತಾರೀಖಿನಂದು “ಕೊರಂಗಾವ್ ” ಗೆ ತಮ್ಮ ಕುಟುಂಬ ಸಮೇತರಾಗಿ ಬಂದು ಅಲ್ಲಿರುವ ಹುತಾತ್ಮ ಯೋಧರ ಸ್ಮಾರಕಕ್ಕೆ ( ವಿಜಯ ಸ್ತಂಭಕ್ಕೆ ) ಶ್ರದ್ಧಾಂಜಲಿ ಸಲ್ಲಿಸುತ್ತಿದ್ದರು.
ಅವರು ಬದುಕಿರುವ ತನಕ ಒಂದೇ ಒಂದು ವರ್ಷವೂ ಸಹ ಜನವರಿ 1ನೇ ತಾರೀಕು ಅಲ್ಲಿಗೆ ಬರುವುದನ್ನು ಬಾಬಾ ಸಾಹೇಬರು ತಪ್ಪಿಸಲಿಲ್ಲ ಪ್ರತಿ ವರ್ಷ ಜನವರಿ 1ನೇ ತಾರೀಕು ಹೊಸ ವರ್ಷದ ಸಂಭ್ರಮದ ದಿನವಾದರೆ ಭಾರತದ ದಲಿತರ ಪಾಲಿಗೆ ಇದು ಅಸ್ಪೃಶ್ಯತೆಯ ವಿರುದ್ಧ ಬಂಡೆದ್ದ ಅಸ್ಪೃಶ್ಯರ ಗುಂಪೊಂದು ಮಹಾರಾಷ್ಟ್ರದ ಪೇಶ್ವೆಗಳ ವಿರುದ್ಧ ಕೆಚ್ಚೆದೆಯ ಹೋರಾಟ ನಡೆಸಿ ದಿಗ್ವಿಜಯವನ್ನು ಸಾಧಿಸಿದ ದಿನ ಈ ಘಟನೆ ಡಾಕ್ಟರ ಅಂಬೇಡ್ಕರ್ ಅವರ ಹೋರಾಟಗಳ ಬದುಕಿನ ಪ್ರೇರಣೆಗಳಲ್ಲಿ ಒಂದು ಕ್ರಿ ಶ 1800 ರಲ್ಲಿ ಮಹಾರಾಷ್ಟ್ರದಲ್ಲಿ ಪೇಶ್ವೆಗಳು ಆಡಳಿತ ನಡೆಸುತ್ತಿದ್ದ ಸಂದರ್ಭದಲ್ಲಿ ಅಸ್ಪೃಶ್ಯರ ಪಾಲಿನ ಕರಾಳ ಚರಿತ್ರೆಯಾಗಿತ್ತು, ( ಭೀಮ ಕೋರಂಗಾವ್ ದಂಗೆ 1-1-1818) ಅಂದರೆ ಸಿಪಾಯಿ ದಂಗೆಗಿಂತ 40 ವರ್ಷಗಳ ಮೊದಲೇ ನಡೆದ ಅಸ್ಪೃಶ್ಯರ ಮಹಾ ದಂಗೆ ಇದಾಗಿದೆ ಅವರು ಇನ್ನೂ ಮುಂತಾದ ಅವರು ಅನುಭವಿಸಿದಂತಹ ಹಲವಾರು ಘಟನೆಗಳನ್ನು ಮಾತನಾಡುತ್ತಾ ಇನ್ನೂ ಹೆಚ್ಚಿನ ವಿಷಯಗಳನ್ನು ತಿಳಿಸಿದರು.
ಈ ಸಂದರ್ಭದಲ್ಲಿ
ಪ್ರೊ. ಬಿ ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ ವಿಜಯನಗರ ಸಂಚಾಲಕರಾದ ಎಸ್ ದುರ್ಗೇಶ್ ಕೂಡ್ಲಿಗಿ, ತಾಲೂಕು ಸಂಚಾಲಕರಾದ ಟಿ ಗಂಗಾಧರ್, ಜಿಲ್ಲಾ ಸಂಘಟನಾ ಸಂಚಾಲಕರಾದ ಕಂದಗಲ್ ಪರಶುರಾಮ್,ದುರ್ಗೇಶ್ ಬಿಟಿ ಗುದ್ದಿ, ಸಿದ್ದಾಪುರ ಈಶ್ವರಪ್ಪ, ಕಾನಾ ಮಡುಗು ದುರ್ಗಪ್ಪ, ತಾಲೂಕು ಸಂಘಟನಾ ಸಂಚಾಲಕರಾದ ಕರಿಬಸಪ್ಪ ಲೋಕಿಕೆರೆ, ಖಾನಾಮಡಗು ಫಕೀರಪ್ಪ,ಮುಗಪ್ಪ ಕೂಡ್ಲಿಗಿ, ಹೊಸಹಳ್ಳಿ ರುದ್ರಮುನಿ ತಿಪ್ಪೇಹಳ್ಳಿ, ಕುಂಬಳಗುಂಟೆ ಮೈಲಪ್ಪ, ಮಂಜುನಾಥ ಎನ್, ತಿಪ್ಪೇಶ್, ಗ್ರಾಮ ಪಂಚಾಯತಿ ಸದಸ್ಯರಾದ ಸಿದ್ದಪ್ಪ, ಇಮ್ಡಾಪುರ್ ನಾಗರಾಜ್,ಎಂ ಬಸವರಾಜ್, ಎಸ್ ಎಂ ಮಂಜುನಾಥ, ಜಿ ನಾಗೇಶ್, ಗ್ರಾಮ ಪಂಚಾಯತಿ ಸದಸ್ಯರಾದ ದುರ್ಗಪ್ಪ ಹುಲಿಕೆರೆ, ಶ್ರೀನಿವಾಸ್ ವಕೀಲರು, ಅವಿನಾಶ್, ಮಾರುತಿ ಕರಿಬಸಪ್ಪ ಮತ್ತು ವಿವಿಧ ಗ್ರಾಮಗಳಿಂದಂತ ಬಂದಂತಹ ದಲಿತ ಬಂಧುಗಳು ಹಾಗೂ ಪತ್ರಿಕಾ ಮಾಧ್ಯಮದವರು,ಪೊಲೀಸ್ ಇಲಾಖೆ ಕೊಟ್ಟೂರು ಸಿಪಿಐ ಸೇರಿದಂತೆ ಕೂಡ್ಲಿಗಿ ಡಿವೈಎಸ್ಪಿ,ಹೊಸಹಳ್ಳಿ ಪೊಲೀಸ್ ಠಾಣಾಧಿಕಾರಿ ಹಾಗೂ ಇತರರು ಇದ್ದರು.
ವರದಿ: ಗುರುರಾಜ್ ಎಲ್, ಕಲ್ಲಹಳ್ಳಿ ಟಿ
