ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ರಾಜ್ಯ ಸಾರಿಗೆ ಪ್ರಯಾಣ ದರ ಶೇ15% ಹೆಚ್ಚಳಕ್ಕೆ ಸಂಪುಟದ ಒಪ್ಪಿಗೆ ಖಂಡನೀಯ : ನಿರುಪಾದಿ ಕೆ. ಗೋಮರ್ಸಿ

ಶಕ್ತಿ ಯೋಜನೆಯ ಮೂಲಕ ರಾಜ್ಯದ ಮಹಿಳೆಯರಿಗೆ ಉಚಿತ ಪ್ರಯಾಣದ ಅನುಕೂಲ ಮಾಡಿದ್ದ ಕಾಂಗ್ರೆಸ್ ಸರ್ಕಾರ ಶಕ್ತಿ ಯೋಜನೆಯಿಂದ ಯಾವುದೇ ನಷ್ಟವಿಲ್ಲ,ಯೋಜನೆ ಜಾರಿಗೆ ಬಂದ ನಂತರ ಸಾರಿಗೆ ನಿಗಮಗಳ ವಹಿವಾಟು ಹೆಚ್ಚಾಗಿದೆ ಎಂಬುದನ್ನು ಹೇಳುತ್ತಲೇ ನಿಗಮದ ನೌಕರರಿಗೆ ನೀಡಬೇಕಾದ ಸಾವಿರಾರು ಲಕ್ಷ ರೂಪಾಯಿಗಳ ಸಂಬಳವನ್ನು ಬಾಕಿ ಉಳಿಸಿಕೊಂಡಿತ್ತು. ಈಗ ಈ ಬಾಕಿ ತೀರಿಸಲು ಮರಳಿ ಜನರ ಜೇಬಿಗೆ ಕೈ ಹಾಕಲು ಸರ್ಕಾರ ಮುಂದಾಗಿದೆ. ಎಂದು ಕೆ ಆರ್ ಎಸ್ ಪಕ್ಷದ ಯುವ ಮುಖಂಡ ನಿರುಪಾದಿ ಕೆ ಗೋಮರ್ಸಿ ಪತ್ರಿಕಾ ಹೇಳಿಕೆ ಮುಖಾಂತರ ರಾಜ್ಯ ಸರ್ಕಾರದ ಯಡವಟ್ಟಿನ ಒಪ್ಪಿಗೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ . ಮುಂದುವರೆದು ಈಗ ನಾವು ಯೋಚಿಸಬೇಕಿರುವುದು ಸರ್ಕಾರ ಜನರಿಗೆ ಉಚಿತವಾಗಿ ಕೊಟ್ಟಿದ್ದು ಏನು? ಜನರು ಜಾತಿ, ಮತ ಮತ್ತು ಹಣದ ಚುನಾವಣೆಗೆ ಒಗ್ಗಿಕೊಂಡಿರುವ ಮತ್ತು ಸರ್ಕಾರದ ನಿರ್ಧಾರಗಳಿಂದ ಆಗುವ ಕಷ್ಟ ನಷ್ಟಗಳಿಗೂ ತಮಗೂ ಯಾವುದೇ ಸಂಬಂಧವಿಲ್ಲ ಎನ್ನುವ ರೀತಿಯಲ್ಲಿ ಪ್ರತಿರೋಧವಿಲ್ಲದೇ ತಮ್ಮ ಪಾಡಿಗೆ ತಾವು ಸುಮ್ಮನಿರುವ ಈ ಕಾಲ ನಾವೇ ಆಯ್ಕೆ ಮಾಡಿಕೊಂಡಿರುವ ಖದೀಮ ರಾಜಕಾರಣಿಗಳಿಗೆ ಸುಗ್ಗಿ ಕಾಲ.
ಭ್ರಷ್ಟರು ಮತ್ತು ಸ್ವಾರ್ಥಿಗಳು ನಮ್ಮನಾಳುತ್ತಿರುವಾಗ ಒಳ್ಳೆಯದನ್ನು ನಿರೀಕ್ಷಿಸುವುದೇ ಒಂದು ರೀತಿಯ ಮೂರ್ಖತನವಾಗಿದೆ.
ಸರ್ಕಾರದ ಇಂತಹ ಜನವಿರೋಧಿ ಅದರಲ್ಲೂ ಸಾಮಾನ್ಯ ಜನರಿಗೆ ಹೆಚ್ಚು ಹೊರೆಯಾಗುವ ನಿರ್ಧಾರವನ್ನು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಖಂಡಿಸುತ್ತದೆ ಮತ್ತು ಸರ್ಕಾರವು ಆಡಳಿತದ ಎಲ್ಲಾ ಹಂತಗಳಲ್ಲಿ ಪಾರದರ್ಶಕತೆಯನ್ನು ಕಾಪಾಡಿಕೊಂಡು ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ ಜನಪರ ಆಡಳಿತ ನೀಡಬೇಕು ಹಾಗು ಈ ಕೂಡಲೇ ಪ್ರಯಾಣ ದರ ಹೆಚ್ಚಿಸುವ ನಿರ್ಧಾರವನ್ನು ಹಿಂತೆಗೆದುಕೊಳ್ಳಬೇಕೆಂದು ಆಗ್ರಹಿಸಿದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ