ರಾಯಚೂರು ಜಿಲ್ಲೆಯ ಸಿಂಧನೂರು ನಗರದ ಗ್ರಾಮೀಣ ಪೊಲೀಸ್ ಠಾಣೆ ಹಾಗೂ ಸಂಚಾರಿ ಪೊಲೀಸ್ ಠಾಣೆಯ ಆವರಣದಲ್ಲಿ ವನಸಿರಿ ಫೌಂಡೇಷನ್ ವತಿಯಿಂದ ನಡೆದಾಡುವ ದೇವರು, ಶತಮಾನದ ಸಂತರು ಪರಮ ಪೂಜ್ಯ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳ 2ನೇ ವರ್ಷದ ಪುಣ್ಯ ಸ್ಮರಣೆಯ ಅಂಗವಾಗಿ 50 ಸಸಿಗಳನ್ನು ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ವನಸಿರಿ ಅಮರೇಗೌಡ ಮಲ್ಲಾಪೂರ, ಪ್ರಿನ್ಸಿಪಾಲ್ ಶಿವಶಂಕರ ಪ್ರಸಾದ,ಶಾಮೀದ್ ಸಾಬ್ ,ಶಂಕರಗೌಡ ಎಲೆಕೂಡ್ಲಿಗಿ,ಶ್ರೀ ಅಮರಯ್ಯ ಶಾಸ್ತ್ರಿಗಳು ಎಲೆಕೂಡ್ಲಿಗಿ, ಟ್ರ್ಯಾಫಿಕ್ ಪಿಎಸ್ಐ ವೆಂಕಟೇಶ್ ಚವಾಣ್,ರಾಜು ಬಳಗಾನೂರ,ಮುದಿಯಪ್ಪ ಹೊಸಳ್ಳಿ ಕ್ಯಾಂಪ್ ಹಾಗೂ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳು ಇದ್ದರು.
