ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಜವಳಗೇರಾ ಗ್ರಾಮದ ಶ್ರೀ ಅಜಾತ ನಾಗಲಿಂಗ ಸ್ವಾಮಿ ಮೂಲ ಮಠದ ದೇವಸ್ಥಾನದಲ್ಲಿ ವನಸಿರಿ ಫೌಂಡೇಷನ್ ಹಾಗೂ ಸಿಂಧನೂರು ತಾಲೂಕ ವಿಶ್ವಕರ್ಮ ಸಮಾಜದ ವತಿಯಿಂದ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆ ಆಚರಿಸಿ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಶ್ರೀಮಠದ ಪ್ರಧಾನ ಅರ್ಚಕರಾದ ಕಾಶಿಪತೀ ಜವಳಗೇರ ಅವರು ರಾಜ್ಯ ಪ್ರಶಸ್ತಿ ಪುರಸ್ಕೃತರು,ವನಸಿರಿ ಫೌಂಡೇಷನ್ ಅಧ್ಯಕ್ಷ ಅಮರೇಗೌಡ ಮಲ್ಲಾಪುರ ಹಾಗೂ ಮಸ್ಕಿ ವನಸಿರಿ ಫೌಂಡೇಷನ್ ತಾಲೂಕ ಅಧ್ಯಕ್ಷ ರಾಜು ಪತ್ತಾರ ಬಳಗಾನೂರು ಅವರಿಗೆ ಸನ್ಮಾನಿಸಿ ಗೌರವಿಸಿದರು .
ಈ ಸಂದರ್ಭದಲ್ಲಿ ಪರಿಸರ ರಾಜ್ಯ ಪ್ರಶಸ್ತಿ ಪುರಸ್ಕೃತ ವನಸಿರಿ ಅಮರೇಗೌಡ ಮಲ್ಲಾಪೂರ,ವಿಶ್ವಕರ್ಮ ಸಮಾಜದ ತಾಲೂಕ ಅಧ್ಯಕ್ಷ ಮೌನೇಶ ತಿಡಿಗೋಳ, ಉಪಾಧ್ಯಕ್ಷರಾದ ಅಂಬಣ್ಣ ಗೊರೇಬಾಳ,ಕಾಳಿಕಾದೇವಿ ಟ್ರಸ್ಟ್ ಅಧ್ಯಕ್ಷ ಮಂಜುನಾಥ ಕೊಟ್ನಕಲ್,ಬಡಿಗೇರ ಸಂಘದ ಅಧ್ಯಕ್ಷ ರವೀಂದ್ರ ಗದ್ರಟಗಿ, ಚನ್ನಪ್ಪ ಕೆ ಹೊಸಹಳ್ಳಿ, ಮುದಿಯಪ್ಪ ಹೊಸಳ್ಳಿ ಕ್ಯಾಪ್, ಉಪೇಂದ್ರ ಆಚಾರಿ, ಬಸವರಾಜ LIC,ಬದ್ರಿನಾಥ ತಿಮ್ಮಪೂರ, ಹಾಗೂ ದೇವನಾಮಪ್ರಿಯಾ ಅಶೋಕ ಜಾನಪದ ಸಾಂಸ್ಮೃತಿಕ ಟ್ರಸ್ಟ್ ಸಾಗರ ಮತ್ತು ಸೇವಾ ಸಮಿತಿ ಸದಸ್ಯರು ಇದ್ದರು.
