ಓದುವ ಹವ್ಯಾಸ ರೂಢಿಸಿಕೊಳ್ಳಿ-ಶ್ರೀ ಷ.ಬ್ರ.ಫಕೀರೇಶ್ವರ ಶಿವಾಚಾರ್ಯ ಸ್ವಾಮೀಜಿ
ಗದಗ : ಪುಸ್ತಕಗಳು ನಮ್ಮಲ್ಲಿರುವ ಅಜ್ಞಾನವನ್ನು ದೂರಮಾಡಿ ಸರಿಯಾದ ಮಾರ್ಗದಲ್ಲಿ ಮುನ್ನಡೆಸುತ್ತವೆ,ಓದುವ ಹವ್ಯಾಸ ಬದುಕಿನ ಸನ್ಮಾರ್ಗದ ದಾರಿಯಾಗಿದ್ಧು ಎಲ್ಲರೂ ದಿನನಿತ್ಯ ಓದುವದನ್ನು ರೂಢಿಸಿಕೊಳ್ಳಬೇಕೆಂದು ಗದಗ ಓಂಕಾರಗಿರಿ ಹೀರೆಮಠದ ಶ್ರೀ ಷ.ಬ್ರ.ಫಕ್ಕೀರೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ನುಡಿದರು.
ಭಾಗ್ಯ ಶ್ರೀ ವಿವಿಧೋದ್ದೇಶಗಳ ಸೇವಾ ಸಂಸ್ಥೆ (ರಿ.) ಜಂತಲಿ ಶಿರೂರು ವತಿಯಿಂದ ಗದಗಿನ ಆದಿತ್ಯ ನಗರದದಲ್ಲಿರುವ ಓಂಕಾರಗಿರಿಯ ಶ್ರೀ ಓಂಕಾರೇಶ್ವರ ಹೀರೆಮಠದ ಸಭಾ ಭವನದಲ್ಲಿ ಜರುಗಿದ ಪ.ಪೂಜ್ಯ ಶ್ರೀ ಸಿದ್ದೇಶ್ವರ ಶ್ರೀ ಗಳ ಪುಣ್ಯಾರಾಧನೆ ಹಾಗೂ ಪುಟ್ಟರಾಜ ಗ. ಹಳ್ಳಿಕೇರಿಮಠ ಅವರ ಪ್ರಥಮ ಹುಟ್ಟು ಹಬ್ಬದ ಆಚರಣೆಯ ಅಂಗವಾಗಿ ನಡೆದ “ಕವಿಗಳ ಸಂಗಮ -ಕಾವ್ಯ ಕಮ್ಮಟ” 2025 ರ ಸಮಾರಂಭದಲ್ಲಿ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಶ್ರೀ ಚನ್ನವೀರಸ್ವಾಮಿ ಹೀರೆಮಠ (ಕಡಣಿ) ಮಾತನಾಡಿ ಸಮಾಜಮುಖಿಯಾಗಿ ಬದುಕುವುದು ಶ್ರೇಷ್ಠವಾದ ಜೀವನವಾಗಿದ್ಧು ಜಂತಲಿ ಶಿರೂರಿನ ಹಳ್ಳಿಕೇರಿಮಠ ಕುಟುಂಬ ಒಂದಿಲ್ಲೊಂದು ವಿಶಿಷ್ಟ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವದರ ಮೂಲಕ ನಾಡು ನುಡಿಗಾಗಿ ಸೇವೆ ಸಲ್ಲಿಸುತ್ತಿರುವದು ಶ್ಲಾಘನೀಯ ಎಂದರು.
ಸಾಹಿತ್ಯ ಮತ್ತು ಸಮಾಜದ ಕುರಿತು ಉಪನ್ಯಾಸ ನೀಡಿದ ಮುಂಡರಗಿಯ ವಿಶ್ರಾಂತ ಪ್ರಾಧ್ಯಾಪಕರಾದ ಆರ್ ಎಲ್ ಪೋಲಿಸ್ ಪಾಟೀಲ ಸಮಾಜದಲ್ಲಿ ಭ್ರಷ್ಠತೆಯನ್ನು ದಮನ ಮಾಡಿ ನ್ಯಾಯ ಸಮ್ಮತವಾದ ಜೀವನ ನಡೆಸಲು ಸಾಹಿತ್ಯ ದೊಡ್ಡ ಶಕ್ತಿಯಾಗಿ ಕೆಲಸ ಮಾಡುತ್ತಿದೆ,ಸಾಹಿತ್ಯ ವ್ಯಕ್ತಿಯ ಸರ್ವತೋಮುಖ ವಿಕಸನದ ಜೀವನಾಡಿಯಾಗಿದ್ದು ಕವಿಗಳು ಸಮಾಜದ ಓರೆ ಕೋರೆಗಳನ್ನು ಸಾಹಿತ್ಯದ ಮೂಲಕ ತಿದ್ಧುವ ಪ್ರಯತ್ನ ಮಾಡಬೇಕು ಎಂದು ಕವಿಮಾತು ಹೇಳಿದರು.
ಇನ್ನೋರ್ವ ಗದುಗಿನ ಸ.ಪ್ರ.ಮ.ಕಾಲೇಜಿನ ಪ್ರೋ.ಎಸ್.ವಿ.ಸಜ್ಜನಶೆಟ್ಟರ ಗದಗ ಜಿಲ್ಲೆಯ ಕವಿಗಳು ಕುರಿತು ಉಪನ್ಯಾಸ ನೀಡುತ್ತಾ ಗದಗ ಜಿಲ್ಲೆಯ ಕವಿಗಳಿಂದ ಸಾಹಿತ್ಯ ಕ್ಷೇತ್ರದಲ್ಲಿ ಇತಿಹಾಸ ಸೃಷ್ಟಿಯಾಗಿದ್ಧು ಪ್ರತಿಯೊಂದು ಕಾಲಘಟ್ಟದಲ್ಲಿ ಕವಿಗಳು ವೈಶಿಷ್ಟ್ಯ ಪೂರ್ಣವಾದ ಗ್ರಂಥಗಳನ್ನು ರಚನೆ ಮಾಡುವದರ ಮೂಲಕ ಸಾಹಿತ್ಯದ ಶ್ರೀಮಂತಿಕೆಯನ್ನು ಹೆಚ್ಚಿಸಿದ್ಧಾರೆ ಎಂದು ಅಭಿಪ್ರಾಯಪಟ್ಟರು.
ಮುಖ್ಯ ಅತಿಥಿಗಳಾಗಿ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತಿನ ಗದಗ ಜಿಲ್ಲಾ ಘಟಕದ ಅಧ್ಯಕ್ಷರಾದ ಶ್ರೀಮತಿ ಶೋಭಾ ಡಾ.ಬಸವರಾಜ ಮೇಟಿ ಹಾಗೂ
ಜಯ ಕರ್ನಾಟಕ ಸಂಘಟನೆ ರಾಜ್ಯ ಪ್ರದಾನ ಕಾರ್ಯದರ್ಶಿಗಳಾದ ಶ್ರೀ ಚಂದ್ರಕಾಂತ ಚವ್ಹಾನ ಮತ್ತು ಕರ್ನಾಟಕ ರಾಜ್ಯ ಶ್ರೀ ಪುಟ್ಟರಾಜ ರೈತ ಸಂಘದ ಅಧ್ಯಕ್ಷರಾದ ಶ್ರೀ ಎಂ.ಪಿ.ಮುಳಗುಂದ ಹಾಗೂ ಶ್ರೀ ಅಂದಾನಪ್ಪ ವಿಭೂತಿ ಮತ್ತು ಶ್ರೀ ಫಕೀರೇಶ್ವರ ಶಾಸ್ತ್ರೀಗಳು ಹೀರೆಮಠ ಕಾರ್ಯಕ್ರಮದ ಕುರಿತು ಮೆಚ್ಚುಗೆಯ ಮಾತುಗಳನ್ನು ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ಧ ಗದಗ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ.ರಶ್ಮಿ ಅಂಗಡಿ ಕವಿಗಳು ವಾಸ್ತವಿಕ ನೆಲೆಗಟ್ಟಿನಲ್ಲಿ ಕವಿತೆಗಳನ್ನು ರಚಿಸಬೇಕು ,ಸಮಾಜದ ಜವಾಬ್ದಾರಿ ಹೊತ್ತು ಮುನ್ನಡೆಯ ಬೇಕೆಂದರಲ್ಲದೆ ಪುಟ್ಟರಾಜ ನ ಹುಟ್ಟು ಹಬ್ಬದ ಅಂಗವಾಗಿ ನಡೆದ ಕಾರ್ಯಕ್ರಮ ಮಾದರಿಯಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕವಿಗಳನ್ನು ಸನ್ಮಾನಿಸಲಾಯಿತು.
ಶ್ರೀ ಗೌಡಪ್ಪ ಬೊಮ್ಮಪ್ಪನವರ ಹಾಗೂ ವೀರಯ್ಯ ಹೊಸಮಠ ಅವರಿಂದ ಪ್ರಾರ್ಥನೆಯ ಗೀತೆ ಜರುಗಿತು.
ಶ್ರೀ ಮಲ್ಲೇಶ ಹೂಗಾರ ನಿರೂಪಿಸಿದರು. ಈಶ್ವರ ಲಕ್ಷ್ಮೇಶ್ವರ ವಂದಿಸಿದರು.
