ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಜನಮನ ಗೆದ್ದ ಉಪನ್ಯಾಸಕಿ ಡಾ|| ಸುರೇಖಾ ಹೊರ್ತಿಕರ

ಮಹಾರಾಷ್ಟ್ರ: ಸಾಂಗಲಿ ಜಿಲ್ಲೆ ಜತ್ತ ತಾಲೂಕು ಕನ್ನಡ ಭಾಷಿಕರ ಪ್ರದೇಶ 80% ರಷ್ಟು ಕನ್ನಡವನ್ನು ಮಾತನಾಡುವ ಪ್ರದೇಶ, ಕನ್ನಡ ಭಾಷೆ ಸಾಹಿತ್ಯ ರಾಜಕೀಯ ಸಂಸ್ಕೃತಿ ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ತನ್ನದೇ ಆದಂತಹ ಛಾಪನ್ನು ಮೂಡಿಸಿದೆ. ಸಾಹಿತ್ಯ ಕ್ಷೇತ್ರ ಶಿವಕುಮಾರ ಹಿರೇಮಠ, ಮಲ್ಲಿಕಾರ್ಜುನ ಗುರವ ಶಿವಣ್ಣ ಎಂ. ಹದಿಮೂರ ಚಂದ್ರಶೇಖರ ಕಾರಕಲ್, ಶಂಕರಯ್ಯ ಮಠಪತಿ ಅರವಿಂದ ಕರಡಿ ಪ್ರಕಾಶ ಐಹೊಳೆ ಧರೆಪ್ಪ ಕಟ್ಟಿಮನಿ ಗುರುಪಾದ ಕುಂಬಾರ ಮಲ್ಲಿಕಾರ್ಜುನ ಬಾಲಗಾಂವ ಮೆಹಬೂಬ ಜಿಡ್ಡಿ ಡಾ|| ಕೆ.ಕೆ. ಪತ್ತಾರ ಚೆನ್ನಪ್ಪ ಸುತಾರ ಸುಜಾತಾ ಪಾಟೀಲ,ರವಿ ಶಿವರಾಯಿಗೋಳ ಕಾಶೀನಾಥ ಹಿಟ್ಟಳ್ಳಿ ,
ಕನ್ನಡ ಕಟ್ಟಾಳು….
ಚೆನ್ನಪ್ಪಣ್ಣ ಹೊರ್ತಿ ಕರ, ತಮ್ಮಣ್ಣ ಗೌಡ ರವಿ ಪಾಟೀಲ ಪರಣ್ಣ ಬಗಲಿ ಮಲ್ಲಿಕಾರ್ಜುನ ಬಾಲಗಾಂವ ಡಾ ಕೆ.ಕೆ ಪತ್ತಾರ ಶ್ರೀಶೈಲ ಅವಟಿ ಎಂ.ಬಿ.ಪಾಟೀಲ ರೇವಪ್ಪ ಪಟ್ಟಣಶೆಟ್ಟಿ, ಆರ್.ಜಿ.ಬಿರಾದಾರ ಗುರುಬಸಪ್ಪ ವಾಗ್ಲೋಲಿ ಮಲ್ಲೇಶಪ್ಪ ತೇಲಿ ಪ್ರಲ್ಹಾದ ಕುಂಡಲೆ, ಮುಂತಾದವರು….
ಅದೇ ರೀತಿ ಖಾಸಗಿ ಶಿಕ್ಷಣ ಸಂಸ್ಥೆಗಳು ಕನ್ನಡ ಹಾಗೂ ಕನ್ನಡ ಮಕ್ಕಳ ಪಾಲಿಗೆ ಆಶಾಕಿರಣ ಯೆ೦ದರೆ ತಪ್ಪಗಲಾರದು. ತಾಲೂಕಿನ ಸವೋ೯ದಯ ಶಿಕ್ಷಣ ಸಂಸ್ಥೆ ಪ್ರಮುಖವಾಗಿ ಕಂಡು ಬರುತ್ತದೆ. ಸಂಸ್ಥೆಯ ಆರಂಭಕ್ಕೆ ಶಿಕ್ಷಣ ಮಹರ್ಷಿ ಕಲ್ಲಪ್ಪ ಅಣ್ಣಾ ಹೋರ್ತಿ ಕರಯವರು ಕನ್ನಡ ಮಕ್ಕಳ ಸಲುವಾಗಿ ಕನ್ನಡ ಶಾಲೆ ಪ್ರಾರಂಭಿಸಿ ಶಿಕ್ಷಣ ಕ್ರಾಂತಿ ಮಾಡಿದ ಶ್ರೇಯಸ್ಸು ಇವರಿಗೆ ಸಲ್ಲುತ್ತದೆ ಏಕೆಂದರೆ ಶಿಕ್ಷಣಕ್ಕಾಗಿ ದೂರದ ನಗರಗಳಿಗೆ ಕಲಿಯುವ ಅನಿವಾರ್ಯತೆ ಇರುವುದರಿಂದ ಕಲ್ಲಪ್ಪ ಅಣ್ಣಾ ಹೋರ್ತಿಕರ ಹಾಗೂ ಇವರ ಸಂಗಡಿಗರು ಸೇರಿಕೊಂಡು ತಾಲೂಕಿನ ಅನೇಕ ಹಳ್ಳಿಗಳಲ್ಲಿ ಶಾಲೆ ಪ್ರಾರಂಭಕ್ಕೆ ಆಧ್ಯತೆ ನೀಡಿದ್ದು ಶ್ಲಾಘನೀಯವಾದದು ತಾಲೂಕಿನ ಬಡವರ ಅನಾಥ ಮಕ್ಕಳ ಸಲುವಾಗಿ ಆಶ್ರಮದಲ್ಲಿ ಅನುಕೂಲ ಮಾಡಿ ಕೊಡಲಾಗಿದೆ. ಅನೇಕ ಸಾಮಾಜಿಕ ಕಾರ್ಯದಲ್ಲಿ
ಹೋತಿ೯ಕರ ಮನೆತನ ಮೇಲುಗೈ ಸಾಧಿಸಿದೆ.

ಡಾ|| ಸುರೇಖಾ ಹೊರ್ತಿ ಕರಯವರು ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಶಿಕ್ಷಣ ಗುಣಮಟ್ಟ ಹಾಗೂ ವಿದ್ಯಾರ್ಥಿಗಳ ಪ್ರಗತಿಗಾಗಿ ಹಗಲು ಇರುಳು ಎನ್ನದೇ ಕೆಲಸ ಮಾಡುತ್ತಿರುವ ಡಾI ಸುರೇಖಾ ಹೋರ್ತಿ ಕರಯವರು..
ಸದಸ್ಯರು… ಕನ್ನಡ ಅಭ್ಯಾಸ ಮಂಡಳಿ ಶಿವಾಜಿ ವಿಶ್ವವಿದ್ಯಾಲಯ ಕೋಲ್ಲಾಪೂರ
ಸಾಹಿತ್ಯ ಸೇವೆ… ದಿವಾಣಿಜಿಯವರ ಬದುಕು ಬರಹ ..
ಮಾರ್ಗದರ್ಶಕರು ಡಾ|| ಬಿ. ಬಿ. ಪೂಜಾರಿ..
ಗಡಿ ಕನ್ನಡ ನುಡಿತೋರಣ ಸಂಪಾದನೆ ಕೃತಿ…
ರಾಷ್ಟೀಯ – ಅಂತರರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಪ್ರಬಂಧ ಮಂಡನೆ.
ಜತ್ತ ಕನ್ನಡಿಗರ ಸ್ಥಿತಿಗತಿ,
ಭೈರಪ್ಪನವರ ಕಾದಂಬರಿಗಳಲ್ಲಿ ಸ್ತ್ರೀ ಪಾತ್ರ..
ಕನಕದಾಸರ ಕೀರ್ತನೆಗಳಲ್ಲಿ ಭಕ್ತಿತತ್ವ ನೀತಿ ಭೋಧನೆ,
ಕನ್ನಡ ಜನಪದ ಸಾಹಿತ್ಯದಲ್ಲಿ ಸಂಸ್ಮತಿ ಹೀಗೆ ಹತ್ತು ಹಲವು ಪ್ರಬಂಧ ಮಂಡನೆ ಮಾಡಿದ್ದಾರೆ..
ಡಾII ಸುರೇಖಾ ಹೋರ್ತಿಕರ ಯವರು ತಾಲೂಕಿನ ಉಮರಾಣಿಯಲ್ಲಿ ನಡೆಯುವ ಗಡಿನಾಡು ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಅವರಿಗೆ ತಾಲೂಕಿನ ಮಹಾಜನತೆಯಿಂದ ತುಂಬು ಹೃದಯದ ಅಭಿನಂದನೆಗಳು.

ಲೇಖಕರು : ದಯಾನಂದ ಪಾಟೀಲ, ಅಧ್ಯಕ್ಷರು ಭಾರತೀಯ ಕನ್ನಡ ಸಾಹಿತ್ಯ ಬಳಗ ಮಹಾರಾಷ್ಟ್ರ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ