ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ತೊಂಡಿಹಾಳ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಶನಿವಾರ ಬೆಳಗ್ಗೆ ಚುನಾವಣೆ ನಡೆಯಿತು.
ಅಧ್ಯಕ್ಷ ಸ್ಥಾನಕ್ಕೆ ಕಲ್ಲಪ್ಪ ದಿಂಡೂರು, ಮುದಿಲಿಂಗಪ್ಪ ಬಿಸರಳ್ಳಿ, ನಾಮಪತ್ರ ಸಲ್ಲಿಸಿದರು. ಉಪಾಧ್ಯಕ್ಷ ಸ್ಥಾನಕ್ಕೆ ಹನುಮಂತಪ್ಪ ಬಾವಿ ಒಬ್ಬರೇ ನಾಮಪತ್ರ ಸಲ್ಲಿಸಿದರು. ಕಲ್ಲಪ್ಪ ದಿಂಡೂರು 7ಮತ, ಮುದಿಲಿಂಗಪ್ಪ ಬಿಸರಳ್ಳಿ 6 ಮತ ಪಡೆದರು ಒಂದು ಮತ ಹೆಚ್ಚು ಪಡೆದ ಕಲ್ಲಪ್ಪ ದಿಂಡೂರು ಅವರನ್ನು ಅಧ್ಯಕ್ಷರನ್ನಾಗಿ, ಹನುಮಂತಪ್ಪ ಭಾವಿ ಅವರನ್ನು ಉಪಾಧ್ಯಕ್ಷರನ್ನಾಗಿ, ರಿಟೇನಿಂಗ್ ಅಧಿಕಾರಿ ಗಾಂಧೀಜಿ ಅಡಗೂಡಿ ಘೋಷಿಸಿದರು.
ಶಾಸಕ ಬಸವರಾಜರಾಯ ರೆಡ್ಡಿ ಪ್ರತಿ ಸೊಸೈಟಿಗೆ 60 ಲಕ್ಷ ರೂಪಾಯಿ ನೀಡುವ ಭರವಸೆ ನೀಡಿದ್ದಾರೆ. ಕ್ಷೇತ್ರದ ಸೊಸೈಟಿ ಮಾದರಿಯಾಗಲಿವೆ ಎಂದರು.
ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಬಸವರಾಜ ನಿಡಗುಂದಿ, ನಿರ್ದೇಶಕರಾದ ಬಸವರಾಜ ಮೆಣಸಿಕಾಯಿ , ವಿರೂಪಾಕ್ಷಪ್ಪ ಲಿಂಗಣ್ಣವರ, ಕಸ್ತೂರೆವ್ವ ತಳವಾರ, ಬಸವಣೆಮ್ಮ ಕರೇಗೌಡ್ರು, ಕೆರಿಬಸಪ್ಪ ತಳವಾರ, ನಾಗವ್ವ ಹಾದಿಮನಿ, ಮಲ್ಲಿಕಾರ್ಜುನ ರೆಡ್ಡಿ, ಮಲ್ಲೇಶಪ್ಪ ನಿಡಗುಂದಿ, ವಿರುಪಾಕ್ಷಪ್ಪ ಶ್ರೀಗಿರಿ, ಮುಖಂಡರಾದ ಈಶಯ್ಯ ಸಂಶಿಮಠ, ಯಲ್ಲಪ್ಪ ಹಡಗಲಿ, ಬಸವರಾಜ ಹೆಗಡೆ, ಶಿವರಾಜ ಕಳಸಪ್ಪನವರ, ಶರಣಪ್ಪ ಅಂಗಡಿ ಇನ್ನಿತರರು ಉಪಸ್ಥಿತರಿದ್ದರು.
ವರದಿ : ಬಸವರಾಜ ಕೆ ಕಳಸಪ್ಪನವರ
