ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಡಣಾಪೂರ ಸರಕಾರಿ ಶಾಲೆಯ ಆವರಣದಲ್ಲಿ ನಿರ್ಮಲ ತುಂಗಾ ಭದ್ರಾ ಅಭಿಯಾನ ರಥವನ್ನು ಸ್ವಾಗತಿಸಿ ಜಲ ಜಾಗೃತಿ ಹಾಗೂ ಪಾದಯಾತ್ರೆಯಲ್ಲಿ ಭಾಗಿಯಾಗುವಂತೆ ಪ್ರತಿಜ್ಞೆಯನ್ನು ಮಾಡಲಾಯಿತು.
ಈ ವೇಳೆಯಲ್ಲಿ ಗ್ರಾಂ.ಪಂಚಾಯಿತಿ ಪಿಡಿಒ ಶರಣಮ್ಮ , ಡಣಾಪೂರ ಸರಕಾರಿ ಪ್ರೌಢ ಶಾಲೆ ಹಾಗೂ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕರಾದ ಹನುಮಂತಪ್ಪ ಚವ್ಹಾಣ, ವೆಂಕಟೇಶ ಗ್ರಾಮದ ಯುವಕರಾದ ವೀರೇಶಗೌಡ ರಾಘವೇಂದ್ರ ಶಾಲಾ ಶಿಕ್ಷಕರಾದ ಚಂದ್ರಶೇಖರ ಜಾಪಳ , ಅಯ್ಯನಗೌಡ , ಚನ್ನಬಸಪ್ಪ , ಮಾಲತೇಶ ಗ್ರಾಮದ ಹಸಿರು ಬಳಗ ಸದಸ್ಯರಾದ ರಾಘವೇಂದ್ರ, ಹನುಮೇಶ ಭಾವಿಕಟ್ಟಿ ,ಮಂಜುನಾಥ , ರವಿಕುಮಾರ , ಮಲ್ಲಮ್ಮ ಹಾಗೂ ಶಾಲೆಯ ಶಿಕ್ಷಕರು , ಶಿಕ್ಷಕಿಯರು ಶಾಲಾ ಮಕ್ಕಳು ಭಾಗಿ ಇದ್ದರು.
