
ಕೊಪ್ಪಳ ನಗರದ ಪ್ರಮುಖ ಮಹಿಳಾ ಸಾಹಿತಿ, ಕವಿಯತ್ರಿ, ಸಾವಿತ್ರಿ ಮುಜಮದಾರ್ ಅವರ ಮುಜುಂದಾರ್ ಫೌಂಡೇಶನ್, ವತಿಯಿಂದ ,ಅವರ ನಿವಾಸದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಸಾಹಿತಿ ಎ.ಎಂ.ಮದರಿ ಅವರು ಬರೆದ ಆತ್ಮಕಥೆ ಗೊಂದಲಿಗ್ಯಾ ಪುಸ್ತಕದ ಅವಲೋಕನ ಕಾರ್ಯಕ್ರಮ
ಜರುಗಿತು. ಆರಂಭದಲ್ಲಿ ಸಾವಿತ್ರಿ ಮುಜಮದಾರ್ ಸಾಹಿತ್ಯಾಸಕ್ತರನ್ನು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು,
ಕೊಪ್ಪಳದ ಹೋರಾಟಗಾರ, ಸಮುದಾಯದ ಕಲಾವಿದ, ಅಂದಪ್ಪ ಬೆಣಕಲ್ ಗೊಂದಲಿಗ್ಯಾ, ಆತ್ಮಕಥೆಯ ಓದುವಿಕೆಯಿಂದ ಸಾಹಿತ್ಯಾಸಕ್ತರ ಗಮನ ಸೆಳೆದರು, ಆತ್ಮಕಥೆಯು ಸರಳ ನಿರೂಪಣೆಯಿಂದ ಸಾಹಿತ್ಯಾಸಕ್ತರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ ಎಂದರು.
ಹಿರಿಯ ಬಂಡಾಯ ಸಾಹಿತಿ ಪ್ರೊ.ಅಲ್ಲಮ ಪ್ರಭು ಬೆಟ್ಟದೂರು ಅವರು ಮದರಿಯವರ ಕೃತಿ ಬೇರೆ ಭಾಷೆಗಳಿಗೂ ಅನುವಾದಗೊಳ್ಳಬೇಕು,ಆ ಸಾಮರ್ಥ್ಯ ಅವರ ಕೃತಿಗಿದೆ ಎಂದು ಹೇಳಿದರು.
ನಿವೃತ್ತ ಶಿಕ್ಷಕ ಗವಿಸಿದ್ದಪ್ಪ ಕೊಪ್ಪಳ ಅವರು ಮಾತನಾಡುತ್ತಾ ಮದರಿಯವರರೊಂದಿಗಿನ ತಮ್ಮ ಒಡನಾಟ ನೆನಪಿಸಿಕೊಂಡು, ಗೊಂದಲಿಗ್ಯಾ,ಕೃತಿಯು ಸಮಗ್ರವಾಗಿ ಸಾಮಾಜಿಕ ವಾತಾವರಣದ ಚಿತ್ರಣ ನೀಡುವಲ್ಲಿ ಯಶಸ್ವಿಯಾಗಿದೆ ಎಂದರು.
ಶ್ರೀಮತಿ ಪುಷ್ಪಲತಾ ಯೋಳಭಾವಿ ಅವರು ಗೊಂದಲಿಗ ಸಮಾಜದವರು
ಇನ್ನೂ ಸಾಕಷ್ಟು ಜಾಗೃತಿಯಾಗಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಉಪಸ್ಥಿತಿ ಇದ್ದ ಶಿವಪ್ರಸಾದ್ ಹಾದಿಮನಿ ಗೊಂದಲಿಗ್ಯಾ ಕೃತಿಯ ಭಾಷೆ ಮತ್ತು ಕೃತಿಕಾರರ ನಿರೂಪಣಾ ಶೈಲಿ, ಓದುಗರನ್ನು ಆಕರ್ಷಿಸುತ್ತದೆ,ಎಂದು ಮಾತನಾಡಿದರು.
ಕನ್ನಡ ಉಪನ್ಯಾಸಕ,ಡಾ.ಮಹಾಂತೇಶ ನೆಲಾಋಣಿ,ಅವರೂ ಗೊಂದಲಿಗ್ಯಾ ಕೃತಿಯ ಬಗ್ಗೆ
ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ಎ.ಎಂ.ಮದರಿ ಯವರು ತಮ್ಮ ಜೀವನದ ಅನೇಕ ಘಟನೆಗಳನ್ನು ನೆನೆದು, ತಾನು ಈ ಮಟ್ಟಕ್ಕೆ ಬಂದಿರುವುದಕ್ಕೆ ಅವರೆಲ್ಲರಿಗೂ ಧನ್ಯವಾದಗಳನ್ನು ಹೇಳುತ್ತೇನೆ ಎಂದರು.
ಕಾರ್ಯಕ್ರಮದಲ್ಲಿ ಕೃತಿಕಾರರನ್ನು,ಕೃತಿ ಅವಲೋಕನ ಮಾಡಿ, ಮಾತನಾಡಿದ ಅಂದಪ್ಪ ಬೆಣಕಲ್ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಕೊಪ್ಪಳ ವಿ. ವಿ. ಯ ಕನ್ನಡ ಪ್ರಾಧ್ಯಾಪಕರಾದ ಡಾ.ಪ್ರವೀಣ ಪೋಲಿಸ್ ಪಾಟೀಲ,ಡಾ.ಪಾರ್ವತಿ ಕನಕಗಿರಿ, ನ್ಯಾಯವಾದಿಗಳು, ಸಾಹಿತಿಗಳು ಆದ ವಿಜಯ ಅಮೃತರಾಜ್ ಇತರರು ಉಪಸ್ಥಿತರಿದ್ದರು.
