ಬಾಗಲಕೋಟೆ/ ಬನಹಟ್ಟಿ : ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸದಾಶಿವ ನಗರ ಬನಹಟ್ಟಿ ಶಾಲೆಯ ಶಿಕ್ಷಕ ಚಿರಂಜೀವಿ ರೋಡಕರ್ ಅವರನ್ನು ಕರ್ನಾಟಕ ಶಿಕ್ಷಕರ ಸಂಘಗಳ ಪರಿಷತ್ತು ಧಾರವಾಡ (ರಿ.), ಮತ್ತು ಕಲ್ಯಾಣ ಕರ್ನಾಟಕ ಪ್ರೌಢ ಶಾಲಾ ಶಿಕ್ಷಕರ ಸಂಘ (ರಿ. ) ಬೀದರ ಸಂಘಗಳು ಸಂಯುಕ್ತಾಶ್ರಯದಲ್ಲಿ ಅಕ್ಷರದವ್ವ ಸಾವಿತ್ರಿ ಬಾಯಿ ಪುಲೆ, ಶೇಕ್ ಫಾತಿಮಾ ಮತ್ತು ರಮಾಬಾಯಿ ಅಂಬೇಡ್ಕರ್ ಜಯಂತಿಯ ಅಂಗವಾಗಿ ಕೊಡಮಾಡುವ ‘ರಾಜ್ಯಮಟ್ಟದ ಸಾವಿತ್ರಿಬಾಯಿ ಪುಲೆ ಶಿಕ್ಷಣ ಸೇವಾ ರತ್ನ ‘ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಕಲ್ಯಾಣ ಕರ್ನಾಟಕ ಪ್ರೌಢ ಶಾಲಾ ಶಿಕ್ಷಕರ ಸಂಘ ಬೀದರನ ಅಧ್ಯಕ್ಷರಾದ ಶ್ರೀ ಪಾಂಡುರಂಗ ಬೆಲ್ದಾರ ಮತ್ತು ಕರ್ನಾಟಕ ಶಿಕ್ಷಕರ ಸಂಘಗಳ ಪರಿಷತ್ ರಾಜ್ಯಾಧ್ಯಕ್ಷರಾದ ಶ್ರೀ ಸಂಗಮೇಶ ಖನ್ನಿ ನಾಯ್ಕರ್ ಅವರು 2025ರ ಜನವರಿ 18 ರಂದು ಬೀದರನ ಪೂಜ್ಯ ಚನ್ನಬಸವ ಪಟ್ಟದೇವರು ರಂಗಮಂದಿರದಲ್ಲಿ ನಡೆಯುವ ಪ್ರಶಸ್ತಿ ಪುರಸ್ಕಾರ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ತಿಳಿಸಿರುತ್ತಾರೆ.
