ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ತಾಯಕನಹಳ್ಳಿ ಗ್ರಾಮದಲ್ಲಿರುವ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ಶಾಲೆಯಲ್ಲಿ 2024 – 25 ನೇ ಸಾಲಿನ ಅಲ್ಪ ಸಂಖ್ಯಾತರು ಕಲ್ಯಾಣ ಇಲಾಖೆ ಅನುಷ್ಠಾನ ಇಲಾಖೆ ಕರ್ನಾಟಕ ಗೃಹ ಮಂಡಳಿಯ ಅನುದಾನ 650.00 ಲಕ್ಷ ರೂ.ಗಳು ಲಕ್ಷ ವೆಚ್ಚದಲ್ಲಿ ಜಿ+4 ವಿದ್ಯಾರ್ಥಿ ನಿಲಯದ ಕಟ್ಟಡ ಕಾಮಗಾರಿಗೆ ಬುಧವಾರ ಶಂಕು ಸ್ಥಾಪನೆ ನೆರವೇರಿಸಲಾಯಿತು.ಈ ಸಂದರ್ಭದಲ್ಲಿ
ಕೂಡ್ಲಿಗಿ ತಾಲೂಕಿನ ಜನಪ್ರಿಯ ಶಾಸಕರಾದ ಡಾ. ಎನ್. ಟಿ. ಶ್ರೀನಿವಾಸ್ ರವರು ಮಾತನಾಡುತ್ತಾ ಕೂಡ್ಲಿಗಿ ಗ್ರಾಮೀಣ ಭಾಗದ ಅತೀ ಹೆಚ್ಚು ಹಿಂದುಳಿದ ಪ್ರದೇಶವಾಗಿರುವುದರಿಂದ ವಸತಿ ನಿಲಯಗಳಲ್ಲಿ ಬಹಳಷ್ಟು ಮಂದಿ ಬಡ ಮಕ್ಕಳು ಕಲಿತಿದ್ದು ವಿದ್ಯಾರ್ಥಿಗಳಿಗೆ ಹಾಗೂ ಅವರ ನಾನಾ ಅಭಿವೃದ್ಧಿ ಕಾರ್ಯಗಳಿಗೆ ನಾನು ಗಮನ ಕೊಡುತ್ತೇನೆ ಹಾಗೂ ಈ ಕೂಡ್ಲಿಗಿ ತಾಲೂಕು ಅತಿ ಹೆಚ್ಚು ಹಿಂದುಳಿದ ಪ್ರದೇಶವಾಗಿರುವದರಿಂದ ಮುಖ್ಯಮಂತ್ರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದಂತಹ ಬಿ. ಝೆಡ್. ಜಮೀರ್ ಖಾನ್ ರವರು ಸಹ ವಿದ್ಯಾರ್ಥಿ ನಿಲಯ ಕಟ್ಟಡಕ್ಕೆ ಹೆಚ್ಚಿನದಾಗಿ ಸರ್ಕಾರದಿಂದ ಹಾಗೂ ನಮ್ಮ ಸಹಕಾರದಿಂದ ಅನುದಾನವನ್ನು ನೀಡುತ್ತೇವೆ ಎಂದು ಭರವಸೆಯನ್ನು ಸಹ ನೀಡಿದ್ದಾರೆ, ಕೂಡ್ಲಿಗಿ ತಾಲೂಕು ತುಂಬಾ ಹಿಂದುಳಿದ ಪ್ರದೇಶವಾಗಿರುವುದರಿಂದ ನಮ್ಮ ತಾಲೂಕಿನಲ್ಲಿ ಶೈಕ್ಷಣಿಕವಾಗಿ ಆರ್ಥಿಕವಾಗಿ ರಾಜಕೀಯವಾಗಿ ಸಾಮಾಜಿಕವಾಗಿ ಪ್ರತಿಯೊಬ್ಬ ವ್ಯಕ್ತಿಯೂ ಅದಕ್ಕಿಂತ ಹೆಚ್ಚಿನದಾಗಿ ಶಿಕ್ಷಣಕ್ಕಾಗಿ ತುಂಬಾ ಪ್ರೋತ್ಸಾಹ ಕೊಡುತ್ತೇನೆ ಅವರಿಗಾಗಿ ಹಗಲಿರಳು ದುಡಿಯುತ್ತೇನೆ ಹಾಗೂ ಶಿಕ್ಷಣವಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮಕ್ಕಳಿಗೆ ಶಿಕ್ಷಣದಿಂದ ವಂಚಿತರಾದವರಿಗೆ ದೊರಕುವ ಸೌಲಭ್ಯಗಳು ಕೊರತೆಗಳು ಉಂಟಾದರೆ ನಾನು ಸಹಿಸುವುದಿಲ್ಲ ಯಾವುದೇ ಸಮಸ್ಯೆ ಆಗಿರಲಿ ಶೀಘ್ರವೇ ಅಲ್ಲಿನ ಸಂಬಂಧಪಟ್ಟವರಿಗೆ ಮಾಹಿತಿ ಕೊಟ್ಟು ಪರಿಹಾರವನ್ನು ಸೂಚಿಸಬೇಕು ಎಂದರು.
ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಪದ್ಮನಾಭ ಕರಣಂ, ಜಿಲ್ಲಾ ಅಲ್ಪಸಂಖ್ಯಾತರ ಇಲಾಖೆ ಅಧಿಕಾರಿ ಗುಡ್ಡಪ್ಪ, ಕರ್ನಾಟಕ ಗೃಹ ಮಂಡಳಿ ಸಿಬ್ಬಂದಿ ವಸಂತಕುಮಾರಿ, ಹುಡೇಂ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಹಾಗೂ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಭೂದಾನಿ ಗನಿಸಾಬ್ ಪತ್ನಿ , ನಜೀಬ್ ಸಾಬ್, ನೂರೆಲ್ಲಾ ಭಾಷಾ, ಜುಮ್ಮೋಬನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಾಕಮ್ಮ,ಕೆ ಓಬಣ್ಣ, ಹೊಡೆಂ ಗ್ರಾಮ ಪಂಚಾಯ್ತಿ ಸದಸ್ಯರಾದ ಶಶಿಕಲಾ ಜಯಣ್ಣ, ಕಾಂಗ್ರೆಸ್ ಮುಖಂಡರಾದ ಜಿ ಓಬಣ್ಣ, ಅಲ್ಪಸಂಖ್ಯಾತರ ಮೊರಾರ್ಜಿ ಶಾಲೆಯ ಪ್ರಾಂಶುಪಾಲರು ತಿಪ್ಪೇಸ್ವಾಮಿ ತಾಯಕನಹಳ್ಳಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ರಂಗಪ್ಪ, ಊರಿನ ಮುಖಂಡರು, ಸಾರ್ವಜನಿಕರು,ವಿದ್ಯಾರ್ಥಿಗಳು ಇದ್ದರು.
ವರದಿ : ಗುರುರಾಜ್ ಎಲ್, ಕಲ್ಲಹಳ್ಳಿ ಟಿ
