ಉಮರಾಣಿಯ ಪೂಜ್ಯ ಮಾತಾಜಿ ಅಮ್ಮ
ಮುನ್ನಡೆಸುತಿಹರು ಜ್ಞಾನಯೋಗಾಶ್ರಮ
ಅದುವೇ ಅಕ್ಕಮಹಾದೇವಿಯ ಪುಣ್ಯಾಶ್ರಮ
ಭಕ್ತರ ಪಾಲಿನ ಭಕ್ತಿ ಧಾಮ
ಭಕ್ತಿ ಎಂಬ ಬೀಜವ ಬಿತ್ತಿ
ಅಜ್ಞಾನವೆಂಬ ಕಳೆಯನು ತೆಗೆದು
ಸುಜ್ಞಾನವೆಂಬ ಬೆಳೆಯನು ಬೆಳೆದು
ಜ್ಞಾನದ ಸುಧೆ ಹರಿಸುತಿಹರು
ಬಂಗಾರದಂತ ಮನಸ್ಸು ನಿಮ್ಮದು
ಮುಗ್ಧ ಮಗುವಿನಂತ ಭಾವ ತಮ್ಮದು
ದಿನನಿತ್ಯ ನೀಡುತಿರುವಿರಿ ಪ್ರವಚನ
ಅದುವೇ ನಿಮ್ಮ ಆಶೀರ್ವಚನ
ನಿಮ್ಮನ್ನು ನೋಡಿದಾಗ
ಮೂಡುವುದು ಭಕ್ತಿಯ ಭಾವ
ತಮ್ಮನ್ನು ಸ್ಮರಿಸಿದಾಗ
ಮನಸ್ಸಾಗುವುದು ಮಲ್ಲಿಗೆ ಹೂವ
ಮುಖದಲ್ಲಿಯ ಆ ನಿಮ್ಮ ಮಂದಹಾಸ
ಮನಸ್ಸಿಗೆ ನೀಡುತಿಹುದು ಹುಮ್ಮಸ್ಸು
ತಮ್ಮ ಉತ್ಸಾಹದ ಲವ ಲವಿಕೆ
ನೋಡಿದಾಗ ಚಿಗುರೊಡೆಯಿತು ಭಕ್ತಿಯ ಮೊಳಕೆ
ತಾವು ಅಕ್ಕಮಹಾದೇವಿಯ ಪ್ರತಿರೂಪ
ಉಮರಾಣಿಯ ಭಾಗ್ಯದ ದೀಪ
ಭಕ್ತರ ಪಾಲಿನ ಆಶ್ರಯದಾತೆ
ನೊಂದ ಜನರಿಗೆ ಮಮತೆಯ ಮಾತೆ
ಮನಸ್ಸಿಗೆ ತೋಚಿದ್ದನ್ನು ಗೀಚಿರುವೆ
ತಪ್ಪಿದಲ್ಲಿ ತಮ್ಮ ಕ್ಷಮೆ ಕೋರುವೆ
ನಿಮ್ಮ ಪಾದ ಚರಣಗಳಿಗೆ
ಈ ನನ್ನ ಕವನ ಅರ್ಪಿಸುವೆ
✍️ರಚನೆ -ಶ್ರೀ ರಾಜೇಂದ್ರ.ಎಂ.ಹಿರೇಮಠ
ಶಿಕ್ಷಕರು, ಉಟಗಿ
ತಾ – ಜತ್ತ, ಜಿ – ಸಾಂಗಲಿ
ಮಹಾರಾಷ್ಟ್ರ.
